ಜ.23: ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿ "ನೃತ್ಯಸಂಭ್ರಮ"

Upayuktha
0

 



ಬೆಂಗಳೂರು : ನಗರದ ಪ್ರತಿಷ್ಠಿತ ನೃತ್ಯ ಶಾಲೆಯಾದ ನೃತ್ಯ ದಿಶಾ ಟ್ರಸ್ಟ್ ವತಿಯಿಂದ ಜನವರಿ 23, ಮಂಗಳವಾರ ಮಧ್ಯಾಹ್ನ 3 ರಿಂದ 8ರ ವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಮುಚ್ಚಯ ರಂಗಮಂದಿರದಲ್ಲಿ "ಕರ್ನಾಟಕ ಸಂಗೀತ", "ಜನಪದ ಸಂಗೀತ", "ಭರತನಾಟ್ಯ", "ಜನಪದ ನೃತ್ಯ" ಮುಂತಾದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.




ಈ ಸಮಾರಂಭಕ್ಕೆ ಮುಖ್ಯ ಅತಿಥಿ ಆರ್. ಚಂದ್ರಶೇಖರ್ (ಸಹಾಯ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ),  ಲೇಪಾಕ್ಷಿ ಸಂತೋಷ ರಾವ್ (ಹಿರಿಯ ಪತ್ರಕರ್ತರು, ಬೆಂಗಳೂರು), ಪ್ರಸನ್ನ ಪಂಚಾಕ್ಷರಯ್ಯ (ಕಾರ್ಯದರ್ಶಿ, ವೀರಶೈವ ಲಿಂಗಾಯತ ಸಾಂಸ್ಕೃತಿಕ ವೇದಿಕೆ), ಮತ್ತು  ಎಂ.ಎ. ರಂಗಸ್ವಾಮಿ (ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ಹಾಸನ) ಆಗಮಿಸಲಿದ್ದು, ಕಲಾಭಿಮಾನಿಗಳು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ನೃತ್ಯ ದಿಶಾ ಟ್ರಸ್ಟಿನ ಸಂಸ್ಥಾಪಕ ನಿರ್ದೇಶಕರೂ, ಗುರುಗಳೂ ಆದ ವಿದುಷಿ  ದರ್ಶಿನಿ ಮಂಜುನಾಥ್ ಅವರು ಕೋರಿದ್ದಾರೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top