ಮಂಗಳೂರು: ದೇಶದ ಸಣ್ಣ ವಾಣಿಜ್ಯ ವಾಹನ (ಎಸ್‍ಸಿವಿಗಳು) ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಇಂದು ಡೀಸೆಲ್ ಮತ್ತು ಸಿಎನ್‍ಜಿ ಅವಳಿ ರೂಪಾಂತರದಲ್ಲಿ ಲಭ್ಯವಿರುವ ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಸರಣಿಯನ್ನು ಮಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸುಪ್ರೊ ಪ್ಲಾಟ್‍ಫಾರ್ಮ್‍ನ ಯಶಸ್ಸಿನ ಆಧಾರದ ಮೇಲೆ ಪ್ರಾಫಿಟ್ ಟ್ರಕ್ ಎಕ್ಸೆಲ್ ಸರಣಿಯನ್ನು ಅದರ ಉನ್ನತ ಶಕ್ತಿ, ಅಸಾಧಾರಣ ಶೈಲಿ, ಸಾಟಿಯಿಲ್ಲದ ಸುರಕ್ಷತೆ ಮತ್ತು ಅತ್ಯುನ್ನತ ಸೌಕರ್ಯಗಳೊಂದಿಗೆ ಕೊನೆಯ ಮೈಲಿ ಸಂಪರ್ಕವನ್ನು ಮರು ವ್ಯಾಖ್ಯಾನಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಸರಣಿಯು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದು, ಡೀಸೆಲ್ ವೇರಿಯಂಟ್ ಬೆಲೆ ರೂ. 6.61 ಲಕ್ಷ ಮತ್ತು ಸಿಎನ್‍ಜಿ ಡ್ಯುಯೋ ವೇರಿಯಂಟ್ ಬೆಲೆ ರೂ. 6.93 ಲಕ್ಷ ಆಗಿರುತ್ತದೆ ಎಂದು ಸಿಇಓ ನಳಿನಿಕಾಂತ್ ಗೊಲ್ಲಗುಂಟಾ ಹೇಳಿದ್ದಾರೆ.
ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ತನ್ನ ಪ್ರಮುಖ ವೈಶಿಷ್ಟ್ಯಗಳೊಂದಿಗೆ ಎದ್ದು ಕಾಣುತ್ತದೆ. ಮೈಲೇಜ್, ಗಟ್ಟಿತನ, ಒರಟುತನ ಮತ್ತು ಬಹುರೀತಿಯ ಲೋಡ್‍ಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮಥ್ರ್ಯವನ್ನು ಹೊಂದಿದೆ. ಸುಪ್ರೊ ಡೀಸೆಲ್ 900 ಕೆ.ಜಿ ಮತ್ತು ಸಿಎನ್‍ಜಿ 750 ಕೆ.ಜಿ. ಪೇಲೋಡ್ ಸಾಮಥ್ರ್ಯ ಹೊಂದಿದೆ. ವಿಶೇಷವಾಗಿ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ವಲಯದಲ್ಲಿ ವಾಲ್ಯೂಮೆಟ್ರಿಕ್ ಸರಕುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ