ಚಿತ್ರ: ಅಯೋಧ್ಯೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು
ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದರು.
ಅಯೋಧ್ಯೆಯಲ್ಲಿನ ಶ್ರೀ ರಾಮನ ಮಂದಿರವು ಸುಂದರವಾಗಿ ಮೂಡಿಬಂದಿದೆ. ಮಂದಿರದೊಳಗಿನ ಶ್ರೀ ರಾಮನ ಬಿಂಬದ ಪ್ರಾಣಪ್ರತಿಷ್ಠೆಯು ಸೂಕ್ತ ರೀತಿಯಲ್ಲಿ ಜರುಗಿತು. ಪ್ರತಿಷ್ಟಿತ ಮಠಾಧಿಪತಿಗಳು ಮತ್ತು ಎಲ್ಲಾ ರಂಗದ ಪ್ರಮುಖರು ಈ ಐತಿಹಾಸಿಕ ಕರ‍್ಯಕ್ರಮದಲ್ಲಿ ಭಾಗವಹಿಸಿದರು. ಕರ‍್ಯಕ್ರಮವು ಅತ್ಯಂತ ಶಿಸ್ತಿನಿಂದ ನಡೆದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯ ಪ್ರಾಣಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮಕ್ಕೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಅಯೋಧ್ಯೆಯ ನಗರವನ್ನು ಹೂವಿನಿಂದ ಶೃಂಗಾರಗೊಳಿಸಿದ್ದರು. ಅಲ್ಲಲ್ಲಿ ಸ್ವಾಗತ ನೃತ್ಯವು ನಡೆಯುತ್ತಿದ್ದವು. ಎಲ್ಲಾ ರೀತಿಯಿಂದಲೂ ಕರ‍್ಯಕ್ರಮವು ವ್ಯವಸ್ಥಿತವಾಗಿಯೇ ನಡೆಯಿತು.
ರಾಮಮಂದಿರದ ಎದುರುಗಡೆ ಕುಳಿತ ಎಲ್ಲಾ ಸಂತರಿಗೂ ಅಲ್ಲಿಯೇ ಆಹಾರ, ಪಾನೀಯಗಳನ್ನು ವಿತರಿಸಿದರು. ಅಲ್ಲಿಯ ಹವಾಮಾನದಲ್ಲಿ ಚೆನ್ನಾಗಿ ಚಳಿಯೇ ಇತ್ತು, ಆದರೂ ಆತ್ಮೀಯವಾದ ಸ್ವಾಗತ ಮತ್ತು ವ್ಯವಸ್ಥಿತವಾದ ಕಾರ್ಯಕ್ರಮದಿಂದಾಗಿ ನಮಗೆಲ್ಲರಿಗೂ ಅಷ್ಟು ಸಮಸ್ಯೆಯೇ ಎನಿಸಲಿಲ್ಲ. ಹೊರಗಡೆ ಕುಳಿತವರಿಗೆ ಟಿ.ವಿ. ಪರದೆಯ ಮುಖಾಂತರ ಒಳಗೆ ನಡೆಯುವ ಪೂಜಾ ವಿಧಿ-ವಿಧಾನಗಳನ್ನು ತೋರಿಸುತ್ತಿದ್ದರು ಎಂದು ತಿಳಿಸಿದರು.
ಈ ಪ್ರಾಣಪ್ರತಿಷ್ಠಾ ಕರ‍್ಯಕ್ರಮದಿಂದಾಗಿ ಮಹಾತ್ಮರೆಲ್ಲರೂ ಪ್ರಸನ್ನರಾಗಿ ಹೋದರು. ಇಂದು ಈ ಕಾರ್ಯಕ್ರಮದಿಂದಾಗಿ ಅಲ್ಲಲ್ಲಿ ಪ್ರಯಾಣಕ್ಕೆ ಅಡೆತಡೆಗಳಿದ್ದವು. ನಾಳೆಯಿಂದ ಮಂದಿರಕ್ಕೆ ಮುಕ್ತ ದರ್ಶನ ಎಂದು ಘೋಷಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಜೀಯವರು ಎಲ್ಲರನ್ನೂ ಉದ್ಧೇಶಿಸಿ ಮಾತನಾಡಿದರು ಹಾಗೂ ಎಲ್ಲಾ ಸಂತರ ಬಳಿ ಬಂದು ಎಲ್ಲರನ್ನೂ ಗೌರವದಿಂದ ಮಾತನಾಡಿಸಿದರು ಎಂದು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


