ಸರ್ಕಾರಿ ಪ್ರೌಢಶಾಲೆ ಸಜಿಪಮೂಡದಲ್ಲಿ ಟ್ಯೂಶನ್ ಕ್ಲಾಸ್ ಉದ್ಘಾಟನೆ

Chandrashekhara Kulamarva
0


 

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್( ರಿ) ಬಂಟ್ವಾಳ ತಾಲೂಕು. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪಾಣೆಮಂಗಳೂರು ವಲಯ.  ಇದರ  ವತಿಯಿಂದ ಟ್ಯೂಶನ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಸಜಿಪಮೂಡದಲ್ಲಿ ನಡೆಯಿತು.             




ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಣೆಮಂಗಳೂರು ವಲಯ ಒಕ್ಕೂಟಗಳ ವಲಯಅಧ್ಯಕ್ಷರಾದ ಗಂಗಾಧರ ಭಂಡಾರಿ ವಹಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ  ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಕಾರ್ಯಕ್ರಮದ ಬಗ್ಗೆ ಹಾಗೂ ಯೋಜನೆಯಲ್ಲಿ  ಶಿಕ್ಷಣಕ್ಕೆ ಸಿಗುವಂತ ಸೌಲಭ್ಯಗಳ ಬಗ್ಗೆ  ಮಾಹಿತಿ ನೀಡಿದರು.       




ವೇದಿಕೆಯಲ್ಲಿ  ಸಜಿಪಮೂಡ ಒಕ್ಕೂಟ ಅಧ್ಯಕ್ಷೆ ಹರೀನಾಕ್ಷಿ ಶಾಲಾ ಶಿಕ್ಷಕ ಗಣೇಶ, ಅತಿಥಿ ಶಿಕ್ಷಕಿ  ಹೇಮಾವತಿ  ಉಪಸ್ಥಿತರಿದ್ದರು.  ಮೂರು ತಿಂಗಳು ಟ್ಯೂಷನ್ ಕ್ಲಾಸ್ ನಡೆಯಲಿದ್ದು, ಸುಮಾರು 40 ವಿದ್ಯಾರ್ಥಿಗಳು  ಭಾಗವಹಿಸಲಿದ್ದಾರೆ. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸೇವಾ ಪ್ರತಿನಿಧಿ  ಬಬಿತ  ಸ್ವಾಗತಿಸಿ, ಶಿಕ್ಷಕಿ ಸುಲೋಚನಾ ವಂದಿಸಿ, ವಲಯ ಮೇಲ್ವಿಚಾರಕಿ  ಅಮಿತಾ ಕಾರ್ಯಕ್ರಮ ನಿರೂಪಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    

إرسال تعليق

0 تعليقات
إرسال تعليق (0)
To Top