ಸಂಸ್ಕೃತಿಯನ್ನು ಕಳೆದುಕೊಂಡರೆ ಮತ್ತೆ ಗಳಿಸಲಾಗದು: ಡಾ. ಗುರುರಾಜ ಕರ್ಜಗಿ

Upayuktha
0

ಬೀಳಗಿಯಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತಿಯ ಪ್ರಯುಕ್ತ 'ವಿವೇಕ ಉತ್ಸವ-8'



ಬೀಳಗಿ: ನಾವೇನಾದರೂ ಕಳೆದುಕೊಳ್ಳಬಹುದು. ದುಡ್ಡು- ಆಸ್ತಿ-ಪಾಸ್ತಿ ಕಳೆದುಕೊಳ್ಳಬಹುದು ಒಂದು ಸಲ ಸಂಸ್ಕೃತಿ ಕಳೆದುಕೊಂಡರೆ ಯಾವತ್ತು ವಾಪಸ್ ಬರುವುದಿಲ್ಲ. ಯಾವತ್ತು ಬರಲಿಕ್ಕೆ ಸಾಧ್ಯವಿಲ್ಲ. ದುಡ್ಡು ಸಂಪತ್ತು ಗಳಿಸಬಹುದು. ಅದರೆ ಸಂಸ್ಕೃತಿ ಗಳಿಸಲು ಸಾಧ್ಯವಿಲ್ಲ. ಆದರೆ ಎಂ.ಎನ್. ಪಾಟೀಲರ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಆ ಸಂಸ್ಕೃತಿಯನ್ನು ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದಾರೆ ಎಂದು ಬೆಂಗಳೂರು ಸೃಜನಶೀಲ ಅಧ್ಯಾಪನ ಕೇಂದ್ರದ ಅಧ್ಯಕ್ಷ ಡಾ. ಗುರುರಾಜ ಕರಜಗಿ ಹೇಳಿದರು.


ಸ್ಥಳೀಯ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಪಂಚವಟಿ ಸ್ಪೋಟ್ಸ್ ಮೈದಾನದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ಅನ್ನದಾತ ಸಹಕಾರಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ ವಿವೇಕ ಉತ್ಸವ-8 ಹಾಗೂ ಕರ್ನಾಟಕ ರಾಜ್ಯ ಗಣಿತ ಪ್ರಯೋಗಾಯಲಯ ಮತ್ತು ಸಂಶೋಧನಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.


ಮಕ್ಕಳಿಗೆ ವಚನ, ಸ್ತೋತ್ರ, ಪ್ರಾರ್ಥನೆ ಹೇಳಿಸುವ ಮೂಲಕ ದೈವಿಕ ಮನೋಭಾವನೆ ಮೂಡಿಸಬೇಕು. ಮಕ್ಕಳಿಗೆ ದೇವರು ಇದ್ದಾನೆಂಬ ನಂಬಿಕೆ ಹುಟ್ಟಿಸಬೇಕು. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ದೇವರು ಇದ್ದಾನೆ ಅನುವುದು ನಂಬಿಕೆ ಬರುವಂತೆ ಮಾಡಬೇಕು. ಬದಲಾವಣೆ ನಾವು ಸಾಕ್ಷಿಯಾಗಿದ್ದೇವೆ. ೨೦ ರಿಂದ ೩೦ವರ್ಷದ ಹಿಂದೆ ಮೋಬೈಲ ಎಲ್ಲಿ ಇತ್ತು. ಅದರೆ ನಾವು ಅಂದ ಚಂದವಾಗಿ ಬದುಕಿದ್ದೇವೆ. ಇವತ್ತು ಹೆಂಗೈತಿ ಪರಸ್ಥಿತಿ ಅಂದರೆ ಹೆಂಡತಿ ಬೇಕಾದರೆ ಬೀಡತ್ತೀನಿ ಆದರೆ ಮೋಬೈಲ ಬೀಡಾಗಿಲ್ಲ ಅನುವಂತಹ ಪರಸ್ಥಿತಿಗೆ ಬಂದು ಬಿಟ್ಟಿದೆ. ಇದು ಯಾವುದು ಉಳಿಯುದಿಲ್ಲ ಅದು ತನ್ನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಲಿ ಆದರೆ ಹಳ್ಳೆಯದನ್ನು ಕೊಚ್ಚಿಕೊಂಡು ಹೋಗಲಿ. ಆದರೆ ನಮ್ಮ ಸಂಸ್ಖೃತಿ ಕೊಚ್ಚಿಕೊಂಡು ಹೋಗಬಾರದು. ಬೇರೆ ರಾಜ್ಯ, ರಾಷ್ಟçಗಳಿಂದ ವಿದ್ಯಾರ್ಥಿಗಳು ಬಂದು ಶಿಕ್ಷಣ ಕಲಿಯುವಂತಾಗಲಿ. ಅಂಥ ಕಲಿಕಾ ವಾತಾವರಣ ಈ ಸಂಸ್ಥೆಯಲ್ಲಿ ಇರುವುದು  ಹೆಮ್ಮೆಯ ಸಂಗತಿ. ಸ್ವಾಮಿ ವಿವೇಕಾನಂದರು ಕೇವಲ 36 ವರ್ಷಗಳ ಕಾಲ ಬದುಕಿದರೂ ಬಹುದೊಡ್ಡ ಸಾಧನೆ ಮಾಡಿದ್ದಲ್ಲದೇ, ಅಪರಿಮಿತ ಸಾಹಿತ್ಯವನ್ನು ರಚಿಸಿ ಮನುಕುಲಕ್ಕೆ ಬಿಟ್ಟು ಹೋಗಿದ್ದಾರೆ ಹೇಳಿದರು.


ಎಲ್ಲಿ ಮನಸ್ಸು ಒಳ್ಳೆಯದಿರುತ್ತದೆ ಅಲ್ಲಿ ಒಳ್ಳೆಯದಾಗುತ್ತದೆ. ಉತ್ತರ ಕರ್ನಾಟಕದ ಭಾಗದ ಮಕ್ಕಳಿಗೆ ಮೌಲ್ಯಯುವ ಶಿಕ್ಷಣ ಜೊತೆಗೆ ಅವರಿಗೆ ಒಳ್ಳೆಯ ಸಂಸ್ಕಾರ ಮತ್ತು ಆಚಾರ ವಿಚಾರಗಳನ್ನು ಮೂಡಿಸುತ್ತಾ ಅವರ ಶಿಕ್ಷಣ ಮಟ್ಟ ಹೆಚ್ಚಿಸಲು ವಿಜ್ಞಾನ ಮತ್ತು ಗಣಿತ ಸಂಶೋಧನಾ ಕೇಂದ್ರ ಸ್ಥಾಪನೆ ಮುಂದಾಗಿದ್ದು ಇದು ಸಾಮಾನ್ಯದ ಕೆಲಸವಲ್ಲ ಎಂ.ಎನ್.ಪಾಟೀಲರ ವಿದ್ಯಾ ಸಂಸ್ಥೆ ಒಂದು ಮಾದರಿಯ ವಿಶ್ವ ವಿದ್ಯಾಲಯ ಸಂಶೋಧನಾ ಕೇಂದ್ರವಾಗಿ ಹೋರ ಹೊಮ್ಮಲ್ಲಿದೆ ಎಂದರು.


ಮಾಜಿ ಸಚಿವರಾದ ಎಸ್.ಅರ್.ಪಾಟೀಲ ಅಧ್ಯಕ್ಷತೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ ಮಂಜೂರಿಗೊಳಿಸಿ, ಅಗತ್ಯ ಅನುದಾನ ಬಿಡುಗಡೆ ಮಾಡಿದ್ದೆ. ಆದರೆ ಅಧಿಕಾರಿಗಳ ನಿರ್ಲಕ್ಷö್ಯದಿಂದ ಇನ್ನು ಕಾರ್ಯರೂಪಕ್ಕೆ ಬರದಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು.


ಗಣಿತ ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದ್ದು, ಉತ್ತರ ಕರ್ನಾಟಕದ ಮಕ್ಕಳು, ಶಿಕ್ಷಕರು ಇದರ ಪ್ರಯೋಜನ ಪಡೆಯಬಹುದು. ಮಕ್ಕಳು ತ್ವರಿತವಾಗಿ ಗಣಿತ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಲಿದೆ. ಮೂಢನಂಬಿಕೆ, ಕಂದಾಚಾರದ ಮೇಲೆ ಸಮಾಜ, ನಾಡು, ರಾಷ್ಟ್ರ ಕಟ್ಟದೇ, ವಿಜ್ಞಾನದ ತಳಹದಿಯ ಮೇಲೆ ಕಟ್ಟಬೇಕೆಂದು ಕರೆ ನೀಡಿ, ಸಂಸ್ಥೆ ಜನಪರ ಕಾರ್ಯ ಮಾಡುವ ಮೂಲಕ ನಾಡಿನ ಆಶಾ ಕಿರಣವಾಗಿ ಹೊರ ಹೊಮ್ಮಲಿ ಎಂದು ಶುಭ ಹಾರೈಸಿದರು.


ಧಾರವಾಡದ ಪ್ರಾದೇಶಿಕ ವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ, ವಿ.ಡಿ.ಬೋಳಿಶೆಟ್ಟಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮರೇಗುದ್ದಿ ಅಡವಿ ಸಿದ್ದೇಶ್ವರ ಮಠದ ಶ್ರೀ ನಿರುಪಾಧೀಶ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿದರು. ಸಂಸ್ಥೆಯ ಸಂಸ್ಥಾಪಕ ಅದ್ಯಕ್ಷರು ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಎಂ.ಎನ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಕೆ.ನಂನೂರ, ಬಿಇಒ ಆರ್.ಎಸ್.ಆದಾಪೂರ, ಜಿಲ್ಲಾ ಗಣಿತ ಪರಿವಿಕ್ಷಕ ಎಸ್.ಎಸ್.ಹಾಲವರ, ಬಿ.ಆರ್.ಸಿ ಶಿವಾಜಿ ಕಾಂಬಳೆ, ಕಾರ್ಯಕ್ರಮದ ಉತ್ಸವ ಸಮಿತಿ ಅಧ್ಯಕ್ಷ ಡಿ.ಪಿ.ಅಮಲಝರಿ ಹಾಗೂ ಇನ್ನೂ ಅನೇಕರು ಪಾಲ್ಗೊಂಡಿದ್ದರು. ಅನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top