ಮೂಕ ಪ್ರಾಣಿಗಳನ್ನು ಬೀದಿಬದಿಯಲ್ಲಿ ಬಿಡಬೇಡಿ

Upayuktha
0



ಮೂಕ ಪ್ರಾಣಿಗಳನ್ನು ಯಾಕೆ ಬೀದಿಬದಿಗಳಲ್ಲಿ ಬಿಡುತ್ತೀರಾ? ಅವುಗಳು ನಮ್ಮ ಹಾಗೆ ಅವುಗಳಲ್ಲಿ ಪ್ರೀತಿ ಭಾವನೆಗಳು ಇವೆ. ಅವುಗಳ ಕಷ್ಟ ನೋವನ್ನು ಯಾರು ಕೇಳುವವರು? ಮಾನವನ ಕಷ್ಟ ನಿಭಾಯಿಸಬಹುದು? ಮೂಕ ಜೀವಿಯ ಕಷ್ಟವನ್ನು ಯಾರೂ ನಿಭಾಹಿಸುತ್ತಾರೆ?  ಮೂಕ ಪ್ರಾಣಿಗಳ ಜೊತೆ ಪ್ರೀತಿಯಿಂದ ವರ್ತಿಸಿದರೆ ಅದು ಕೂಡ ನಮ್ಮಲ್ಲಿ ಪ್ರೀತಿಯಿಂದ ವರ್ತಿಸುತ್ತವೆ. ಪ್ರಾಣಿಗಳ ಮೌನದ ಹಿಂದೆ ಮುಗ್ಧತೆ ಇದೆ.




ಬೀದಿ ಬದಿಯಲ್ಲಿ ಬಿಟ್ಟಾಗ ಆಹಾರ ಸಿಗದೇ ಮೂಕ ಪ್ರಾಣಿಗಳ ರೋದನೆ ಯಾರಿಗೂ ಬೇಡ. ಹಾಗೂ ಎಷ್ಟೋ ಅಮಾಯಕ ಪ್ರಾಣಿಗಳು ವಾಹನಗಳ ಬಾಯಿಗೆ ಸಿಲುಕಿ ಸಾಯುತ್ತವೆ. ಈ ಸತ್ತ ಪ್ರಾಣಿಗಳನ್ನು ಎಷ್ಟೋ ದಿನ ತಿಂಗಳಾದರೂ ಕಣ್ಣೆತ್ತಿ ನೋಡುವುದಿಲ್ಲ. ಕೊನೆಗೆ ಪಕ್ಷಿ ಹುಳಗಳು ತಿಂದು ಹೋಗುತ್ತವೆ. ಅದರ ಹತ್ತಿರ ಹೋದಾಗ ಅದು ನಮಗೆ ಅಸಹ್ಯವಾಗುತ್ತವೇ ಅಲ್ಲವೇ?  ಹಾಗೆ ನಮ್ಮನ್ನು ಬೀದಿಬದಿಯಲ್ಲಿ ಬಿಟ್ಟಾಗ ಏನಾಗಬಹುದು.. 




ಎಷ್ಟು ಮುಗ್ಧ ಪ್ರಾಣಿಗಳು ನೀರಿಗಾಗಿ ಪರದಾಟ,  ಹಸಿವಿಗಾಗಿ ಪರದಾಟ ಮಾಡುತ್ತಾ ಇರುತ್ತವೆ,  ಇತ್ತೀಚಿನ ದಿನಗಳಲ್ಲಿ  ಅತಿ ಹೆಚ್ಚಾಗಿ  ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಕಾರಣ ಯಾರು? ನಾವುಗಳು ...  ಮನೆಯಲ್ಲಿ ನಾಯಿ ಮರಿ ಇಟ್ಟರೆ  ಅದರಲ್ಲಿ ಗಂಡು ಮರಿ ಇಟ್ಟರೆ ಅದನ್ನು ಚೆನ್ನಾಗಿ ಸಾಕುದು. ಹೆಣ್ಣು ಮರಿ ಇಟ್ಟರೆ ಬೀದಿಗೆ ಬಿಸಾಕುದು.. ಹಾಗಾಗಿ ಬೀದಿ  ನಾಯಿಗಳ ಸಂತೆ ಜಾಸ್ತಿ ಆಗಿದೆ. ಮನುಷ್ಯರಾದ ನಾವು ಮಾಡುವ ದೊಡ್ಡ ಅನ್ಯಾಯ ಏನೆಂದರೆ ಬೀದಿಯಲ್ಲಿ ಪ್ರಾಣಿಗಳನ್ನು ಬಿಡೋದು ದಯವಿಟ್ಟು  ಮೂಕ ಪ್ರಾಣಿಗಳ ಮೇಲೆ ಪ್ರೀತಿ ಭಾವನೆಗಳು ಇರಲಿ..


   



 

  - ✍️ ದೀಕ್ಷಾ ಗೌಡ.ಜೆ 

    ದ್ವಿತೀಯ, ವಾಣಿಜ್ಯ ವಿಭಾಗ

   ವಿವೇಕಾನಂದ ಕಾಲೇಜು ಪುತ್ತೂರು




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


إرسال تعليق

0 تعليقات
إرسال تعليق (0)
To Top