ಮಂಗಳೂರು: ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯವು ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ದ.ಕ ಜಿಲ್ಲಾ ಘಟಕ ಮಂಗಳೂರು ಇವರ ಸಹಯೋಗದೊಂದಿಗೆ ಮಂಗಳೂರಿನ ವಳಚ್ಚಿಲ್‌ನಲ್ಲಿ 12 ಜನವರಿ 2024ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
ಡಾ. ಅನಂತ ಕೃಷ್ಣ ಭಟ್, ಆಧ್ಯಕ್ಷರು, ಸರಸ್ವತಿ ಎಜುಕೇಶನ್ ಮತ್ತು ವೆಲ್ ಫೇರ್ ಟ್ರಸ್ಟ್, ಮೇಘಾಲಯ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸ್ವಾಮಿ ವಿವೇಕಾನಂದರು ಸಮಾಜಕ್ಕೆ ನೀಡಿದ ಕೊಡುಗೆಗಳ ಕುರಿತು ಅವರು ವಿಸ್ತೃತವಾಗಿ ಚರ್ಚಿಸಿದರು. ನೈತಿಕ ಮೌಲ್ಯಗಳೊಂದಿಗೆ ಉದ್ದೇಶಪೂರ್ವಕ, ಅರ್ಥಪೂರ್ಣ ಜೀವನ ನಡೆಸಲು ಸ್ವಾಮೀಜಿಯವರು ಕಾರ್ಯವೈಖರಿಯನ್ನು ಯುವಕರು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಡಾ.ಎ.ಆರ್ ಶಬರಾಯ, ಅಧ್ಯಕ್ಷರು ದ.ಕ ಜಿಲ್ಲಾ ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ಹಾಗೂ ಪ್ರಾಂಶುಪಾಲರು, ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯ, ವಳಚ್ಚಿಲ್, ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದೇಶದಲ್ಲಿರುವ ಸಾಧಕ ಭಾರತೀಯರನ್ನು ನೆನಪಿಸಿ ಕಠಿಣ ಪರಿಶ್ರಮ, ದೃಢತೆ, ಸಮರ್ಪಣೆ ಮತ್ತು ವಿಶೇಷವಾಗಿ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಸ್ಮರಣಿಸಿದರು. ಹಾಗೆಯೇ ಯುವಜನತೆ ದೃಢ ನಿರ್ಧಾರ ಹಾಗೂ ಧೈರ್ಯದಿಂದ ಸಾಧನೆಯ ಹಾದಿಯಲ್ಲಿ ಮುನ್ನಡೆದು ತಾಯ್ನಾಡಿಗೂ ಸೇವೆ ನೀಡಬೇಕೆಂದು ಕರೆಯಿತ್ತರು.
ಡಾ. ಶ್ರೀಪತಿ ಡಿ, ಪ್ರೊಫೆಸರ್ ಮತ್ತು ಎನ್ ಎಸ್.ಎಸ್ ಸಂಯೋಜಕರು ಜನವರಿ 12ರಂದು ರಾಷ್ಟ್ರೀಯ ಯುವ ದಿನದ ಮಹತ್ವವನ್ನು ವಿವರಿಸಿದರು ಮತ್ತು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಡಾ.ಇ.ವಿ.ಎಸ್.ಸುಬ್ರಹ್ಮಣ್ಯಂ, ಪ್ರೊಫೆಸರ್, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ ಮತ್ತು ಉಪಾಧ್ಯಕ್ಷರು, ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್‌ನ ಮಂಗಳೂರು ಮತ್ತು ಡಾ. ಕೃಷ್ಣಾನಂದ ಕಾಮತ್, ಪ್ರೊಫೆಸರ್, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ, ಮಂಗಳೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ನಿರೀಕ್ಷ ಮತ್ತು ಕುಮಾರಿ ವಿನುತ ಇವರು ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಜೋಸ್ನಾ ಪ್ರಿಯ ಇವರು ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


