ಬೆಂಗಳೂರು: ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಗಾಂಧಿ ತತ್ವದ ಕುರಿತು ವಿಶೇಷ ಉಪನ್ಯಾಸ

Upayuktha
0



ಬೆಂಗಳೂರು: ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಮಂಗಳವಾರ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 


"ವರ್ತಮಾನದ ಯುವ ಜನತೆಗೆ ಗಾಂಧಿ ತತ್ವದ ಅಗತ್ಯ" ಎಂಬ ವಿಷಯದ ಕುರಿತು ಬೆಂಗಳೂರಿನ ಸರ್ವೋದಯ ಮಂಡಳಿಯ ಅಧ್ಯಕ್ಷ‌ರಾದ ಡಾ.ಎಚ್.ಎಸ್. ಸುರೇಶ್ ಅವರು ಉಪನ್ಯಾಸ ನೀಡಿದರು.


ಗಾಂಧೀಜಿಯವರ ಮೂಲತತ್ವಗಳ ಆಧಾರದ ಮೇಲೆ ಎನ್ಎಸ್ಎಸ್ ರೂಪುಗೊಂಡಿರುವುದು. ಗಾಂಧೀಜಿಯವರು ಯುವ ಜನತೆಯ ಮೇಲೆ ಅಪಾರವಾದ ಭರವಸೆ ಹೊಂದಿದ್ದರು. ಯುವಜನತೆ‌ಯಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ನಂಬಿದ್ದರು. ಆದರೆ ಇಂದಿನ ತಲೆಮಾರು ಗಾಂಧೀಜಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಪ್ಪು ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. 


ದೇಶದ ಉನ್ನತಿ ಮತ್ತು ಅವನತಿಗಳೆರಡು ಯುವಜನತೆಯನ್ನು ಅವಲಂಬಿಸಿರುತ್ತವೆ. ಯುವ ಜನತೆಯನ್ನು ಅಗತ್ಯವಾದ ತರಬೇತಿಯೊಂದಿಗೆ  ಸದೃಢಗೊಳಿಸಿದಾಗ ದೇಶವೂ ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಎನ್.ಎಸ್.ಎಸ್. ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.


ಕುವೆಂಪು ವಿವಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಪ್ರಕಾಶ್ ಮರ್ಗನಳ್ಳಿ, ಡಾ. ಮುದಕಪ್ಪ ಹಾಗೂ ಡಾ. ಅವಿನಾಶ್, ಡಾ. ಶುಭಾ ಮರವಂತೆ, ಡಾ. ಅರುಣ್ ಮತ್ತು ಸಹ್ಯಾದ್ರಿ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಿನ ಸ್ವಯಂಸೇವಕ ಮತ್ತು ಸೇವಕಿಯರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top