ಫೆ.03-04: ಗೋವಿಂದ ದಾಸ ಕಾಲೇಜಿನಲ್ಲಿ ದೇಸಿ ಕಥಾಕಮ್ಮಟ

Upayuktha
0



ಸುರತ್ಕಲ್ : ವೀರಲೋಕ ಬುಕ್ಸ್, ಬೆಂಗಳೂರು ಮತ್ತು ಗೋವಿಂದ ದಾಸ ಕಾಲೇಜಿನ ಸಾಹಿತ್ಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಯುವ ಕಥೆಗಾರರಿಗೆ ದೇಸಿ ಕಥಾಕಮ್ಮಟವು ಫೆಬ್ರವರಿ 3 ಮತ್ತು 4ರಂದು ಗೋವಿಂದ ದಾಸ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 9.30 ರಿಂದ 5 ರ ವರೆಗೆ ನಡೆಯಲಿದೆ.


ಖ್ಯಾತ ಕಥೆಗಾರ ರಮೇಶ್ ಭಟ್ ಬೆಳಗೋಡು ಕಥಾ ಕಮ್ಮಟವನ್ನು ಉದ್ಘಾಟಿಸುತ್ತಿದ್ದು ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದು ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.



ರಮೇಶ್ ಭಟ್ ಬೆಳಗೋಡು, ಸುಧಾ ಆಡುಕುಳ, ಹನುಮಂತ ಹಾಲಿಗೇರಿ, ಡಾ. ಜ್ಯೋತಿ ಚೇಳಾೈರು, ಡಾ. ಗಣನಾಥ ಎಕ್ಕಾರು, ಪ್ರೊ. ಪಿ. ಕೃಷ್ಣಮೂರ್ತಿ, ಡಾ. ನಿಕೇತನ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.



ವೀರಲೋಕ  ಬುಕ್ಸ್, ಬೆಂಗಳೂರಿನ  ವೀರಕ ಪುತ್ರ ಶ್ರೀನಿವಾಸ್, ಕಥೆಗಾರ ಕಾ.ತ.ಚಿಕ್ಕಣ್ಣ ಮತ್ತು ಪತ್ರಕರ್ತ ಲಕ್ಷ್ಮಣ ಕೊಡಸೆ ಶಿಬಿರದ ಮಾರ್ಗದರ್ಶಕರಾಗಿರುತ್ತಾರೆ. ಹನುಮಂತ ಹಾಲಿಗೇರಿ ಸಮಾರೋಪ ಭಾಷಣ ಮಾಡಲಿದ್ದು ಅಧ್ಯಕ್ಷತೆಯನ್ನು ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ. ಕೃಷ್ಣಮೂರ್ತಿ ವಹಿಸಲಿದ್ದಾರೆ. ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮಂಗಳೂರಿನ ಅಧ್ಯಕ್ಷೆ ಡಾ. ಜ್ಯೋತಿ ಚೇಳಾೈರು ಮುಖ್ಯ ಅತಿಥಿಗಳಾಗಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .


Post a Comment

0 Comments
Post a Comment (0)
To Top