ಸಹೋದರರೆಂದರೆ ರಾಮ ಲಕ್ಷ್ಮಣರಾಗಿರಬೇಕು

Upayuktha
0



ಹೋದರರೆಂದರೆ ರಾಮ ಲಕ್ಷ್ಮಣ ಭರತರಾಗಿರಬೇಕು. ರಾಮ ವನವಾಸಕ್ಕೆಂದು ಕಾಡಿಗೆ ಹೊರಟಾಗ  ಅಣ್ಣನ ಜೊತೆಗೆ ತಮ್ಮ ಲಕ್ಷ್ಮಣ ಉಟ್ಟಬಟ್ಟೆಯ  ಮೇಲೆ ಆಗ ತಾನೇ ದಾಂಪತ್ಯಕ್ಕೆ ಕಾಲಿಟ್ಟ ಹೆಂಡತಿ ಊರ್ಮಿಳಾಳನ್ನು ಅರಮನೆಯಲ್ಲೇ ಬಿಟ್ಟು ಹೋಗಲು ಸಿದ್ದನಾದ, ಆಗ ರಾಮ ಹೇಳಿದ ಇದು ನನ್ನ ಕರ್ತವ್ಯದ ಮಾರ್ಗ ನೀನು ಇಲ್ಲೇ ಅರಮನೆಯಲ್ಲಿ ಇದ್ದುಕೊಂಡು ನಿನ್ನ ಕಾರ್ಯವನ್ನ ಮಾಡು ಎಂದನು, ಲಕ್ಷ್ಮಣ ಹೇಳಿದ ಅಣ್ಣ ಅತ್ತಿಗೆಯನ್ನು ಮಾತ್ರ ಕಾಡಿನಲ್ಲಿ ಬಿಟ್ಟು ನಾನು ಅರಮನೆಯಲ್ಲಿದ್ದರೂ ನನಗೆ ನೆಮ್ಮದಿ ಇಲ್ಲ ಆ ಅರಮನೆ ನನ್ನ ಪಾಲಿಗೆ ಗೋರ ಕಾಡವೇ ಆಗಿರುತ್ತದೆ ಅಣ್ಣ ನಿನ್ನ ಜೊತೆಗೆ ನಾನು ಕಾಡಿನಲ್ಲಿದ್ದರೂ ನನಗೆ ಆ ಕಾಡೆ ಅರಮನೆಯಾಗಿರುತ್ತದೆ ಎಂದು ಅಣ್ಣನ ಜೊತೆಗೆ ಹೊರಟೆ ಬಿಟ್ಟ. ಸುಧೀರ್ಘ ಕಾಡ ಪ್ರಯಾಣದಲ್ಲಿ ಅಣ್ಣ ಅತ್ತಿಗೆಯರಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತಿದ್ದ ಅದರಂತೆ ಅಣ್ಣ ರಾಮ ತಮ್ಮ ಲಕ್ಷ್ಮಣನ ಆರೋಗ್ಯದ ಮೇಲೆ ಕಾಳಜಿ ವಹಿಸುತ್ತಿದ್ದ ತಮ್ಮನಿಗೆ ಮುಳ್ಳು ಚುಚ್ಚಿದರೂ ಅಣ್ಣನ ಕಣ್ಣಲ್ಲಿ ನೀರು ಬರುತ್ತಿತ್ತು ಹಾಗಿತ್ತು ಅವರ ಸಹೋದರತ್ವ.




 ಕಾಡಿನಲ್ಲಿ ರಾವಣನ ತಂಗಿ ಶೂರ್ಪಣಕಿ ಸುಂದರ ಸುರುದ್ರೂಪಿ ರೂಪವತಿಯಾಗಿ ಬಂದು ಲಕ್ಷ್ಮಣನನ್ನು ಮದುವೆಯಾಗುವಂತೆ ಪಿಡಿಸಿದಳು, ಒಂದು ಸುಂದರ ಹೆಣ್ಣು ತಾನೇ ಸ್ವತಃ ಬಂದು ಮದುವೆಯಾಗುವಂತೆ ಕೇಳಿಕೊಂಡರು  ಲಕ್ಷ್ಮಣ ಹೇಳಿದ ಮಾತು ಮಾತ್ರ ನಾನು ಅಣ್ಣನ ಸೇವಕ ಸದಾಕಾಲ ಅವನ ಸೇವೆಯಲ್ಲೇ ಇರುವೆ ನನಗೆ ಅವನೇ ಎಲ್ಲವೂ ನಿನ್ನ ಅಗತ್ಯತೆ ನನಗಿಲ್ಲ ಎಂದು ತಿರಸ್ಕರಿಸಿದ ಲಕ್ಷ್ಮಣನ ಮನಸ್ಸಿನಲ್ಲಿ ಎಷ್ಟರಮಟ್ಟಿಗೆ ಅನ್ನನೇ ತುಂಬಿಕೊಂಡಿರಬಹುದು ಒಮ್ಮೆ ಕಲ್ಪನೆ ಮಾಡಿಕೊಳ್ಳಿ. ಹಾಗೆ ರಾಮನು ಸಹ ಲಂಕೆಯ ಯುದ್ಧದಲ್ಲಿ ರಾವಣನ ಬಾನಿಗೆ ಲಕ್ಷ್ಮಣ ಮೂರ್ಚೆ ಹೋದಾಗ ಇಡೀ ಭೂಮಿಯೇ ಕುಸಿದು ತನ್ನ ಮೇಲೆ ಬಿದ್ದ ಹಾಗೆ ರಾಮ ತಲೆ ಮೇಲೆ ಕೈ ಹೊತ್ತು ಕುಳಿತ, ಸೀತೆ ಕಳೆದುಹೋದಾಗಲ್ಲು  ದುಃಖಿಸದ ಆತ ಲಕ್ಷ್ಮಣ ಮೂರ್ಚಿತನಾಗಿ ಬಿದ್ದಾಗ ಪ್ರಭು ರಾಮಚಂದ್ರರ ಕಣ್ಣಲ್ಲಿ ಕಣ್ಣೀರಿನ ಕೂಡಿಯೇ ಹರಿಯುತ್ತಿತ್ತು ಆ ಕ್ಷಣ ರಾಮ ಎಲ್ಲವನ್ನೂ ಮರೆತು ಲಕ್ಷ್ಮಣನಿಗಾಗಿ ಗೋಗರಿಯುತ್ತಿದ್ದ ತನ್ನ ಅರಿವೇ ತನಗಿಲ್ಲದಂತೆ ಲಕ್ಷ್ಮಣ ಲಕ್ಷ್ಮಣ ಎಂದು ಒದ್ದಾಡುತ್ತಿರಬೇಕಾದರೆ  ಹನುಮಂತ ಸಂಜೀವಿನಿಯನ್ನು ತಂದು ಲಕ್ಷ್ಮಣನನ್ನು ಎಚ್ಚರಗೊಳಿಸಿದಾಗ ರಾಮನ ಆನಂದಕ್ಕೆ ಪಾರವೇ ಇರಲಿಲ್ಲ. 




ಲಕ್ಷ್ಮಣ ನೀನು ಮತ್ತೆ ಬದುಕಿದೆಯಲ್ಲ ನನಗೆ ಅಷ್ಟೇ ಸಾಕು. ಈ ಯುದ್ಧವು ಬೇಡ ಸೀತೆಯು ಬೇಡ ನೀನೊಬ್ಬ ನನ್ನ ಜೊತೆಗಿದ್ದರೆ ಸಾಕು ನಾವು ಈ ಯುದ್ಧ ನಿಲ್ಲಿಸಿ ಹೋಗೋಣ ನಡಿ ಎಂದ ಲಕ್ಷ್ಮಣ ಅಣ್ಣನನ್ನು ಸಂತೈಸಿದ ನಿನ್ನನ್ನ ಬಿಟ್ಟು ನಾನೆಲ್ಲಿ ಹೋಗಲಿ ಈ ಮೂರ್ಛೆ ಕ್ಷಣಿಕ ಅತ್ತಿಗೆಯನ್ನ ಕರೆದುಕೊಂಡೇ ಹೋಗೋದು ಎಂದು ಅಣ್ಣನಿಗೆ ಧೈರ್ಯ ತುಂಬಿದ. ಇನ್ನೂ  ಅಯೋಧ್ಯೆಯಲ್ಲಿ ಅಣ್ಣನ ಪಾದುಕೆಯನ್ನ ಸಿಂಹಾಸನದ ಮೇಲೆ ಇಟ್ಟು ರಾಜ್ಯಭಾರ ಮಾಡುತ್ತಿದ್ದ ಭರತ ತನ್ನ ಅಣ್ಣ ರಾಮನ ಬರುವಿಕೆಯನ್ನು ಜಾತಕ ಪಕ್ಷಿಯ ಹಾಗೆ ಕಾಯುತ್ತಾ ಅಣ್ಣ ಹೇಳಿ ಹೋದ ಸಮಯಕ್ಕೆ ಬರದೇ ಹೋದರೆ ಬೆಂಕಿಯ ಕುಂಡವನ್ನ ಹಾರುವ ಶಪಥ ಮಾಡಿದ  ರಾಮ ತಾನು ಹೇಳಿದ ಸಮಯಕ್ಕೆ ಲಂಕೆಯನ್ನ ಗೆದ್ದು ಸೀತೆಯನ್ನ ಕರೆದುಕೊಂಡು ಅಯೋಧ್ಯೆಗೆ ಬಂದಾಗ ಸಂಪೂರ್ಣ ರಾಜ್ಯವನ್ನ ಅಣ್ಣನಿಗೆ ಒಪ್ಪಿಸಿ ಅವನ ಸೇವೆಗೆ ಅಣಿಯಾದ ಮಹಾನ್ ಚೇತನ ಸೀಲ ತಮ್ಮ ಭರತ. ಇವರೆಲ್ಲರ ಸಹೋದರತ್ವ ದೇವಾನುದೇವತೆಗಳಿಗೆ ಅಸೂಯ ಹುಟ್ಟಿಸಿತ್ತು.




 ಇಂದು ನಮ್ಮ ಸಹೋದರತ್ವ ಹೇಗಿದೆ ಎಂದರೆ ಒಂದು ಊರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರು ಅವರ ತಂದೆ ತಾಯಿಗಳು ಅಕಾಲಿಕ ಮರಣಕ್ಕೆ ತುತ್ತಾದರು ಆನಂತರ ಆ ಇಬ್ಬರು ಅಣ್ಣ ತಮ್ಮಂದಿರು ಬೇರೆಯಾಗಲು ನಿರ್ಧರಿಸಿದರು ಅವರಿಗೆ ಪಿತ್ರಾಜಿತ ಆಸ್ತಿ ಎಂದರೆ ಒಂದು ಆಕಳು ಮಾತ್ರ ಅದನ್ನ ಹೇಗೆ ಇಬ್ಬರು ಪಾಲ ಮಾಡಿಕೊಳ್ಳಬಹುದೆಂದು  ಆಲೋಚಿಸ ತೊಡಗಿದರು ಅಣ್ಣ ಸ್ವಲ್ಪ ಬುದ್ಧಿವಂತ ಆತ ಹೇಳಿದ ಇದನ್ನ ಮಾರಿದರೆ ತಂದೆ ತಾಯಿಗಳ ನೆನಪನ್ನೇ ಕಳೆದುಕೊಳ್ಳುತ್ತೇವೆ ಅದಕ್ಕಾಗಿ ಇದರ ಹೊಟ್ಟೆ ಹಿಂದಿನ ಭಾಗ ನನಗೆ ಹೊಟ್ಟೆಯ ಮುಂದಿನ ಭಾಗ ನಿನಗೆ ಈ ರೀತಿ ಇಬ್ಬರು ಹಂಚಿಕೊಂಡು ಅದರ ಉಪಚಾರ ಮಾಡೋಣ ಎಂದಾಗ ಸೌಮ್ಯ ಸ್ವಭಾವದ ತಮ್ಮ ಒಪ್ಪಿಕೊಂಡ ತನಗೆ ಹೊಟ್ಟೆಯ ಮುಂದಿನ ಭಾಗ ಸಿಕ್ಕಿರುವುದರಿಂದ ಅದಕ್ಕೆ ಮೇವು ಹಾಕುವುದು ನೀರು ಕುಡಿಸುವುದು ಮಾಡುತ್ತಿದ್ದ ಅಣ್ಣ ಅದರ ಹೊಟ್ಟೆ ಹಿಂದಿನ ಭಾಗ ಪಡೆದುಕೊಂಡಿರುವುದರಿಂದ  ಹಾಲು ಸಗಣಿಗೊಬ್ಬರವನ್ನೆಲ್ಲ ತಾನೇ ಪಡೆಯುತ್ತಿದ್ದ  ಆಕಳ ಹೊಟ್ಟೆ ತುಂಬಿಸುವುದು ತಮ್ಮ ಲಾಭ ಪಡೆಯುವುದು ಅಣ್ಣ. 




ತಮ್ಮನಿಗೆ ಸಾಕು ಸಾಕಾಗಿ ಹೋಗಿತ್ತು ಅದಕ್ಕಾಗಿ ಒಂದು ಉಪಾಯ ಮಾಡಿ ಎರಡು ದಿನ ಹಸುವನ್ನು ಉಪವಾಸ ಕಟ್ಟಿದ ಅಣ್ಣ ಆಕಳ ಹಾಲು ಹಿಂಡಲು ಬಂದಾಗ ಅದು ತನ್ನ ಕಾಲಿನಿಂದ ಜಾಡಿಸಿ ಒದ್ದ ಕಾರಣಕ್ಕೆ  ಅಣ್ಣ ತನ್ನ ಸೊಂಟವನ್ನೇ ಮುರಿದುಕೊಂಡುಬಿಟ್ಟ,ಇಂದಿನ ಸಹೋದರತ್ವದಲ್ಲಿ ಸ್ವಾರ್ಥವೇ ತುಂಬಿಕೊಂಡು ಬಿಟ್ಟಿದೆ. ಅನ್ನೋನ್ಯತೆಯೇ ಮರೆಯಾಗಿದೆ.ಅಣ್ಣ ತಮ್ಮಂದಿರು ತಾವು ಹಂಚಿಕೊಂಡ ಭೂಮಿಯೊಳಗೂ ಸೀಮೆಗಾಗಿ ಜಗಳಾಡಿಕೊಂಡು ನ್ಯಾಯಾಲಯಕ್ಕೆ  ಅಲೆಯುತ್ತಿರುವುದನ್ನ ನಾವು ಕಣ್ಣಾರೆ ಕಾಣುತ್ತೇವೆ, ತಮ್ಮ ಸಂಬಂಧವನ್ನೇ ಮರೆತು ದ್ವೇಷ ಸಾಧಿಸುತ್ತಾರೆ.ಇವತ್ತಿನ ಪೀಳಿಗೆಗೆ ರಾಮ ಲಕ್ಷ್ಮಣ ಭರತರ ಸಹೋದರ ಸಂಬಂಧದ ಕಥೆಗಳು   ಮಾರ್ಗದರ್ಶನಗಳಾಗಬೇಕಿದೆ ಆಗ ಮಾತ್ರ ಸುಂದರ ಕುಟುಂಬಗಳು  ನೋಡಲು ಸಿಗುತ್ತವೆ.


           


- ಶ್ರೀರಾಮಕೃಷ್ಣ ದೇವರು. ಮರೆಗುದ್ದಿ

  ಶ್ರೀ ಷಣ್ಮುಖಾರೂಢ  ಮಠ.ವಿಜಯಪುರ

   ಮೊ :-6364111512 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top