ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ‘ಹೃದಯ ಸ್ತಂಭನ ಮಾಹಿತಿ, ಪ್ರಥಮ ಚಿಕಿತ್ಸೆ (ಸಿಪಿಆರ್) ಪ್ರಾತ್ಯಕ್ಷಿಕೆ ತರಬೇತಿ’

Upayuktha
0



ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ (ರಿ.)ಯ ಆಡಳಿತಕ್ಕೊಳಪಟ್ಟ ಸ್ಥಳೀಯ ಶಾಲೆ-ಕಾಲೇಜುಗಳ ಬೋಧಕ- ಬೋಧಕೇತರ ಸಿಬ್ಬಂದಿಗೆ ‘ಹೃದಯ ಸ್ತಂಭನ ಕುರಿತು ಮಾಹಿತಿ, ಪ್ರಥಮ ಚಿಕಿತ್ಸೆ (ಸಿಪಿಆರ್) ಪ್ರಾತ್ಯಕ್ಷಿಕೆ- ತರಬೇತಿ’ ಕಾರ್ಯಕ್ರಮವು ಉಜಿರೆಯ ಎಸ್.ಡಿ.ಎಂ. ಬಿ.ಎಡ್. ಹಾಲ್’ನಲ್ಲಿ ಜ.12 ರಂದು ಶುಕ್ರವಾರ ನಡೆಯಿತು.


 


ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರೋವರ್ಸ್ & ರೇಂಜರ್ಸ್ ಘಟಕ ಹಾಗೂ ಉಡುಪಿಯ ಎಸ್.ಡಿ.ಎಂ. ಕಾಲೇಜ್ ಆಫ್ ಆಯುರ್ವೇದ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


 


ಎಸ್.ಡಿ.ಎಂ. ಕಾಲೇಜ್ ಆಫ್ ಆಯುರ್ವೇದ ಸಂಸ್ಥೆಯ ಶಲ್ಯತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮತ್ತು ಎನ್.ಎ.ಬಿ.ಎಚ್. (ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ & ಹೆಲ್ತ್ ಕೇರ್ ಪ್ರೊವೈಡರ್ಸ್) ಸಂಯೋಜಕಿ ಡಾ. ಸಹನಾ ಕಾಮತ್ ಅವರು ಹೃದಯ ಸ್ತಂಭನ ಕುರಿತು ಮಾಹಿತಿ ನೀಡಿದರು. ಕಾರ್ಡಿಯೋಪಲ್ಪನರಿ ರಿಸಸಿಟೇಶನ್ (ಸಿಪಿಆರ್) ವಿಧಾನ ಬಳಸಿ ಪ್ರಥಮ ಚಿಕಿತ್ಸೆ ನೀಡುವ ಕುರಿತು ವಿವರಿಸಿದರು.


 


ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಪ್ರೀತಿ ಹಾಗೂ ಡಾ. ಸುದರ್ಶನ್ ಅವರು ಸಿಪಿಆರ್ ಮ್ಯಾನಿಕಿನ್ ಸಲಕರಣೆ ಬಳಸಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ತರಬೇತಿ ನೀಡಿದರು.


 


ಎಸ್.ಡಿ.ಎಂ. ಬಿ.ಎಡ್. ಕಾಲೇಜು ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಲ್ಡಾನ ಉಪಸ್ಥಿತರಿದ್ದರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ರೇಂಜರ್ ಲೀಡರ್ ಗಾನವಿ ವಂದಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top