ಸಾಹಿತಿಗಳಾಗುವುದು ಸುಲಭವಲ್ಲ: ಭಾಗ್ಯವಂತಿ ಎಚ್.ಆರ್

Upayuktha
0

ಚಂದ್ರಶೇಖರ ಹೆಗಡೆಯವರ ಲಲಿತ ಪ್ರಬಂಧಗಳ ಸಂಕಲನ "ಪುಷ್ಪರಗಳೆ" ಬಿಡುಗಡೆ




ಹುನಗುಂದ:  ಸಾಹಿತಿಗಳಾಗುವದು ಸುಲಭವಲ್ಲ ಎಂದು ಹುನಗುಂದದ ಸರಕಾರಿ ಪದವಿ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಭಾಗ್ಯವಂತಿ ಎಚ್.ಆರ್. ಹೇಳಿದರು.


ಅವರು ಹುನಗುಂದದ ಹೊನ್ನ ಕುಸುಮ ಸಾಹಿತ್ಯ ವೇದಿಕೆಯ ತಿಂಗಳ ಬೆಳಕು-17ರ ವಿ.ಮ. ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಸಾಹಿತಿ ಚಂದ್ರಶೇಖರ ಹೆಗಡೆಯವರ ಲಲಿತ ಪ್ರಬಂಧಗಳ ಸಂಕಲನವಾದ "ಪುಷ್ಪರಗಳೆ" ಕೃತಿಯ ಬಗ್ಗೆ ಮಾತನಾಡಿದ ಅವರು. ಈ ಪುಸ್ತಕದಲ್ಲಿ ಸಾಹಿತ್ಯದ ಎಲ್ಲಾ ಪ್ರಕಾರಗಳಿವೆ. ತಮ್ಮ ಪರಿಸರದಲ್ಲಿ ನಡೆದಿರುವ ಕಾರ್ಯಗಳ ಬಗ್ಗೆ ಸರಳವಾಗಿ ಸಾಹಿತ್ಯಲೋಕಕ್ಕೆ ಅಚ್ಚ ಕನ್ನಡವನ್ನು ಬಳಸಿಕೊಂಡು ಪ್ರತಿಯೊಂದು ಪ್ರಬಂಧದಲ್ಲಿ ತಾಯಿಯ ವಾತ್ಸಲ್ಯಗಳನ್ನು ಹೊಗಳಿದ್ದಾರೆ ಎಂದರು.


ಪ್ರಸ್ತುತ ಚಂದ್ರಶೇಖರರವರು "ಪುಷ್ಪರಗಳೆ" ಎಂಬ ವಿಶಿಷ್ಠ ಅನುಭವಗಳ ಲಲಿತ ಪ್ರಬಂಧ ಸಂಕಲನವನ್ನು ಹೊರತಂದಿದ್ದು ಅಭಿಮಾನವೆನಿಸಿದೆ. ಎಂದು ಅವರು ಪರಂಪರೆ, ಸಂಸ್ಕೃತಿ, ಚರಿತ್ರೆಗಳನ್ನೂ ಮೆವೆತ್ತಿರುವುದು ವಿಶಿಷ್ಠವಾಗಿದೆ ಎಂದರು.


ಗುಳೇದಗುಡ್ಡದ ಹಿರಿಯ ಸಾಹಿತಿ ಡಾ||ರಾಜಶೇಖರ ಮಠಪತಿ ಮಾತನಾಡಿ, ಚಂದ್ರಶೇಖರ ಹೆಗಡೆಯವರ ಈ ಪುಷ್ಪರಗಳೆಯು ಸುಮಾರು ಹದಿನೇಳು ಲಲಿತ ಪ್ರಬಂಧಗಳನ್ನೊಳಗೊಂಡು ತುಂಬಾ ಸರಳ ನೇರ ನಿರೂಪಣೆಗಳ ಮೂಲಕ ಓದುಗರ ಕಣ್ಣೆದರಿಗೆ ಹೊಸ ಲೋಕವನ್ನೇ ಸೃಜಿಸಿ ಸಹೃದಯರಿಗೆ ಅನನ್ಯ ಅನುಭವವನ್ನು ನೀಡುವಲ್ಲಿ ಹೊಸತನವನ್ನು ಮರೆದಿದೆ. ಇಲ್ಲಿಯ ಭಾಷೆ ಸರಳ; ಇಲ್ಲಿಯ ವಸ್ತುಗಳು ವಾಸ್ತವಿಕ ನೆಲೆಯನ್ನಾಧಿರಿಸಿ ಕುಟುಂಬ ಹಾಗೂ ಸಮಾಜದಿಂದ ಹೆಕ್ಕಿ ತೆಗೆದವುಗಳು ಹೆಗಡೆಯವರು ನೆಲಮೂಲ ಸಂಸ್ಕೃತಿಯ ಮೇಲೆ ಇಟ್ಟುಕೊಂಡಿರುವ ನಂಬಿಕೆ ಅಗಾಧವಾದದ್ದು, ಸಂಸ್ಕೃತಿಯ ನೆಲವನ್ನಗೆದು ಪ್ರಬಂಧ ಸಾಹಿತ್ಯದ ಮುಖೇನ ಸುಗಂಧವನ್ನು ಪಸರಿಸಬೇಕಂಬ ಅವರ ಹಬಲ ಅಪರಿಮಿತವಾಗಿದೆ ಎಂದು ತಿಳಿಸಿದರು.


ಕೃತಿಕಾರ ಚಂದ್ರಶೇಖರ ಹೆಗಡೆ ಮಾತನಾಡಿ, ರಗಳೆ ಎಂಬುದು ಜನಪದರು ಜೀವನದಲ್ಲಿ ಎದುರಾಗುವ ಸಂಕೀರ್ಣತೆ, ಗೊಂದಲ, ಸಮಸ್ಯೆ ಕಾಡುವಿಕೆಗೆ ಬಳಸುವ ನುಡಿಗಟ್ಟು: ಇದನ್ನು ಇಡೀ ಸಂಕಲಕ್ಕೆ ರೂಪಕವನ್ನಾಗಿ ಆಯ್ಕೆ ಮಾಡಿಕೊಂಡಿದ್ದೇನೆ, ಶಬ್ದಕೋಶದಲ್ಲಿ ಕಿರಿಕಿರಿ, ಒಗಟಾದ ಮಾತು, ಬೆಡಗಿನ ನುಡಿ, ಪೀಡೆ, ಕೊನೆಯಾಗದ ಸಮಸ್ಯೆ ಹಠಮಾಡುವುದು, ಬೇಸರ ತರುವ ಸಂಗತಿ, ಉಪದ್ರವ, ಕೀಟಲೆ ಎಂದಲ್ಲಾ ಸಮಾನ ಅರ್ಥಗಳನ್ನು ಹೊರಡಿಸಿರುವ ವಿಶಿಷ್ಠವಾದ ನಡಿಗಟ್ಟು. ಈ "ರಗಳೆ" ಪುಷ್ಪರಗಳೆಯೊಂದು ನಾನು ಕಂಡ ದೃಶ್ಯಕಾವ್ಯವಾಗಿದೆ ಅವರು ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೇದಿಕೆಯ ಅಧ್ಯಕ್ಷರಾದ ಸಂಗಣ್ಣ ಮುಡಪಲದಿನ್ನಿ ಮಾತನಾಡಿ, ಹೆಗಡೆಯವರು ತಂದೆಯನ್ನು ಇವರು ಬಂದು ಸಾರಿ ನೆನೆಪಿಸಿದ್ದನ್ನ ಬಿಟ್ಟರೆ ಪ್ರಬಂಧಗಳುದ್ದಕ್ಕೂ ತಾಯಿ (ಸಾಕಿ) ಯನ್ನು ವಿಜೃಂಭಿಸುತ್ತಾ ಹೋಗಿದ್ದಾರೆ. ಸಣ್ಣ ಸಣ್ಣ ವಿಷಯಗಳನ್ನು ಅತ್ಯಂತ ಕುತೂಹಲದಿಂದಲೇ ಗಮನಿಸಿದ್ದಾರೆ. ಪರಿಸರದ ಕಾಳಜಿ ಮನುಷ್ಯ ಕಲಿಯಬೇಕಾದದ್ದು ಬಹಳವಿದೆಯೆಂಬ ಭಾವ ವ್ಯಕ್ತವಾಗಿದೆ ಎಂದರು.


ಮುಂದುವರೆದು ಆಧುನೀಕರಣದ ಸವಾಲುಗಳ ವಿವರವಿದೆ. ಜೀವನದ ಸಣ್ಣಪುಟ್ಟ ವಿಷಯಗಳು ಹೇಗೆ ಖುಷಿ ಕೊಡಬಲ್ಲವು, ಸಂತೆಯೊಳಗಿದ್ದು ಸಂತನಾಗು ಎನ್ನುವಂತದ್ದು, ಸಮಾಜಕ್ಕೆ ಮಾದರಿಯಾಗುವ ಹೇಳಿಕೆಗಳು ಬಹಳಷ್ಠಿವೆ ಎಂದು ತಿಳಿಸಿದರು.


ಇದೇ ಸಂಧರ್ಭದಲ್ಲಿ ಹುನಗುಂದದ ಹಿರಿಯ ನ್ಯಾಯವಾದಿ ವ್ಹಿ.ಬಿ ಜನಾದ್ರಿಯವರನ್ನು ಸನ್ಮಾನಿಸಲಾಯಿತ್ತು. ಗುಳೇದಗುಡ್ಡದ ಶಿಕ್ಷಣ ತಜ್ಞ ಡಾ|| ವಿ.ಎ.ಬೆನಕನನಾಳ, ಲೇಖಕ ಚಂದ್ರಶೇಖರ ಹೆಗಡೆಯವರ ತಾಯಿ ಶಿವಪುತ್ರಮ್ಮ ಹೆಗಡೆ ಹುನಗುಂದ. ಹೇಮಾ ಜಮಖಂಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಂದಾನಯ್ಯ ವಸ್ತ್ರದ ಪ್ರಾರ್ಥಿಸಿದರು. ಎಂ.ಡಿ. ಚಿತ್ತರಗಿ ನಿರೂಪಿಸಿದರು. ಜಗದೀಶ ಹಾದಿಮನಿ ವಂದಿಸಿದರು.  ಕಾರ್ಯಕ್ರಮದಲ್ಲಿ ಹುನಗುಂದ ತಾಲ್ಲೂಕಿನ ಹಿರಿಯ ಕಿರಿಯ ಸಾಹಿತಿಗಳು ಭಾಗವಹಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top