ಚರ್ಮ ಆರೋಗ್ಯವರ್ಧಕ ಶ್ರೇಣಿ ವಿಸ್ತರಿಸಿದ ಆಮ್ವೇ

Upayuktha
0


ಮಂಗಳೂರು: ನಿರಂತರವಾಗಿ ವಿಕಸನಗೊಳಿಸುತ್ತಿರುವ ಗ್ರಾಹಕರ ವೈವಿಧ್ಯಮಯ ಅಗತ್ಯತೆಗಳನ್ನು ಪೂರೈಸಲು ಬದ್ಧವಾಗಿರುವ ಆಮ್ವೇ ಇಂಡಿಯಾ, ಇದೀಗ ಆರ್ಟಿಸ್ಟ್ರಿ ಸ್ಕಿನ್ ನ್ಯೂಟ್ರಿಷನ್ ಸಿ+ ಎಚ್‍ಎ3 ಡೈಲಿ ಸೀರಮ್ ಬಿಡುಗಡೆಯೊಂದಿಗೆ ತನ್ನ ಆರ್ಟಿಸ್ಟ್ರಿ ಸ್ಕಿನ್ ನ್ಯೂಟ್ರಿಷನ್ ಶ್ರೇಣಿಯನ್ನು ವಿಸ್ತರಿಸಿದೆ.


ಈ ದೈನಂದಿನ ಹೀರೋ ಸೀರಂ ಹೊಳಪಿನ, ಕಾಂತಿಯುಕ್ತ ಮತ್ತು ಸ್ಪಷ್ಟ ಆರೋಗ್ಯಕರ ಯೌವನಭರಿತ ತ್ವಚೆಗಾಗಿ ಹೆಚ್ಚಿನ ಹೈಡ್ರೇಶನ್ ನೀಡುತ್ತದೆ. ಆರ್ಟಿಸ್ಟ್ರಿ ಸ್ಕಿನ್ ನ್ಯೂಟ್ರಿಷನ್ ಸಿ+ ಎಚ್‍ಎ3 ಡೈಲಿ ಸೀರಮ್ ಎಲ್ಲ ಚರ್ಮ ಪ್ರಕಾರಗಳಲ್ಲಿ ಸುರಕ್ಷಿತವಾಗಿದ್ದು, ಇದು ಆರ್ಟಿಸ್ಟ್ರಿ ಸ್ಕಿನ್ ನ್ಯೂಟ್ರಿಷನ್ ಆಂಟಿ-ಏಜಿಂಗ್, ಮತ್ತು ಬ್ಯಾಲೆನ್ಸಿಂಗ್ ಮಗ್ಗಿ ಹೈಡ್ರೇಟಿಂಗ್ ಶ್ರೇಣಿಗಳನ್ನು ಒಳಗೊಳ್ಳುವ ಮೂಲಕ ಆರ್ಟಿಸ್ಟ್ರಿ ಸ್ಕಿನ್ ನ್ಯೂಟ್ರಿಷನ್ ಶ್ರೇಣಿಯನ್ನು ಪೂರ್ಣಗೊಳಿಸುತ್ತದೆ ಎಂದು ಆಮ್ವೇ ಇಂಡಿಯಾ ಸಿಇಒ ಅಜಯ್ ಖನ್ನಾ ಹೇಳಿದ್ದಾರೆ.


ಈ ಅತ್ಯದ್ಭುತ ಸುಧಾರಿತ ಸೂತ್ರೀಕರಣವು ನ್ಯೂಟ್ರಿಲೈಟ್ ಕ್ಷೇತ್ರದಲ್ಲಿ ಬೆಳೆದ ಅಸಿರೋಲಾ ಚೆರ್ರಿಯಿಂದ ಬಹು-ಕಾರ್ಯಚರಣೆಯ ಸೂಪರ್ ಸ್ಟಾರ್ ವಿಟಮಿನ್ ಸಿಯನ್ನು ಮತ್ತು ಆಸ್ಕೊರ್ಬಿಕ್ ಆಮ್ಲವನ್ನು ಒಳಗೊಂಡಿದೆ. ಇದು ಚರ್ಮದ ಶುಷ್ಕತನವನ್ನು ಕಡಿಮೆ ಮಾಡುವುದರೊಂದಿಗೆ ಅದನ್ನು ಪೋಷಿಸುತ್ತದೆ ಹಾಗೂ ಮುಖದ ಮೇಲಿನ ಗೆರೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top