ಹಸಿರು ಪರಿಸರದ ಕಡೆ ನಮ್ಮ ನಡೆ: ಬ್ಯಾಂಕ್ ಆಫ್ ಬರೋಡ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

Upayuktha
0


ಮಂಗಳೂರು: ಹಸಿರು ಜಗತ್ತು ಹಾಗೂ ಪ್ರಕಾಶಮಾನ ಭವಿಷ್ಯ ಎಂಬ ಗುರಿಯೊಂದಿಗೆ ಹಸಿರು ಪರಿಸರ ಸಂರಕ್ಷಣೆ ಮಾಡುವ ಕಾಳಜಿಯೊಂದಿಗೆ ಬ್ಯಾಂಕ್ ಆಫ್ ಬರೋಡ ಇವರ ವತಿಯಿಂದ ಗಿಡಗಳ ನೆಡುವಿಕೆ ಹಾಗೂ ಸಂರಕ್ಷಣೆ ಕಾರ್ಯಕ್ರಮ ಸೋಮೇಶ್ವರದ ಪರಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.


ಬ್ಯಾಂಕ್ ಒಫ್ ಬರೋಡಾದ ಪ್ರದಾನ ವ್ಯವಸ್ಥಾಪಕರು ಹಾಗೂ ವಲಯ ಮುಖ್ಯಸ್ಥರಾದ ಗಾಯತ್ರಿ ಆರ್ ಇವರು ಹಣ್ಣಿನ ಗಿಡಗಳನ್ನು ಹಸ್ತಾಂತರ ಮಾಡಿ, ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಇದುವರೆಗೆ 3000ಕ್ಕೂ ಮಿಕ್ಕಿ ಗಿಡಗಳನ್ನು ಬ್ಯಾಂಕ್ ಆಫ್ ಬರೋಡಾ ವತಿಯಿಂದ ನೆಡಲಾಗಿದೆ.


ಮುಂದಿನ ಪೀಳಿಗೆಗೆ ಪರಿಸರ ರಕ್ಷಣೆ ಮಾಡಲು ಇಂಥ ಕಾರ್ಯಕ್ರಮ ಸಹಕಾರಿ, ಶಾಲಾ ವಿದ್ಯಾರ್ಥಿಗಳು ಹಣ್ಣಿನ ಗಿಡ ಸಂರಕ್ಷಣೆ ಮಾಡಿ ನಮ್ಮ ಮುಂದಿನ ಮಕ್ಕಳಿಗೆ ಹಣ್ಣು, ನೆರಳು ದೊರಕುವಂತೆ ಪರಿಸರ ರಕ್ಷಣೆ ಮಾಡಲು ಕರೆ ನೀಡಿದರು. ಜೊತೆಗೆ ಶಾಲಾ ವಿದ್ಯಾರ್ಥಿಗಳು BOB ಬ್ಯಾಂಕ್ ನಿಂದ BRO ಉಳಿತಾಯ ಖಾತೆ ತೆರೆದು ಮುಂದಿನ ದಿನಗಳಲ್ಲಿ ಶಿಕ್ಷಣ ಸಾಲ ಪಡೆದು ಹೆಚ್ಚಿನ ಪ್ರಗತಿ ಸಾಧಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಈ ಸಂದರ್ಭದಲ್ಲಿ ಬ್ಯಾಂಕ್ ಒಫ್ ಬರೋಡಾದ ಅಧಿಕಾರಿಗಳಾದ ಸತೀಶ್ ಪಾಠಕರ್, ಏಡ್ರಿಚ್ ಅಜಯ್ ಡಿಸೋಜಾ, ಸಂಜಯ್, ಸಚಿನ್ ಹೆಗ್ಡೆ, ಜೀವನ್ ಕೊಲ್ಯ, ಸಾರಸ್ವತ ಎಜುಕೇಶನ್ ಸೊಸೈಟಿ (ರಿ) ಇದರ ಕಾರ್ಯದರ್ಶಿ ಮಹೇಶ್ ಎಲ್. ಬೋಂಡಾಲ್, ಪರಿಜ್ಞಾನ ಪದವಿ ಪೂರ್ವ ಕಾಲೇಜು ಇದರ ಪ್ರಾಂಶುಪಾಲರಾದ ವಿಕ್ರಂ ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Advt Slider:
To Top