ಜ.14: ಮಕರ ಸಂಕ್ರಾಂತಿಯಂದು ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆ

Upayuktha
0


ತೆಂಕನಿಡಿಯೂರು: ಇಲ್ಲಿನ ಶ್ರೀ ಕಾಳಿಕಾಂಬಾ ಭಜನಾ ಸಂಘದ ವತಿಯಿಂದ ಜನವರಿ 14. ರವಿವಾರ ಮಕರ ಸಂಕ್ರಾಂತಿ ವಿಶೇಷ ಕಾರ್ಯಕ್ರಮವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 




ಉಡುಪಿ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ

• ಭಕ್ತಿಗೀತೆ ಸ್ಪರ್ಧೆ 

• ಚಿತ್ರಕಲಾ ಸ್ಪರ್ಧೆ 




ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ

• ರಸಪ್ರಶ್ನೆ ಸ್ಪರ್ಧೆ 

• ಭಾವಗಾನ ಸ್ಪರ್ಧೆ 



ಕಾಲೇಜು ವಿದ್ಯಾರ್ಥಿಗಳಿಗಾಗಿ

• ರಸಪ್ರಶ್ನೆ ಸ್ಪರ್ಧೆ 

• ಭಾಷಣ ಸ್ಪರ್ಧೆ - ವಿಷಯ: “ಆಧುನಿಕತೆ, ವೈಜ್ಞಾನಿಕ ಮನೋಭಾವ, ಯುವಜನತೆ ” ( 4+1 ನಿಮಿಷಗಳು )




ಆಸಕ್ತರು ಸ್ಪರ್ಧಾ ದಿನದಂದು ಬೆಳಗ್ಗೆ 09.00 ರಿಂದ 09.30 ಗಂಟೆಯ ಒಳಗೆ ಶಾಲಾ ಮುಖ್ಯಸ್ಥರ ಧೃಢೀಕರಣದೊಂದಿಗೆ ನೋಂದಣಿ ಮಾಡಬೇಕು. ಪ್ರತಿ ಸ್ಪರ್ಧೆಗೆ ಒಂದು ಸಂಸ್ಥೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ, ಹಾಗೂ ರಸಪ್ರಶ್ನೆ ಸ್ಪರ್ಧೆಗಳಿಗೆ ಪ್ರತಿ ಸಂಸ್ಥೆಯಿಂದ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ಒಂದು ತಂಡಕ್ಕೆ ಮಾತ್ರ ಅವಕಾಶ. ಚಿತ್ರಕಲಾ ಸ್ಪರ್ಧೆಗೆ ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು. ಸ್ಪರ್ಧಾ ವಿಜೇತರಿಗೆ ಅದೇ ದಿನ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಗದು ಬಹುಮಾನ ನೀಡಲಾಗುವುದು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂ. 9964024066ನ್ನು ಸಂಪರ್ಕಿಸಬೇಕಾಗಿ ಸಂಘದ ಪ್ರಕಟಣೆ ತಿಳಿಸಿದೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top