ಕೇಶವ ಕುಡ್ಲರಿಗೆ ಕ.ಸಾ.ಪ. ಶ್ರದ್ಧಾಂಜಲಿ

Upayuktha
0



ಮಂಗಳೂರು: ಕನ್ನಡ ಹಾಗೂ ತುಳು ಭಾಷೆಯ ಹಿರಿಯ ಖ್ಯಾತ  ಸಾಹಿತಿ, ಬರಹಗಾರ, ಹವ್ಯಾಸಿ,  ಛಾಯಾಗ್ರಾಹಕ  ಕೇಶವ ಕುಡ್ಲ ಇವರು ವಿಧಿವಶರಾದ  ಪ್ರಯುಕ್ತ  ಅಗಲಿದ ಹಿರಿಯ ಚೇತನಕ್ಕೆ  ದಕ್ಷಿಣ ಕನ್ನಡ ಜಿಲ್ಲಾ  ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ವತಿಯಿಂದ ಶ್ರೀ ಭಾರತೀ ಕಾಲೇಜು ನಂತೂರು  ಪರಿಷತ್ತು ಕಛೇರಿಯಲ್ಲಿ  ಶ್ರದ್ದಾಂಜಲಿ ಸಭೆ ಏರ್ಪಡಿಸಲಾಗಿತ್ತು. 




ಜಿಲ್ಲಾ ಕ.ಸಾ.ಪ.  ಅಧ್ಯಕ್ಷ ಡಾ|| ಎಂ. ಪಿ. ಶ್ರೀನಾಥ್ ಅವರು ಪಾಲ್ಗೊಂಡು, ಕೇಶವ ಕುಡ್ಲರ ಬರಹ, ಸಾಧನೆ ಹಾಗೂ  ಕನ್ನಡ ಸಾಹಿತ್ಯ ಪರಿಷತ್ತಿಗೆ ಅವರೊಂದಿಗಿದ್ದ ಒಡನಾಟವನ್ನು ಸ್ಮರಿಸಿದರು. ಕೇಂದ್ರ ಸಮಿತಿ ಸದಸ್ಯರಾದ ಡಾ|| ಎಂ. ಮಾಧವರು,  ಅವರ ಮೌಲ್ಯಯುತ ಬರಹಗಳನ್ನು ಸ್ಮರಿಸಿ ಪಠ್ಯ ಪುಸ್ತಕಗಳಲ್ಲಿ ಅವರ ಬರಹಗಳು ಇನ್ನಷ್ಟು ಬರುವಂತೆ ಶ್ರಮಿಸುವ ಅವಶ್ಯಕತೆ ಇದೆ. ಇದರಿಂದ ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಲಾಭವಾಗಲಿದೆ ಎಂದು ನುಡಿದರು. 




ಕೇಶವ ಕುಡ್ಲರ ನಿಕಟವರ್ತಿ ಕ.ಸಾ.ಪ. ಮಹಿಳಾ ಪದಾಧಿಕಾರಿ ಡಾ|| ಮೀನಾಕ್ಷಿ ರಾಮಚಂದ್ರ  ಅವರೊಂದಿಗೆ ಸಾಹಿತ್ಯಿಕ ಹಾಗೂ ಆತ್ಮೀಯ ಒಡನಾಟಗಳನ್ನು ಸ್ಮರಿಸಿ ಅವರ ಅದ್ಭುತ ವ್ಯಕ್ತಿತ್ವದ ಗುಣಗಾನ ಮಾಡಿದರು. ಕೇಶವ ಕುಡ್ಲರ ಪುತ್ರ ಉಪನ್ಯಾಸಕ  ಕಿರಣ್ ವಟಿ ಕೆ. ಯವರು ಕೇಶವ ಕುಡ್ಲರ ಅಂತರಾಳವನ್ನು ಸಭೆಯ ಮುಂದೆ  ಇನ್ನಷ್ಟು ತೆರೆದಿಟ್ಟು “ತನ್ನ ಬದುಕಿನ ಮೂಲಕ ಹಾಗೂ ಬರಹಗಳ  ಮೂಲಕ ನಮಗೆಲ್ಲಾ ಧೈರ್ಯ ತುಂಬುತ್ತಿದ್ದವರು, ಸ್ಫೂರ್ತಿ ತುಂಬಿದವರು ನಮ್ಮ ತಂದೆ”  ಎಂದು ನುಡಿದರು.  




ಶ್ರೀ  ಭಾರತೀ ಕಾಲೇಜು ನಂತೂರು, ಪದವು ಪೌಢಶಾಲೆ ಪ್ರಾಂಶುಪಾಲೆ ಗಂಗಾರತ್ನಾ ರವರು ಮಾತನಾಡಿ ಅದಮ್ಯ ಚೇತನಕ್ಕೆ ಗೌರವ ಸಲ್ಲಿಸಿದರು. ಸಭಿಕರ ಪರವಾಗಿ ಮಾತನಾಡಿದ ಡಾ|| ಸುರೇಶ ನೆಗಳಗುಳಿಯವರು  “ಕೇಶವ ಕುಡ್ಲರವರ ಬರಹಗಳು  ಉಳಿದ ಬರಹಗಾರರಿಗೆ ಪ್ರೇರಣೆ ನೀಡುವಂತದ್ದು. ಅವರ ಅಪ್ರಕಟಿತ ಬರಹಗಳು ಪ್ರಕಟಗೊಳ್ಳಲಿ” ಎಂದು ಆಶಿಸಿದರು. ತಾಲೂಕು ಘಟಕದ ಅಧ್ಯಕ್ಷ ಡಾ|| ಮಂಜುನಾಥ್ ಎಸ್. ರೇವಳ್‍ಕರ್ ರವರು ಕೇಶವ ಕುಡ್ಲರವರನ್ನು ತಮ್ಮ ಕ.ಸಾ.ಪ.  ಘಟಕದ ಮೂಲಕ ಸನ್ಮಾನಿಸಿ ಗೌರವಿಸಿದ ಕ್ಷಣಗಳನ್ನು ಸ್ಮರಿಸಿ, ಕನ್ನಡ ಸಾಹಿತ್ಯ ಪರಿಷತ್ತು ಅವರೊಂದಿಗೆ  ಇಟ್ಟುಕೊಂಡಿದ್ದ ಒಡನಾಟವನ್ನು ಮೆಲುಕು ಹಾಕಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಗುಣವತಿಯವರು  ಉಪಸ್ಥಿತರಿದ್ದರು.  




 ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಮಾರ್ಗದರ್ಶಿ ಸದಸ್ಯ ಹಾಗೂ  ಘಟಕದ ಗೌರವ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು  ಪ್ರಸ್ತಾವಿಸಿ, ಕಾರ್ಯಕ್ರಮ ನಿರೂಪಿಸಿದರು. ಇನ್ನೋರ್ವ ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಕಾರ್ಯಕ್ರಮ ಸಂಯೋಜಿಸಿದರು. ನಿಜಗುಣ ದೊಡ್ಡಮನಿ, ಕಸಾಪ ಪದಾಧಿಕಾರಿಗಳಾದ ಬಿ. ಕೃಷ್ಣಪ್ಪ ನಾಯ್ಕ್, ಸನತ್ ಕುಮಾರ್ ಜೈನ್, ಶಾಲಾ ಶಿಕ್ಷಕ ವೃಂದದವರು,ಸಾರ್ವಜನಿಕರು ಪಾಲ್ಗೊಂಡು ಮೌನ ಪ್ರಾರ್ಥನೆಗೈದು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top