ಹಾಸನ: ಮಗುವಿನ ಕಲಿಕೆಯೇ ಶಿಕ್ಷಣ ಇಲಾಖೆಯ ಮೂಲ ಆಶಯವಾಗಿರುವುದರಿಂದ ಶಿಕ್ಷಕರು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳು ಮಗುವಿನ ಕಲಿಕೆಗೆ ಸೂಕ್ತ ರೀತಿಯ ಅನುಕೂಲಿಸುವಿಕೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಮಗುವಿನ ಸರ್ವತೋಮುಖ ಪ್ರಗತಿಗೆ ಒತ್ತು ನೀಡಬೇಕು. ಈ ಹಿನ್ನಲೆಯಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಆದಂತಹ ಶೈಕ್ಷಣಿಕ ಸಮೀಕ್ಷೆಗಳು ಮತ್ತು ಅಧ್ಯಯನಗಳು ವರದಿಗಳನ್ನು ನೀಡಿವೆ. ಶೈಕ್ಷಣಿಕ ಸಮೀಕ್ಷಾ ವರದಿಯ ದತ್ತಾಂಶಗಳನ್ನು ಆಧರಿಸಿ ಮಗುವಿನ ಕಲಿಕೆಗೆ ಅನುಕೂಲಿಸಬೇಕು ಎಂದು ಹಾಸನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಆದ ಹೆಚ್. ಕೆ. ಪುಷ್ಪಲತಾ ಹೇಳಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಇಲ್ಲಿ ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರ ತಾಲ್ಲೂಕುಗಳ ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಿಗೆ ಏರ್ಪಡಿಸಿದ್ದ ಓರಿಯಂಟೇಷನ್ ಆನ್ ಡಿಫರೆಂಟ್ ಅಸ್ಸೆಸ್ಮೆಂಟ್ಸ್, ಸರ್ವೆಸ್, ಅಂಡ್ ದೇಯರ್ ಇಂಪ್ಲಿಕೇಶನ್ಸ್ ಎಂಬ ಒಂದು ದಿನದ ತರಬೇತಿಯಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಶಾಲೆಗಳಲ್ಲಿ ಮಕ್ಕಳು ನಿರ್ದಿಷ್ಟ ಕಲಿಕಾ ಸಾಮರ್ಥ್ಯ ಆಧಾರಿತ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಕಲಿಕಾ ಫಲಗಳನ್ನು ಸಾಧಿಸಬೇಕು. ಇದಲ್ಲದೆ 2024 ನೇ ಜನವರಿ ತಿಂಗಳಲ್ಲಿ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಫೆಸ್ಟನ್ನು ಆಚರಿಸುವ ಮೂಲಕ ಇಂಗ್ಲಿಷ್ ಮಾಸಾಚರಣೆ ಮಾಡಲು ಹಾಸನ ಡಯಟ್ ಸಾಹಿತ್ಯವನ್ನು ಸಿದ್ಧಪಡಿಸಿ ಸೂಕ್ತ ರೀತಿಯ ತರಬೇತಿಯನ್ನು ಒದಗಿಸಲು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಅನುಷ್ಠಾನಾಧಿಕಾರಿಗಳು ಕಾರ್ಯಕ್ರಮವನ್ನು ಕ್ಲಸ್ಟರ್ ನ ಎಲ್ಲಾ ಶಾಲೆಗಳಲ್ಲಿ ನಡೆಸಿ ಯಶಸ್ಸುಗೊಳಿಸಬೇಕು. ಜನವರಿ ತಿಂಗಳ ಅಂತ್ಯದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು, ಪೋಷಕರ, ಗ್ರಾಮಸ್ಥರ, ಎಸ್.ಡಿ.ಎಂ.ಸಿ. ಸಮಿತಿಯವರ ಸಹಕಾರದೊಂದಿಗೆ ಇಂಗ್ಲಿಷ್ ಹಬ್ಬವನ್ನು ಮಾಡುವ ಮೂಲಕ ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮ ಅಂತ್ಯವಾಗಲಿದೆ ಎಂದು ಹೇಳಿದರು.
ತರಬೇತಿಯ ಸಂಚಾಲಕರು ಮತ್ತು ಡಯಟ್ ನ ಉಪನ್ಯಾಸಕರಾದ ಶಾರದಾ ಕೆ. ರವರು ಮಾತನಾಡಿ ಕ್ಲಸ್ಟರ್ ನಲ್ಲಿ ಬರುವ ಎಲ್ಲಾ ಶಾಲೆಗಳ ಶಿಕ್ಷಕರಿಗೂ ವಿವಿಧ ರೀತಿಯ ಶೈಕ್ಷಣಿಕ ಸಮೀಕ್ಷೆಗಳ ದತ್ತಾಂಶಗಳು ತಿಳಿದಿರಬೇಕು. ಶಾಲೆಯ ಗುಣಮಟ್ಟ ಯಾವ ಹಂತದಲ್ಲಿದೆ ಮತ್ತು ಮುಂದಿನ ದಿನಗಳಲ್ಲಿ ಶಾಲಾ ಸಮಗ್ರ ಅಭಿವೃದಿಗೆ ಏನೆಲ್ಲಾ ಕ್ರಮಗಳನ್ನು ಅನುಸರಿಬೇಕು ಎಂಬುದರ ಕುರಿತು ಕ್ರಿಯಾ ಯೋಜನೆ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು. ಈ ಹಿನ್ನಲೆಯಲ್ಲಿ ಅನುಷ್ಠಾನಾಧಿಕಾರಿಗಳ ಪಾತ್ರ ಬಹಳಷ್ಟಿದೆ ಎಂದರು.
ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ನಗರದ ಜಿಜಿಜೆಸಿ ಪ್ರಧಾನ ಪ್ರೌಢಶಾಲೆಯ ಸಹ ಶಿಕ್ಷಕರಾದ ಕೆ.ಎನ್. ಚಿದಾನಂದ ರವರು ಆ್ಯನ್ಯುಯಲ್ ಸ್ಟೇಟಸ್ ಆಫ್ ಎಜುಕೇಶನ್ ರಿಪೋರ್ಟ್ ಮತ್ತು ರಾಷ್ಟೀಯ ಸಾಧನಾ ಸಮೀಕ್ಷೆಯ ವರದಿಗಳನ್ನು ಪ್ರಸ್ತುತ ಪಡಿಸಿದರು. ಮಕ್ಕಳು ಯಾವ ಯಾವ ಕಲಿಕಾ ಸಾಮರ್ಥ್ಯಗಳಲ್ಲಿ ಶೇಕಡಾವಾರು ಫಲಿತಾಂಶ ಸಾಧಿಸಿದ್ದಾರೆ. ಶೇಕಡಾ ನೂರರಷ್ಟು ಸಾಧನೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ವಿವರಿಸಿದರು.
ಶಿಕ್ಷಣ ಸಂಯೋಜಕ ರಾದ ಎಂ.ಆರ್. ಪ್ರಸನ್ನ ಕುಮಾರ್ ರವರು ತಮ್ಮ ತರಗತಿಯಲ್ಲಿ ಫೌಂಡೇಷನಲ್ ಲರ್ನಿಂಗ್ ಸ್ಟಡಿಯಲ್ಲಿ ಬುನಾದಿ ಸಾಮರ್ಥ್ಯಗಳು ಮಗುವಿನ ಕಲಿಕೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೆ. ನಾಗರಾಜರಾವ್ ರವರು ಸಿಎಸ್ಎಎಸ್ ಪರೀಕ್ಷೆಯಲ್ಲಿ ಮಕ್ಕಳು ಸಾಧಿಸಿರುವ ಪ್ರಗತಿಯ ವರದಿಯನ್ನು ಪ್ರಸ್ತುತ ಪಡಿಸಿದರು. ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರ ತಾಲ್ಲೂಕುಗಳ ಸಿ ಆರ್ ಪಿ ಮತ್ತು ಬಿ.ಆರ್.ಪಿ ಯವರು ಶಿಬಿರಾರ್ಥಿಗಳಾಗಿ ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ