ಉಡುಪಿ ಕೃಷ್ಣಭವನದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರ ಆಶೀರ್ವಚನ

Upayuktha
0

ಕಾರ್ಯವನ್ನು ಕರ್ತವ್ಯವಾಗಿ ನಿಭಾಯಿಸಿದರೆ ಪುಣ್ಯ ಪ್ರಾಪ್ತಿ: ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು




ಉಡುಪಿ: ಭಗವದ್ವೀತೆಯಲ್ಲಿ ಹೇಳಿರುವಂತೆ ನಾವು ಕೆಲಸವನ್ನು ಮಾಡಬೇಕು ಫಲವನ್ನು ನಿರೀಕ್ಷಿಸಬಾರದು. ನಮ್ಮ ಕಾರ್ಯವನ್ನು ಕರ್ತವ್ಯ ಎಂದು ಮಾಡಿದಾಗ ಭಗವಂತ ಮೆಚ್ಚಿ ಫಲ ನೀಡುತ್ತಾನೆ. ಅಂತೆಯೇ  ನಮ್ಮ ಡಾ. ಸಿಎ ಎ. ರಾಘವೇಂದ್ರರಾಯರು ತಮ್ಮ ಕರ್ತವ್ಯವನ್ನು ಶ್ರದ್ಧೆ ನಿಷ್ಠೆಯಿಂದ ನಿಭಾಯಿಸುವುದನ್ನು ಕಂಡು ನಮಗೂ ಹುಮ್ಮಸ್ಸು ದೊರೆಯುತ್ತಿದೆ ಎಂದು ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು. 




ಪರ್ಯಾಯ ಪೂರ್ವ ತೀರ್ಥಕ್ಷೇತ್ರಗಳ ಭೇಟಿ ಸಂದರ್ಭದಲ್ಲಿ ಶನಿವಾರ ನಗರದ ಉಡುಪಿ ಶ್ರೀ ಕೃಷ್ಣ ಭವನ ಹೋಟೆಲಿಗೆ ಭೇಟಿ ನೀಡಿ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಸಿ ಎ. ರಾಘವೇಂದ್ರರಾವ್‌, ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ ರಾವ್‌  ಅವರ ಆತಿಥ್ಯವನ್ನು ಸ್ವೀಕರಿಸಿ ಪಟ್ಟ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವದಿಸಿದರು. 




ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಸಿ ಎ. ರಾಘವೇಂದ್ರರಾವ್‌ ಮಾತನಾಡಿ, ಮಧ್ವ ತತ್ವವನ್ನು ದೇಶದ ಹೊರಗೂ ಸಾರಿದ ಕೀರ್ತಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಸಲ್ಲುತ್ತದೆ ಎಂದರು. 




ಪುತ್ತಿಗೆ ಶ್ರೀಗಳ ಶಿಷ್ಯರಾದ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಆಶೀರ್ವಚಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ ರಾವ್‌, ಶ್ರೀನಿವಾಸ ವಿವಿ ವಿಶ್ವಸ್ಥ ಮಂಡಳಿ ಸದಸ್ಯರಾದ  ಎ. ವಿಜಯಲಕ್ಷ್ಮೀ ಆರ್‌. ರಾವ್‌, ಪ್ರೊ. ಇ ಆರ್‌ ಮಿತ್ರಾ ಎಸ್‌. ರಾವ್‌, ಶ್ರೀನಿವಾಸ ವಿವಿ ರಿಜಿಸ್ಟಾರ್‌ ಡಾ. ಅನಿಲ್‌ ಕುಮಾರ್‌, ಅಭಿವೃದ್ಧಿ ರಿಜಿಸ್ಟಾರ್‌ ಡಾ. ಅಜಯ್ ಕುಮಾರ್‌ ಹಾಗೂ ಶ್ರೀನಿವಾಸ ವಿವಿಯ ವಿವಿಧ ಸಂಸ್ಥೆಗಳ ಡೀನ್‌ಗಳು ಉಪಸ್ಥಿತರಿದ್ದರು. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top