ಬಂಟ್ವಾಳ: ಸುಜೀರು ಶ್ರೀ ವೀರ ಹನುಮಾನ್ ಮಂದಿರದ 22ನೇ ವಾರ್ಷಿಕೋತ್ಸವ, ಧಾರ್ಮಿಕ ಸಭೆ

Upayuktha
0

 ಶ್ರೀರಾಮನ ತ್ಯಾಗ, ಹನುಮನ ಸೇವೆ ನಮಗೆ ಆದರ್ಶವಾಗಲಿ: ಒಡಿಯೂರು ಶ್ರೀ




ಬಂಟ್ವಾಳ: ಭಾರತದ ಮೌಲ್ಯ ಆಧ್ಯಾತ್ಮಿಕ, ರಾಮಾಯಣ ನಮ್ಮ ಬದುಕಿನ ಬೆಳಕು, ಶ್ರೀ ರಾಮನ ತ್ಯಾಗ ಹಾಗೂ ಹನುಮನ ಸೇವೆ ನಮ್ಮ ಬದುಕಿನ ಆದರ್ಶವಾಗಲಿ, ಈ ಪುಣ್ಯ ಶರೀರವನ್ನು ಸದ್ಭಳಕೆ ಮಾಡಿ ಸಮಾಜದಲ್ಲಿ ಆದರ್ಶ ಜೀವನ ನಡೆಸೋಣ, ಬಾಲ್ಯದಿಂದಲೇ ನಮ್ಮ ಮಕ್ಕಳಿಗೆ ಸಂಸ್ಕಾರದ ಬಗ್ಗೆ ತಿಳಿ ಹೇಳಿ ಬೆಳೆಸುವ, ಸುಸಂಸ್ಕೃತರಾಗುವ ಶಕ್ತಿ ನಮಗೆ ಭಗವಂತ ಕರುಣಿಸಲಿ ಎಂದು ಶ್ರೀ  ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.





ಅವರು ಬಂಟ್ವಾಳದ ಶ್ರೀ ವೀರ ಹನುಮಾನ್ ಮಂದಿರ (ರಿ.) ಸುಜೀರು ದತ್ತನಗರ, ಪುದು ಇಲ್ಲಿ ಜ.15ರಂದು ಸೋಮವಾರ ನಡೆದ 22ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿದರು.





ಮುಖ್ಯ ಅತಿಥಿ ಬಂಟ್ವಾಳ ತಾಲೂಕು ಉಪ ತಹಸೀಲ್ದಾರ ನವೀನ ಬೆಂಜನಪದವು ಮಾತನಾಡಿ ಹೆತ್ತವರ ವರ್ತನೆಯನ್ನು ನೋಡಿ ಮಕ್ಕಳು ಬೆಳೆಯುತ್ತಾರೆ, ಆದ್ದರಿಂದ ನಾವು ಸುಸಂಸ್ಕೃತರಾಗಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಎಂದರು. ನ್ಯಾಯವಾದಿ ಶೈಲಜಾ ರಾಜೇಶ್ ಮಾತನಾಡಿ, ಪರಸ್ಪರ ಪ್ರೀತಿಸುವ, ಗೌರವಿಸುವ ಗುಣ ಬೆಳೆಸೋಣ, ತಾಯಿಯಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದರು. ಜ್ಯೋತಿಷಿ ಅನಿಲ್ ಪಂಡಿತ್ ಮಾತನಾಡಿ ಸಂಸ್ಕಾರಯುತ ಜೀವನ ನಮ್ಮದಾಗಲಿ ಎಂದು ಶುಭ ಹಾರೈಸಿದರು.




ವೇದಿಕೆಯಲ್ಲಿ ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಪ್ರತಾಪ್ ಆಳ್ವ, ಅಶೋಕ ಶೆಟ್ಟಿ ಸುಜೀರುಗುತ್ತು, ಉತ್ಸವ ಸಮಿತಿಯ ಅಧ್ಯಕ್ಷ ಪುರುಷೋತ್ತಮ್, ಮಹಿಳಾ ಸೇವಾ ಬಳಗದ ಅಧ್ಯಕ್ಷೆ ಮೀನಾಕ್ಷಿ ಉಪಸ್ಥಿತರಿದ್ದರು. ಆಡಳಿತ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ ಸ್ವಾಗತಿಸಿ, ನಾಗೇಶ್ ಅಮೀನ್ ಧನ್ಯವಾದವಿತ್ತು, ತೇಜಾಕ್ಷಿ ಸುಜೀರ್ ಕಾರ್ಯಕ್ರಮ ನಿರೂಪಿಸಿದರು. ಪ್ರ ಕಾರ್ಯದರ್ಶಿ ಗಣೇಶ್ ಎಸ್ ಮಲ್ಲಿ ಸಹಕರಿಸಿದರು.




ಅಂದು ಬೆಳಿಗ್ಗೆ ಗಂಟೆ 7.00ರಿಂದ ಗಣಹೋಮ ಬಳಿಕ ಪಂಚಾಮೃತ ಅಭಿಷೇಕನಡೆದು 9 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.ಸಂಜೆ 6 ರಿಂದ ಭಜನಾ ಸಂಕೀರ್ತನೆ ಬಳಿಕ ಮಂಗಳಾರತಿ, ಪ್ರಸಾದ ವಿತರಣೆ ನಡೆದು ನಂತರ ಬಪ್ಪನಾಡು ಮೇಳದವರಿಂದ "ಶಿವ ದೂತ ಗುಳಿಗೆ" ಎಂಬ ಯಕ್ಷಗಾನ ಬಯಲಾಟ ನಡೆಯಿತು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top