ಎನ್.ಎಂ.ಪಿ.ಟಿ ಯಲ್ಲಿ ಜಾಂಬುವತಿ ಕಲ್ಯಾಣ ಆಂಗ್ಲ ಭಾಷಾ ಯಕ್ಷಗಾನ

Upayuktha
0




ಮಂಗಳೂರು: ನವ ಮಂಗಳೂರು ಬಂದರಿಗೆ ಪ್ರಪ್ರಥಮ ವಿದೇಶಿ ಹಡಗು ಎಂ.ಎಸ್. ರಿವೇರಿಯಾ ಆಗಮಿಸಿದಾಗ ಮಂಗಳೂರಿನ ಖ್ಯಾತ ಯಕ್ಷತಂಡ ಸರಯೂ ಬಳಗದಿಂದ ಜಾಂಬವತಿ ಕಲ್ಯಾಣ ಎಂಬ ಆಂಗ್ಲಭಾಷಾ ಸಂಭಾಷಣೆಯ ಬಯಲಾಟ ನುರಿತ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರ ನಿರ್ದೇಶನದಲ್ಲಿ ಸಂಪನ್ನಗೊಂಡಿತು. ಪ್ರದರ್ಶನವನ್ನು ಕಂಡು ನಿಬ್ಬೆರಗಾದ ವಿದೇಶೀ ಪ್ರೇಕ್ಷಕರು ಮುಕ್ತಕಂಠದಿಂದ ಕಾರ್ಯಕ್ರಮವನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಸಂತಸ ಪಟ್ಟರು.




ಕಾರ್ಯಕ್ರಮ ವೀಕ್ಷಿಸಿದ ಜಿಲ್ಲಾಧಿಕಾರಿ  ಮುಲ್ಲೈ ಮುಗಿಲನ್ ಹಾಗೂ ದ. ಕ .ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಕುಮಾರ್ ರವರು ಮೆಚ್ಚುಗೆ ವ್ಯಕ್ತಪಡಿಸಿದರು ಸಂಸ್ಥೆಗೆ ಶುಭ ಹಾರೈಸಿದರು.




ಹಿಮ್ಮೇಳದಲ್ಲಿ  ಲಕ್ಷಿನಾರಾಯಣ ಹೊಳ್ಳ, ಮಧುಸೂದನ ಅಲೆವೂರಾಯ ವರ್ಕಾಡಿ, ಸ್ಕಂದ ಕೊನ್ನಾರ್ ಇದ್ದರೆ ಮುಮ್ಮೇಳದಲ್ಲಿ ವಿಜಯಲಕ್ಷೀ ಎಲ್. ಎನ್. ವೀಣಾ .ಕೆ . ನಿಹಾಲ್ ಆರ್. ಪೂಜಾರಿ, ಮನ್ವಿತ್ ಬಿ ಶೆಟ್ಟಿ ಮತ್ತು ಚಿರಾಗ್ ಶೆಟ್ಟಿ ಸಹಕರಿಸಿದರು. ಪ್ರಪ್ರಥಮ ಬಾರಿಗೆ ಆಗಮಿಸಿದ ಈ ಹಡಗಿನ ಪ್ರವಾಸಿಗರಿಗೆ ಯಕ್ಷಗಾನ ಅತ್ಯಂತ ಸಂತಸ ಮತ್ತು ಸ್ಪೂರ್ತಿಯನ್ನು ಕೊಟ್ಟಿತು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತ ಪಡಿಸಿದರು.





ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top