ಜೈನ್ ಮೆಡಿಕಲ್ ಸೆಂಟರ್ ನಲ್ಲಿ ರಕ್ತದಾನ ಹಾಗೂ ಕೂದಲುದಾನ ಶಿಬಿರ

Upayuktha
0



ಮೂಡುಬಿದಿರೆ : ಭಾರತೀಯ ಕಥೋಲಿಕ್ ಯುವ ಸಂಚಾಲನ್ ಮೂಡುಬಿದಿರೆ ಘಟಕ ಇದರ ಸುವರ್ಣ ಮಹೋತ್ಸವದ ಅಂಗವಾಗಿ ರೋಟರಿ ಕ್ಲಬ್ ಆಫ್ ಮೂಡಬಿದಿರೆ ಟೆಂಪಲ್ ಟೌನ್, ಜೈನ್ ಮೆಡಿಕಲ್ ಸೆಂಟರ್ ಹಾಗೂ ಫಾದರ್ ಮುಲ್ಲರ್ ಬ್ಲಡ್ ಬ್ಯಾಂಕ್ ಇದರ ಸಹಯೋಗದೊಂದಿಗೆ 26 ಜನವರಿ 2024 ರಂದು ದಿವಂಗತ ಗ್ರೇಶನ್ ರೋಡ್ರಿಗಸ್ ಇವರ ಸವಿನೆನಪಿಗಾಗಿ ರಕ್ತದಾನ ಮತ್ತು ಕೂದಲುದಾನ ಶಿಬಿರವನ್ನು ಜೈನ್ ಮೆಡಿಕಲ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಯಿತು.



ಕೊರ್ಪುಸ್ ಕ್ರೈಸ್ತ ಚರ್ಚ್ ಇದರ ಧರ್ಮಗುರುಗಳು ವಂದನೀಯ ಒನಿಲ್ ಡಿಸೋಜ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೊ. ರೋಬರ್ಟ್ ರೊನಾಲ್ಡ್ ಫೆರ್ನಾಂಡಿಸ್, ಅಧ್ಯಕ್ಷರು ರೋಟರಿ ಕ್ಲಬ್ ಆಫ್ ಮೂಡಬಿದಿರೆ ಟೆಂಪಲ್ ಟೌನ್, ಡಾ. ಮಹಾವೀರ ಜೈನ್ ವ್ಯವಸ್ಥಾಪಕ ನಿರ್ದೇಶಕರು ಜೈನ್ ಮೆಡಿಕಲ್ ಸೆಂಟರ್, ವಿನ್ಸೆಂಟ್ ಮಸ್ಕರೇನಸ್, ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕರು, ದಿವಂಗತ ಗ್ರೇಶನ್ ರೋಡ್ರಿಗಸ್ ಇವರ ತಂದೆ  ಲಿಯೋ ರೋಡ್ರಿಗಸ್ ಮತ್ತು  ರೂಬನ್ ಸೆರಾವೊ ಅಧ್ಯಕ್ಷರು ಭಾರತೀಯ ಕಥೋಲಿಕ್ ಯುವ ಸಂಚಾಲನ ಮೂಡುಬಿದಿರೆ ಘಟಕ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 62 ದಾನಿಗಳು ರಕ್ತದಾನ ಹಾಗೂ 15 ದಾನಿಗಳು ತಮ್ಮ ಕೂದಲು ದಾನ ಮಾಡಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top