ಮಂಗಳೂರು: ಟಾಟಾ ಅಸೆಟ್ ಮ್ಯಾನೇಜ್‍ಮೆಂಟ್, ಇಂದು ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆಗೆ ಅನುವು ಮಾಡಿಕೊಡುವ ನಾಲ್ಕು ಹೊಸ ಸ್ಕೀಮ್‍ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 2 ಎಕ್ಸ್‍ಚೇಂಜ್ ಟ್ರೇಡೆಡ್ ಫಂಡ್‍ಗಳು (ಇಟಿಎಫ್‍ಗಳು) ಮತ್ತು 2 ಫಂಡ್ ಆಫ್ ಫಂಡ್ (ಎಫ್‍ಒಎಫ್) ಆಗಿರುತ್ತವೆ.
ಟಾಟಾ ಗೋಲ್ಡ್ ಇಟಿಎಫ್ ಒಂದು ಓಪನ್ ಎಂಡೆಡ್ ವಿನಿಮಯ ವಹಿವಾಟಿನ ಫಂಡ್ ಆಗಿದ್ದು, ಇದು ದೇಶೀಯ ಚಿನ್ನದ ಬೆಲೆಯನ್ನು ಪ್ರತಿರೂಪಿಸುವ ಜತೆಗೆ ದೇಶೀಯ ಚಿನ್ನದ ಬೆಲೆಯನ್ನು ಟ್ರ್ಯಾಕ್ ಮಾಡುತ್ತದೆ. ಟಾಟಾ ಗೋಲ್ಡ್ ಇಟಿಎಫ್ ಫಂಡ್ ಆಫ್ ಫಂಡ್, ಟಾಟಾ ಗೋಲ್ಡ್ ಎಕ್ಸ್‍ಚೇಂಜ್ ಟ್ರೇಡೆಡ್ ಫಂಡ್‍ನಲ್ಲಿ ಹೂಡಿಕೆ ಮಾಡುವ ನಿಧಿ ಯೋಜನೆಯ ಮುಕ್ತ ನಿಧಿಯಾಗಿದೆ. ಇವು ಕ್ರಮವಾಗಿ ಜನವರಿ 9 ಹಾಗೂ 16ವರೆಗೆ ಮುಕ್ತವಾಗಿರುತ್ತದೆ ಎಂದು ವ್ಯವಹಾರ ವಿಭಾಗದ ಮುಖ್ಯಸ್ಥ ಬಿಸಿನೆಸ್ ಹೆಡ್ ಆನಂದ್ ವರದರಾಜನ್ ಹೇಳಿದ್ದಾರೆ.
ಟಾಟಾ ಸಿಲ್ವರ್ ಇಟಿಎಫ್ ಒಂದು ಓಪನ್ ಎಂಡೆಡ್ ವಿನಿಮಯ ವಹಿವಾಟಿನ ಫಂಡ್ ಆಗಿದ್ದು, ಬೆಳ್ಳಿಯ ದೇಶೀಯ ಬೆಲೆಯನ್ನು ಪ್ರತಿರೂಪಿಸುವ ಜತೆಗೆ ದೇಶೀಯ ಬೆಳ್ಳಿ ಬೆಲೆಯನ್ನು ಟ್ರ್ಯಾಕ್ ಮಾಡುತ್ತದೆ. ಟಾಟಾ ಸಿಲ್ವರ್ ಇಟಿಎಫ್ ಫಂಡ್ ಆಫ್ ಫಂಡ್ ಟಾಟಾ ಸಿಲ್ವರ್ ಎಕ್ಸ್‍ಚೇಂಜ್ ಟ್ರೇಡೆಡ್ ಫಂಡ್‍ನಲ್ಲಿ ಹೂಡಿಕೆ ಮಾಡುವ ಫಂಡ್ ಯೋಜನೆಯ ಮುಕ್ತ ನಿಧಿಯಾಗಿದೆ. ಇವು ಕ್ರಮವಾಗಿ ಜನವರಿ 9 ಹಾಗೂ 16ವರೆಗೆ ಮುಕ್ತವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುವುದು ನಿಮ್ಮ ಉತ್ಪನ್ನ ಶ್ರೇಣಿಯ ಮತ್ತು ದೀರ್ಘಾವಧಿಯ ಸ್ಥಿರತೆಯ ವೈವಿಧ್ಯಕ್ಕಾಗಿ ಪ್ರಬಲವಾದ ತಂತ್ರವನ್ನು ನೀಡುವ ಗುರಿಯನ್ನು ಹೊಂದಿದೆ. ಕರೆನ್ಸಿ ಅಪಮೌಲ್ಯೀಕರಣ, ಹಣದುಬ್ಬರ ಮತ್ತು ಮಾರುಕಟ್ಟೆಯ ಅನಿಶ್ಚಿತತೆಗಳ ವಿರುದ್ಧದ ಅಸ್ತ್ರವಾಗಿ ಚಿನ್ನ ಕಾಣಿಸಿಕೊಳ್ಳುತ್ತದೆ. ಕೊರತೆ ಮತ್ತು ಅದರ ಐತಿಹಾಸಿಕ ಸುರಕ್ಷಿತ ಹೂಡಿಕೆಯ ಗಮ್ಯ ಸ್ಥಾನ ಎಂಬ ಕಾರಣಕ್ಕೆ ಇದು ಸಂಪತ್ತನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಲು ನೆರವು ನೀಡುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ