ಮಂಗಳೂರು: ದಕ್ಷಿಣ ಕನ್ನಡದ ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 12 ರಿಂದ 16 ವರೆಗೆ ನಡೆಯಲಿರುವ ಕುಂಭ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಜ.13 ನೇ ಶನಿವಾರ ದಂದು ಶ್ರೀ ದೇವರ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್, ಕಲ್ಪಾವಿ ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ (ರಿ.) ಮಂಗಳೂರು ಅಧ್ಯಕ್ಷ ಮಯೂರ್ ಉಳ್ಳಾಲ್, ಸೇವಾ ಟ್ರಸ್ಟ್ ಅಧ್ಯಕ್ಷರು ಬಿ. ಪ್ರೇಮಾನಂದ ಕುಲಾಲ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಮೋದರ ಎ, ಸೇವಾ ಸಮಿತಿ ಅಧ್ಯಕ್ಷ ಕೆ. ಸುಂದರ ಕುಲಾಲ್, ಮಾತೃ ಮಂಡಳಿ ಅಧ್ಯಕ್ಷ ಗೀತಾ ಮನೋಜ್, ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಸುರೇಶ್ ಕುಲಾಲ್ ಮಂಗಳ ದೇವಿ, ಟ್ರಸ್ಟಿನ ಕಾರ್ಯದರ್ಶಿ ಎಂ.ಪಿ. ಬಂಗೇರ, ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ರಾಧಾಕೃಷ್ಣ ಕುಲಾಲ್, ಉರ್ವ ಕುಲಾಲ ಸಂಘದ ಅಧ್ಯಕ್ಷ ಆನಂದ ಕುಲಾಲ್ ಊರ್ವ, ಕುಲಾಲ ಸಂಘ ಕುಳಾಯಿಯ ಅಧ್ಯಕ್ಷ ಮೋಹನ್ ಐ ಮೂಲ್ಯ, ಕ್ಷೇತ್ರದ ವಿಶ್ವಸ್ಥರು ಸದಸ್ಯರು, ಕುಲಾಲರ ಮಾತೃ ಸಂಘ ಪದಾಧಿಕಾರಿಗಳು ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀ ಕ್ಷೇತ್ರವು ಕಳೆದ ವರ್ಷ ಸಂಪೂರ್ಣ ಜೀರ್ಣದ್ಧಾರಗೊಂಡು ವಿಜೃಂಭಣೆಯಿಂದ ಬ್ರಹ್ಮಕಲಸ ನಡೆದು ಕುಲಾಲ ಸಮಾಜವನ್ನು ಕುಲಾಲ ಸಮಾಜಕ್ಕೆ ಸಮರ್ಪಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ