ಯುವಜನತೆ ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ: ಕೃಷ್ಣ.ಕೆ.ಪೂಜಾರಿ

Upayuktha
0



ಸುರತ್ಕಲ್ : ಸನಾತನ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಸಾರುವ ಶಾಸ್ತ್ರೀಯ ಸಂಗೀತಕ್ಕೆ ಹೃದಯವನ್ನು ಅರಳಿಸುವ ಗುಣವಿದೆ. ಯುವಜನತೆ ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ದೊಡ್ಡಕೊಪ್ಲ ಸ್ವಚ್ಛಸಾಗರ ಅಭಿಯಾನದ ಸಂಯೋಜಕ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಕೃಷ್ಣ.ಕೆ.ಪೂಜಾರಿ ನುಡಿದರು.




ಅವರು ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್ ಸಹಭಾಗಿತ್ವದಲ್ಲಿ ಅನುಪಲ್ಲವಿಯಲ್ಲಿ ನಡೆಯುತ್ತಿರುವ ಉದಯರಾಗ ಶಾಸ್ತ್ರೀಯ ಸಂಗೀತ ಸರಣಿಯ ಉದಯರಾಗ–47 ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 



 

ಪ್ರಣವ್ ಅಡಿಗ ಉಡುಪಿ ಅವರಿಂದ ಕೊಳಲು ವಾದನ ಕಛೇರಿ ನಡೆಯಿತು. ವಯಲಿನ್‍ನಲ್ಲಿ ವಿಜೇತ ಸುಬ್ರಹ್ಮಣ್ಯ ಕಾಬೆಕ್ಕೋಡು ಹಾಗು ಮೃದಂಗದಲ್ಲಿ ಡಿ.ಆರ್ ಹರಿಕೃಷ್ಣ ಪಾವಂಜೆ ಸಹಕರಿಸಿದರು.



ಮಣಿ ಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಸ್ವಾಗತಿಸಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಕೆ.ರಾಜಮೋಹನ್‍ರಾವ್ ಉಪಸ್ಥಿತರಿದ್ದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Advt Slider:
To Top