ಶಿರಾಲಿ: ಭಟ್ಕಳದ ಶಿರಾಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ರಂಗಮಂಟಪದಲ್ಲಿ ಉಡುಪಿಯ ನರ್ತಕಿ ಟ್ರಸ್ಟ್ (ರಿ.) ಇದರ ಆಶ್ರಯದಲ್ಲಿ ಹೊಸ ಶಾಖೆಯ ಭರತನಾಟ್ಯ ತರಗತಿಯನ್ನು ಇತ್ತೀಚೆಗೆ ಭಟ್ಕಳ ತಾಲೂಕಿನ ಶಿರಾಲಿಯ ಸಮಾಜ ಸೇವಕರಾದ ಡಿ. ಜೆ ಕಾಮತ್ ಉದ್ಘಾಟಿಸಿದರು.
ಭರತ ಮುನಿಯಿಂದ ರಚಿಸಲ್ಪಟ್ಟ ಭರತನಾಟ್ಯ ಕಲೆಯನ್ನು ಜೀವನದಲ್ಲಿ ಅಳಡಿಸಿಕೊಂಡು ಉಳಿಸಿ ಬೆಳೆಸಲು ಇಂದಿನ ಯುವ ಪೀಳಿಗೆ ಮುಂದಾಗಬೇಕು, ಗುರುಕುಲ ಪದ್ಧತಿಯಾದ ಈ ನಾಟ್ಯ ಕಲೆಯನ್ನು ದಿನಾಲೂ ಅಭ್ಯಸಿಸುವುದರಿಂದ ಆರೋಗ್ಯ ಕಾಪಾಡುವಲ್ಲಿ ಕೂಡ ಇದು ಸಹಕಾರಿ ಎಂದು ಹೇಳಿದರು.
ನೃತ್ಯ ಗುರುಗಳಾದ ವಿಶ್ವೇಶ್ವರ ಹೆಗಡೆ, ಕಾರ್ಯಕ್ರಮದ ಅಧಯಕ್ಷತೆಯನ್ನು ವಹಿಸಿ ಮಾತಾಡಿದರು, ಅಥಿತಿಗಳಾಗಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈ ಮನೆ , ಸಿದ್ದಾರ್ಥ ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ಯು, ಸೇಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾ0ಶುಪಾಲ ಸ್ಯಾಮುವೆಲ್ ವರ್ಗಿಸ್, ಗ್ರಾಪಂ ಸದಸ್ಯೆ ಸುನೀತಾ ಹೇರೂರ್ಕರ್ ಉಪಸ್ಥಿತರಿದ್ದರು. ಸುನಿಲ್ ಕಣ್ಣನ್, ಶಿಕ್ಷಕ ನಾರಯಣ ನಾಯ್ಕ ಹಾಗೂ ಸಂಸ್ಥೆಯ ನೃತ್ಯ ಗುರುಗಳಾದ ನೃತ್ಯ ವಿದುಷಿ ಶಾಂಭವಿ ಆಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು. ಕೊನೆಯಲ್ಲಿ ನರ್ತಕಿ (ರಿ) ಸಂಸ್ಥೆಯ ಕಲಾವಿದರಿಂದ ನೃತ್ಯ ಸಿಂಚನ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ