ಆಳ್ವಾಸ್ ಪದವಿ ಪೂರ್ವ ಕಾಲೇಜು: ಮನಃಶಾಸ್ತ್ರ ಸಮಾಲೋಚಕಿ ಶೈಲಜಾ ಶಾಸ್ತ್ರಿ

Upayuktha
0

ಕಾಲ, ತಲೆಮಾರಿಗೆ ಅನುಗುಣವಾಗಿ ಅರ್ಥೈಸಿ: ಡಾ ಶೈಲಜಾ ಶಾಸ್ತ್ರಿ



ವಿದ್ಯಾಗಿರಿ: ‘ಪ್ರತಿ ವಿದ್ಯಾರ್ಥಿಯನ್ನೂ ಅವರ ಕಾಲ ಹಾಗೂ ತಲೆಮಾರಿಗೆ ಅನುಗುಣವಾಗಿ ಅರ್ಥೈಸಿಕೊಳ್ಳಬೇಕು’ ಎಂದು ಬೆಂಗಳೂರಿನ ಮನಃಶಾಸ್ತ್ರ ಸಮಾಲೋಚಕಿ  ಡಾ ಶೈಲಜಾ ಶಾಸ್ತ್ರಿ ಹೇಳಿದರು. 




ಇಲ್ಲಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ಆಳ್ವಾಸ್ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡ ‘ವಿದ್ಯಾರ್ಥಿ ಮತ್ತು ಪೋಷಕಕರೊಂದಿಗೆ ಆರೋಗ್ಯಕರ ಸಂಬಂಧ ನಿರ್ಮಿಸುವ ಕಲೆ’ ಕುರಿತು ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಆ ವಿದ್ಯಾರ್ಥಿ ಜೊತೆ ಸ್ಪಂದಿಸಲು ಶಿಕ್ಷಕರು ಹಾಗೂ ಪೋಷಕರು ತಮ್ಮೊಳಗೆ ಅಗತ್ಯ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ ಹಾಗೂ ಅವಶ್ಯ ಎಂದರು.   




ಮಕ್ಕಳಲ್ಲಿ ಮಕ್ಕಳಾಟ ಸಹಜ. ಅವುಗಳನ್ನು ನಿರ್ಲಕ್ಷಿಸಿ. ಮಕ್ಕಳಾಟವು ಅಪಾಯಕಾರಿಯಾಗಿದ್ದರೆ, ಅವರನ್ನು ತಿದ್ದಲು ಯತ್ನಿಸಿ ಎಂದರು. ವಿದ್ಯಾರ್ಥಿಗಳ ವರ್ತನೆಯ ಮಾದರಿಯನ್ನರಿತು ಶಿಕ್ಷಕರು ವ್ಯವಹರಿಸಿದರೆ, ಸಮಸ್ಯೆಗಳು ಕಡಿಮೆ. ಶಿಕ್ಷಕರಾದವರು ವಿದ್ಯಾರ್ಥಿಗಳ ಮಟ್ಟಕ್ಕಿಳಿದು ಸಮಸ್ಯೆಯನ್ನು ಗ್ರಹಿಸಿದರೆ, ತೊಂದರೆಗಳನ್ನು ಸುಲಭವಾಗಿ ನಿವಾರಿಸಬಹುದು. ಇಲ್ಲದೆ ಹೋದಲ್ಲಿ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತ ಸಾಗುತ್ತದೆ ಎಂದರು. ಇದಕ್ಕೂ ಮೊದಲು ಅವರು ವಿದ್ಯಾರ್ಥಿ ಮತ್ತು ಪೋಷಕರ ನಡುವೆ ಮುಜುಗರ  ದೂರ ಮಾಡಲು ವಿಭಿನ್ನ ಚಟುವಟಿಕೆಗಳನ್ನು ಅವರು ನಡೆಸಿಕೊಟ್ಟರು.




ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿ, ‘ಕಟ್ಟಕಡೆಯ ವಿದ್ಯಾರ್ಥಿಗೂ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿ ಮತ್ತು ಪೋಷಕರ ಜೊತೆಗೆ ಆಳ್ವಾಸ್ ಪದವಿ ಪೂರ್ವ ಕಾಲೇಜು ನಿರಂತರ ಸಂಬಂಧವನ್ನು ಹೊಂದಿದೆ ಎಂದು ಹೇಳಿದರು. ಆಳ್ವಾಸ್‍ನಲ್ಲಿ ಅತಿ ಶ್ರೀಮಂತರ ಮಕ್ಕಳು, ಅತಿ ಬಡವರ ಮಕ್ಕಳೂ ಇದ್ದಾರೆ ಯಾವೊಬ್ಬ ವಿದ್ಯಾರ್ಥಿಯ ಆತ್ಮಗೌರವಕ್ಕೂ ಧಕ್ಕೆ ಬರದಂತೆ ಆಳ್ವಾಸ್ ಆಡಳಿತವು  ವ್ಯವಹರಿಸುತ್ತಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸಂವಹನ, ಸಹಾನುಭೂತಿ, ವಿದ್ಯಾರ್ಥಿ ಮತ್ತು ಪೋಷಕರ ಮಧ್ಯೆ ಉತ್ತಮ ಆರೋಗ್ಯಕರ ಸಂಬಂಧ ಬಹಳ ಮುಖ್ಯ. ಆಳ್ವಾಸ್ ಪದವಿ ಪೂರ್ವ ಕಾಲೇಜು 600 ವಿದ್ಯಾರ್ಥಿಗಳ 12 ವಿಭಾಗಗಳನ್ನು ಹೊಂದಿದ್ದು ಇದಕ್ಕನುಗುಣವಾಗಿ ಬಹುದೊಡ್ಡ ಮತ್ತು ವ್ಯವಸ್ಥಿತ ಆಡಳಿತ ವರ್ಗವನ್ನು ಹೊಂದಿದೆ ಎಂದರು. 




ಪೂರ್ವಾಹ್ನದ ಅವಧಿಯಲ್ಲಿ ಶಿಕ್ಷಕೇತರ ಸಿಬ್ಬಂದಿಗಳಿಗೆ ಹಾಗೂ ಅಪರಾಹ್ನ ಶಿಕ್ಷಕರಿಗೆ ಕಾರ್ಯಗಾರ ನಡೆಸಲಾಯಿತು.  ಕಾಲೇಜಿನ ಉಪ ಪ್ರಾಂಶುಪಾಲೆ ಜಾನ್ಸಿ ಪಿ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ, ಅಡ್ಮೀಷನ್ ಆಫೀಸರ್ ಅಶೋಕ್ ಶೆಟ್ಟಿ, ಆಳ್ವಾಸ್ ‘ಬೆಳಕು’ ಆಪ್ತಸಮಾಲೋಚನ ಕೇಂದ್ರದ ರೆನಿಟಾ ಇದ್ದರು. ಕನ್ನಡ ಉಪನ್ಯಾಸಕಿ ಡಾ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು. ಇಂಗ್ಲಿಷ್ ಉಪನ್ಯಾಸಕ ಶಿವಪ್ರಸಾದ್ ಅತಿಥಿಯ ಪರಿಚಯ ವಾಚಿಸಿದರು. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top