ಹುಟ್ಟುಹಬ್ಬ ಜೀವನದ ಹೊಸ ಸಂಭ್ರಮ

Upayuktha
0



ಹುಟ್ಟಿದ ದಿನ ಸಾಮಾನ್ಯವಾಗಿ ಎಲ್ಲರೂ ಖುಷಿಯಿಂದ ಆಚರಿಸುವ ಒಂದು ಸಂದರ್ಭ. ಹುಟ್ಟು ಎಂಬುದು ಪುಣ್ಯ. ಈ ಹುಟ್ಟಿದ ದಿನ ಪ್ರತಿವರ್ಷ ಬರುತ್ತದೆ. ಹುಟ್ಟಿದ ದಿನ ಎಂದಾಗ ನನಗೆ ಸಂತೋಷಕ್ಕಿಂತ ನೋವು ಜಾಸ್ತಿ ಏಕೆಂದರೆ ಭೂಮಿಯ ಮೇಲೆ ಈ ಕನ್ನಡ ನಾಡಿನ ಮೇಲೆ ನಾನು ಬದುಕುವ ಕಾಲ ಕಡಿಮೆಯಾಗಿದೆ ಅಂತ. ನಾನು ಮತ್ತೆ ಹುಟ್ಟಬಹುದೇ ಎಂಬ ಕುತೂಹಲದ ನಡುವೆ ನನ್ನ ಹುಟ್ಟು ಹಬ್ಬ ನಡೆಯುತ್ತದೆ. ಸಂತೋಷ ಭೂಮಿಯ ಮೇಲೆ ನಮ್ಮ ಆಯುಷ ಕಡಿಮೆಯಾಗಿರುವುದನ್ನು ಮರೆಸುತ್ತದೆ.




ಇನ್ನೂ ತಾಯಿಯಾಗಿ ಯೋಚಿಸಿದಾಗ, ನನ್ನ ಮಗ/ಮಗಳು ಇಷ್ಟು ದೊಡ್ಡವರಾದರೇ. ಇನ್ನೂ ಇವರ ಭವಿಷ್ಯ ಹೇಗೆ ರೂಪಿಸುವುದು. ಮಗಳು ದಾರಿ ತಪ್ಪದ ರೀತಿ ಹೇಗೆ ನೀತಿ ಪಾಠ ಮಾಡಲಿ ಎಂದು. ತಂದೆಯಾಗಿ, ತಂದೆ ಯಾಗಿ ಯೋಚನೆ ಮಾಡಲು ಯಾರಿಗೂ ಸಾಧ್ಯವಿಲ್ಲ. ಏಕೆಂದರೆ ಆತನ ನೇರಕ್ಕೆ ಯಾರು ಬರಲಾರರು. ಒಬ್ಬ ತಂದೆ ಮಗಳ ಹುಟ್ಟು ಹಬ್ಬ ಮಾಡಿದರೆ ಆತ ತನ್ನ ಮಗಳಿಗೆ ಮದುವೆ ಮಾಡುವಷ್ಟು ಸಂತೋಷ ಪಡುತ್ತಾರೆ. ಅಲ್ಲದೆ ತಂದೆ ಮಗಳ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಾನೆ.ಸಮಾಜವನ್ನು ಹೆದರಿಸಿ ಬದುಕಬಲ್ಲಲೇ ಎಂಬುದನ್ನು ಯೋಚಿಸಬಲ್ಲ.




ಇನ್ನೂ ಮಗನಾದರೆ ಸಮಾಜದಲ್ಲಿ ಒಂದು ಸ್ಥಾನ ಪಡೆಯುವವರೆಗೆ ಮಗನನ್ನು ಜೋಪಾನ ಮಾಡುವ ತಂದೆ ಯವೌನದ ಹುಟ್ಟು ಹಬ್ಬ ಬಂದಾಗ ಮನಸ್ಸಿನಲ್ಲಿ ತುಂಬಾ ಹೆದರುತ್ತಾನೆ. ಮಗ ಸಮಾಜದಲ್ಲಿ ಇರುವ ಕೆಟ್ಟ ಚಟವನ್ನು ಕಲಿಯದ ರೀತಿ ಕೆಲವು ನಿಯಮಗಳನ್ನು ಜಾರಿ ತರುತ್ತಾನೆ.  ಹುಟ್ಟು ಹಬ್ಬ ವ್ಯಕ್ತಿ ಜೀವನದ ಬದಲಾವಣೆಯಾಗಿದೆ.




- ಹರ್ಷಿತಾ ವಿ ಪಿ

ವಿವೇಕಾನಂದರ ಸ್ವಾಯತ್ತ ಮಹಾವಿದ್ಯಾಲಯ 

ನೆಹರು ನಗರ ಪುತ್ತೂರು 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top