ಲೇಖಕ ಸಚಿನ್ ಕುಳಮರ್ವರ ಎರಡನೇ ಕೃತಿ
ಮಂಗಳೂರು: ಹವ್ಯಾಸಿ ಲೇಖಕ, ಉದಯೋನ್ಮುಖ ಬರಹಗಾರ ಸಚಿನ್ ಕುಳಮರ್ವ ಅವರ ಎರಡನೇ ಕೃತಿ 'The Zenith: Fierce Mind is Faster Than Bullet' ಶುಕ್ರವಾರ ಬಿಡುಗಡೆಗೊಂಡಿತು.
ಲೇಖಕರ ಪುತ್ರಿ ಪುಟಾಣಿ ಸಿಯಾ ಕೃತಿಯನ್ನು ಬಿಡುಗಡೆ ಮಾಡಿದಳು. ಈ ಕೃತಿ ಆನ್‌ಲೈನ್ ಮಾರಾಟ ಮಳಿಗೆ ಅಮೆಜಾನ್ ನಲ್ಲಿ ಲಭ್ಯವಿದೆ.
ಸೋಮೇಶ್ವರದಲ್ಲಿ ಲೇಖಕರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು.
'ದ ಝೆನಿತ್' ಕೃತಿಯು ಯುವ ಸಮೂಹವನ್ನು ಸೆಳೆಯುವ ಆಕ್ಷನ್, ಥ್ರಿಲ್ಲರ್, ಡ್ರಾಮಾ, ಲವ್ ಮತ್ತು ರೊಮ್ಯಾನ್ಸ್‌ಗಳನ್ನು ಒಳಗೊಂಡ ಕಾಲ್ಪನಿಕ ಕಾದಂಬರಿಯಾಗಿದೆ. ಈ ಕಾದಂಬರಿ ಇನ್ನೂ ಮೂರು ಭಾಗಗಳಲ್ಲಿ ಪ್ರಕಟವಾಗಲಿದೆ ಎಂದು ಲೇಖಕ ಸಚಿನ್ ತಿಳಿಸಿದರು.
ಅವರ ಮೊದಲ ಕೃತಿ- ತಕ್ಷಣದ ಹೊಳಹುಗಳ, ಕಿರು ನುಡಿಮುತ್ತುಗಳನ್ನು ಒಳಗೊಂಡ Bro_code_Scribble ಜುಲೈನಲ್ಲಿ ಬಿಡುಗಡೆಯಾಗಿತ್ತು.
ಲೇಖಕ ಸಚಿನ್ ಮಂಗಳೂರಿನಲ್ಲಿ ಕರ್ಣಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ