ಬೆಂಗಳೂರು : ನೃತ್ಯ ದಿಶಾ ಟ್ರಸ್ಟ್ (ರಿ) ವತಿಯಿಂದ ಜನವರಿ 23ರಂದು ನಗರದ ಕಲಾಗ್ರಾಮದಲ್ಲಿ ಏರ್ಪಡಿಸಿದ್ದ "ನೃತ್ಯ ಸಂಭ್ರಮ" ಕಾರ್ಯಕ್ರಮ ವಿಭಿನ್ನವಾಗಿ ಮೂಡಿಬಂದಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆರ್ ಚಂದ್ರಶೇಖರ್, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರು , ಹಿರಿಯ ಪತ್ರಕರ್ತ ಲೇಪಾಕ್ಷಿ ಸಂತಾಷ್ ರಾವ್, ಪ್ರಸನ್ನ ಪಂಚಾಕ್ಷರಿ ಹಾಗೂ ಎಂ.ಎ ರಂಗಸ್ವಾಮಿ ಅವರು ಕಾರ್ಯಕ್ರಮದ ವಿಶೇಷತೆಯನ್ನೂ ಪ್ರಶಂಸಿಸಿದರು. ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ನೃತ್ಯ ದಿಶಾ ಸಂಸ್ಥೆ ತಲುಪಿಸುತ್ತಿದೆ ಎಂದು ಚಂದ್ರಶೇಖರ್ ನುಡಿದರು.
ವಿಭಿನ್ನವಾಗಿ ಅನೇಕ ತಂಡಗಳ ಪ್ರಸ್ತುತಿ ಅಮೋಘವಾಗಿತ್ತು. ಅಷ್ಟ ಲಕ್ಷ್ಮಿ, ಸಂಕ್ಷಿಪ್ತ ರಾಮಾಯಣ , ಗಣೇಶ, ಲಕ್ಷ್ಮಿ, ಪಾರ್ವತಿ ಹೀಗೆ ಅನೇಕ ಅತಿ ಅದ್ಬುತ/ ಅತ್ಯದ್ಭುತ ನೃತ್ಯಗಳು, ರಾಮ ನೃತ್ಯ ರೂಪಕ, ಜನಪದ ನೃತ್ಯಗಳು, ಕರ್ನಾಟಕ ಸಂಗೀತ ಹಾಗೂ ಜನಪದ ಸಂಗೀತ ಪ್ರಸ್ತುತಿ ಸುಂದರವಾಗಿ ಮೂಡಿ ಬಂತು.
ನೃತ್ಯ ಸಂಭ್ರಮ ಆಯೋಜನೆ ಮಾಡಿದ ನೃತ್ಯ ದಿಶಾ ಸಂಸ್ಥೆ ಗೆ ಹಾಗೂ ಗುರು ದರ್ಶಿನಿ ಮಂಜುನಾಥ್ ರವರಿಗೆ , ನೆರೆದಿದ್ದ ಗಣ್ಯರು, ಕಲಾ ರಸಿಕರು , ಕಲಪೋಷಕರು ಅಭಿಮಾನ ಸೂಚಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


