ಚಿಕ್ಕಬಳ್ಳಾಪುರ: ಇಂದು ನಂದಿ ಪಂಚಾಯತ್ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಿ.ಎಂ.ಸಿ.ಎ, ಗ್ರಾಮಾಂತರ ಟ್ರಸ್ಟ್ ಹಾಗೂ ನಂದಿ ಪಂಚಾಯತಿ ವತಿಯಿಂದ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಈ ಒಂದು ಸಭೆಯಲ್ಲಿ ಮಕ್ಕಳು ಅನೇಕ ರೀತಿಯ ಸಮಸ್ಯೆಗಳನ್ನು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಇಲಾಖೆಗಳಿಂದ ಸಕಾರಾತ್ಮಕ ಉತ್ತರಗಳನ್ನು ಪಡೆದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಂಯೋಜಕ ಕಾರ್ಯದರ್ಶಿ ಭಾಸ್ಕರ್, ಇ.ಒ ಮಂಜುನಾಥ್ ಸರ್ ರವರು, ನಂದಿ ಪಂಚಾಯತ್ ಪಿ.ಡಿ.ಓ ರವಿಕುಮಾರ್, ನಂದಿ ಪಂಚಾಯತ್ ಅಧ್ಯಕ್ಷೆ ಮಾನಿನಿ ಶ್ರೀನಿವಾಸ್, ನಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜುನಾಥ್ ಸರ್ ರವರು, ಉಪಾಧ್ಯಕ್ಷ ಮಲ್ಲಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್, ಸಿ.ಆರ್.ಪಿ ನಾರಾಯಣ ಸ್ವಾಮಿ, ಗ್ರಾಮಾಂತರ ಟ್ರಸ್ಟ್ ನ ವ್ಯವಸ್ಥಾಪಕ ಉಷಾ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಕನ್ನಯ್ಯ, ಸಿ.ಎಂ.ಸಿ.ಎ ವತಿಯಿಂದ ಅಭಿಜಿತ್ ಹಾಗೂ ಸ್ವರೂಪ್ ಹಾಗೂ ಅವರ ತಂಡ, ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಶಾಲಾ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮೀಡಿಯಾ ಸಹೋದರರು ಇನ್ನೂ ಹಲವಾರು ಇಲಾಖೆಯವರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.