ಕನ್ನಡ ಪದ ಬಳಕೆಗೆ ಬೇಕಾಗಿರುವುದು ಸಂಬಂಧಗಳ ಸಂಸ್ಕಾರ

Upayuktha
0



ನ್ನಡ ಪದ ಬಳಕೆಗೆ ಬಹುಮುಖ್ಯವಾಗಿ ಬೇಕಾಗಿರುವುದು ಸಂಬಂಧಗಳ ಸಂಸ್ಕಾರಗಳ ಪಾಠ. ಈ ಕನ್ನಡ ಪದ ಪ್ರಯೇೂಗ ಜಿಜ್ಞಾಸೆ ಹುಟ್ಟಿ ಬರಲು ಮುಖ್ಯ ಕಾರಣ ನಮ್ಮ ರಾಜಕಾರಣಿಗಳು ಆಗಾಗ ಬಳಸುತ್ತಿರುವ ಪದ ಪುಂಜಗಳ ಪ್ರಯೇೂಗ. ನಮ್ಮನ್ನು ಆಳುವ ಉನ್ನತ ಸ್ಥಾನ ಮಾನದಲ್ಲಿ ಕೂತವರ ಬಾಯಿಯಿಂದ  ಯಾವಾಗ ಬಹು ವಚನ ಬರುತ್ತದೊ ಏಕ ವಚನ ಬಳಸುತ್ತದೊ ಗೊತ್ತೆ ಆಗಲ್ಲ.. ಇತ್ತೀಚೆಗೆ ಸರ್ಕಾರದ ಮುಖ್ಯಸ್ಥರು ಶಾಸಕರು ಸಂಸದರು ಬಳಸಿದ ವಚನಾಧರಿತ ಪದ ಪ್ರಯೇೂಗಗಳು ಈ ತರ್ಕಕ್ಕೆ ದಾರಿ ಮಾಡಿಕೊಟ್ಟಿದೆ.



ಆಕೆ, ಈಕೆ, ಅವಳು, ಇವಳು, ಇವನು,  ಅವನು, ಅವರು, ಇವರು..ಇತ್ಯಾದಿ. ಇದು ಎಲ್ಲಿ ಯಾವಾಗ ಯಾರಿಗೆ ಬಳಸಬೇಕು ಅನ್ನುವ ಸಮಸ್ಯೆ ಹಲವರಿಗೆ ಹಲವು ರೀತಿಯಲ್ಲಿ ಕಾಡುವುದು ಸಹಜ. ಉದಾ:ಅತಿ ಆತ್ಮೀಯರನ್ನು ಸ್ನೇಹಿತರನ್ನು ಪ್ರಾಯದಲ್ಲಿ ಕಿರಿಯರನ್ನು ಏಕ ವಚನದ ರೂಪಗಳಾದ ಆಕೆ ಈಕೆ ಅವಳು ಇವಳು ಎಂದು ಸಂಬೇೂಧಿಸುವುದು ವಾಡಿಕೆ. ಅದೇ ದೊಡ್ಡ ಹುದ್ದೆಯಲ್ಲಿ ಇದ್ದವರನ್ನು ಸ್ನೇಹಿತರು ಪ್ರಾಯವನ್ನು ಪರಿಗಣಿಸದೆ ಬಹು ವಚನ ರೂಪಗಳಾದ ಅವರು ಇವರು ಎಂದೇ ಕರೆಯುವುದು ಸರ್ವೇಸಾಮಾನ್ಯ. ಅದೇ ಅವರು ಸಂಖ್ಯೆಯಲ್ಲಿ  ಒಬ್ಬರಿದ್ದರು ಬಹುವಚನ ಇಬ್ಬರಿದ್ದರು ಬಹು ವಚನವೇ. ಆದರೆ ಈ ಸಮಸ್ಯೆ ಇಂಗ್ಲೀಷ್ ನಲ್ಲಿ  ಇಲ್ಲ. 



ಹಿರಿಯರಿರಲಿ ಕಿರಿಯರಿಯಲಿ, ರಾಷ್ಟ್ರಪತಿ ಇರಲಿ ಪ್ರಧಾನಿ ಇರಲಿ ಮುಖ್ಯ ಮಂತ್ರಿ ಇರಲಿ ಎಲ್ಲರೂ "He..ಹೀನೇ She..ಸೀನೇ"..ಸಂಖ್ಯೆ ಜಾಸ್ತಿ ಇದ್ದರೆ ಮಾತ್ರ " They".. ಎಷ್ಟು ಸುಲಭ ನೇೂಡಿ. ಹಾಗಾಗಿ ಇಂಗ್ಲಿಷ್  ಮಾತನಾಡುವ ವಗ೯ದವರಿಗೆ ಯಾವುದೇ ಸಂಬಂಧಗಳ ಸಂಸ್ಕಾರವೇ ಬೇಡ. ಅದು ಕನ್ನಡದಲ್ಲಿ ಹಾಗಲ್ಲ. ವ್ಯಕ್ತಿಗಳ ಸ್ಥಾನಮಾನ ಸಂಬಂಧ ಅಂತಸ್ತು, ಗಿಂತಸ್ತು ನೇೂಡಿಯೇ ವಚನಾಮೃತ ಪ್ರಯೇೂಗಿಸ ಬೇಕಾದ ಅನಿವಾರ್ಯತೆ ಇದೆ.



ಏಕ ವಚನ, ಬಹು ವಚನ ಪದಗಳಿಗೂ ಒಂದು ಆತ್ಮೀಯ ಸಂಬಂಧಗಳಿವೆ. ಉದಾ:ತಾಯಿ, ದೇವರು ಮುಂತಾದ ಕಡೆ ಪ್ರೀತಿ ವಿಶ್ವಾಸ ಗೌರವ ಉಕ್ಕಿ ಬರುವಲ್ಲಿ.."ನೀನು"ಅನ್ನುವ ಪದ ಬಳಕೆ  ಹೃದಯಕ್ಕೆ ಹೆಚ್ಚು ಹತ್ತಿರವಾಗಿ ಬಿಡುತ್ತದೆ.. ಆದರೆ ತಂದೆಯ ಕಡೆಗೆ ಬಂದಾಗ ಬಹು ವಚನವಾದ ನೀವು ಅನ್ನುವ ಸಂಬೇೂಧನಾ ಪದ ಪ್ರಯೇೂಗವನ್ನು ಹೆಚ್ಚಿನ ಮಂದಿ ಗೌರವಯುತವಾಗಿ ಸ್ವೀಕರಿಸಿ ಬಿಟ್ಟಿದ್ದಾರೆ. ಈಗ ನೀವೇ ಉತ್ತರಿಸಬೇಕು. ಶಾಲಾ ಕಾಲೇಜು ಅನ್ನುವ ವಿದ್ಯಾದೇಗುಲದಲ್ಲಿ ಬರೇ ಕನ್ನಡ ಅಕ್ಷರ ವ್ಯಾಕರಣ ಕಲಿಸಿದರು ಸಾಲದು ಇದರ ಜೊತೆಗೆ ಸಂಸ್ಕಾರ ಸಂಬಂಧಗಳ ಹೃದಯದ ಭಾಷೆಯನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸಬೇಕಾದ ಅನಿವಾರ್ಯತೆ ಇದೆ ಅನ್ನುವುದು ನನ್ನ ಅಭಿಪ್ರಾಯ.


- ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ , ಉಡುಪಿ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top