ಹಾಸನ: ಶ್ರೀಮತಿ ಅನಿತಾ ಕೌಲ್ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ

Upayuktha
0



ಹಾಸನ : ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜ.07 ಭಾನುವಾರದಂದು  ಶ್ರೀಮತಿ ಅನಿತಾ ಕೌಲ್ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್.ಎನ್. ಮಲ್ಟಿಮೀಡಿಯ ಸಭಾಂಗಣದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿತ್ತು. 



ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಈ. ಬಸವರಾಜು ರವರು ಅನಿತಾ ಕೌಲ್ ರವರು ಅತ್ಯುತ್ತಮ ಅಧಿಕಾರಿಯಾಗಿದ್ದರು ಯಾವುದೇ ಕೆಲಸವನ್ನು ಉತ್ತಮವಾಗಿ ರೂಪಿಸುತ್ತಿದ್ದರು ಎಂದು ತಿಳಿಸುವುದರೊಂದಿಗೆ ವೈಜ್ಞಾನಿಕ ಮನೋಭಾವನೆಯಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ತಮ್ಮ  ಪ್ರಾಸ್ತಾವಿಕ  ನುಡಿಗಳಲ್ಲಿ ತಿಳಿಸಿದರು.



 ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಧಿಕಾರಿಗಳನ್ನು ಸ್ಮರಿಸುವುದು ವಿರಳ. ಅದರಲ್ಲೂ ಒಬ್ಬ ಅಧಿಕಾರಿಯ ಹೆಸರಿನಲ್ಲಿ ಪ್ರಶಸ್ತಿ ಕೊಡುವುದು ಇದೊಂದೇ ಇರಬಹುದು. ನನಗೆ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಟಿ.ವೈ. ನಾಗಭೂಷಣರಾವ್ ಅವರು ನೆನಪಿಗೆ ಬರುತ್ತಾರೆ. ನಾನು ಬಿಎ ಓದುತ್ತಿದ್ದಾಗ ಬರೆದ ನನ್ನ ಮೊದಲ ನಾಟಕವನ್ನು ಅಧ್ಯಾಪಕರಾದ ಎಂ.ಎಸ್. ರಾಮಲಿಂಗಪ್ಪ ಅವರು ಅಚ್ಚು ಹಾಕಿಸಿದರು. ಇಂದು ಶಿಕ್ಷಣದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಮಹಿಳೆಯರೂ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ.  ಶೈಕ್ಷಣಿಕ ಸಮಾನತೆ ನಮ್ಮ ಮೊದಲ ಆದ್ಯತೆ ಆಗಬೇಕು.  ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಕೊಡಬೇಕು. ಶಿಕ್ಷಣ ಸಹ ಗ್ಯಾರಂಟಿ ಪಟ್ಟಿಗೆ ಸೇರಬೇಕು ಎಂದು ಹೇಳಿದರು. 



ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕವಯಿತ್ರಿ ಎಚ್.ಎಲ್. ಪುಷ್ಪ ರವರು  ಮಾತನಾಡಿ  ಅನಿತಾ ಕೌಲ್ ವರು ಎಲ್ಲರಿಗೂ ಮಾದರಿ ಎಂದು ಕರೆ ನೀಡಿದರು ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷ ಆರ್.ಎನ್. ರಾಜಾನಾಯಕ್ ರವರು ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಲಭಿಸುತ್ತದೆ ಎಂದು ತಿಳಿಸಿದರು ಮತ್ತು ಕರ್ತವ್ಯ  ಬದ್ಧತೆಗೆ ಅನಿತಾ ಕೌಲ್ ರವರು ಮಾದರಿ ಎಂದು ತಿಳಿಸಿದರು.




ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಅಧ್ಯಕ್ಷರು ಹಾಗೂ ಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್  ಅನಿತಾ ಕೌಲ್ ರವರು ಎಲ್ಲರಿಗೂ ಮಾದರಿ ಎಂದರು ಮತ್ತು ವಿದ್ಯಾರ್ಥಿಗಳು ವಿವೇಚನ ಶಕ್ತಿಯನ್ನು ಕಳೆದುಕೊಳ್ಳದಂತೆ ಶಿಕ್ಷಕರು ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ ಎಂದು ತಿಳಿಸಿದರು ಹಾಗೂ ಶಿಕ್ಷಕರು ನಾಡಿನ ಸಂಪತ್ತು ಎಂದು ಹೇಳಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 49 ಜನ ಶಿಕ್ಷಕರಿಗೆ ಅನಿತಾ ಕೌಲ್ ಹೆಸರಿನ ಪ್ರಶಸ್ತಿ ನೀಡಲಾಯಿತು.



ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಇವರು ಪ್ರತಿವರ್ಷ ನೀಡುತ್ತಿರುವ  ಶ್ರೀಮತಿ ಅನಿತಾ ಕೌಲ್ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು 2023 - 24 ನೇ ಸಾಲಿನಲ್ಲಿ  ಹಾಸನ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಶಿಕ್ಷಕರಾದ ಚಿದಾನಂದ ಕೆ. ಎನ್. ಸಹ ಶಿಕ್ಷಕರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ( ಪ್ರಧಾನ ) ಪ್ರೌಢ ಶಾಲಾ ವಿಭಾಗ, ಆರ್. ಸಿ. ರಸ್ತೆ ಹಾಸನ , ಹಾಗೂ  ದಿವಾಕರ್ ಕೆ. ಎಲ್. ಸಹ ಶಿಕ್ಷಕರು , ಸರ್ಕಾರಿ ಪ್ರೌಢಶಾಲೆ ಸೀಗೆ , ಹಾಸನ ಮತ್ತು ಅಂಜನಪ್ಪ ಕೆ.ಆರ್. ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ' ಮುರುಂಡಿ ಅರಸೀಕೆರೆ ತಾಲ್ಲೂಕು ಇವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ ಗೌರವಿಸಿದೆ. ಈ ಮೂವರೂ ಶಿಕ್ಷಕರಿಗೆ ಹಾಸನ ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಅಭಿನಂದನೆಗಳನ್ನು ತಿಳಿಸುತ್ತದೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top