ಶಿವಮೊಗ್ಗ : ಮನಃಸ್ಪೂರ್ತಿ ಕಲಿಕಾ ಕೇಂದ್ರ, ಮಾನಸ ನರ್ಸಿಂಗ್ ಹೋಮ್, ಶಿವಮೊಗ್ಗ ಇಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕಿನ ಬಿ.ಆರ್.ಸಿ. ಸಿ.ಆರ್.ಪಿ ಗಳಿಗಾಗಿ ನೈದಾನಿಕ ಚಿಕಿತ್ಸಕ ಕ್ರಮಗಳ ಬಗ್ಗೆ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾ. ರಜನಿ ಎ ಪೈ ರವರು ಮಕ್ಕಳಲ್ಲಿರಬಹುದಾದ ಬೌದ್ಧಿಕ ವೈಕಲ್ಯತೆ ಗಮನಿಸಿ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ವಹಿಸಬೇಕಾದ ಪಾತ್ರವನ್ನು ಉತ್ತಮ ಉದಾಹರಣೆಯೊಂದಿಗೆ ವಿವರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀಯುತ ಬಸವರಾಜಪ್ಪ ಬಿ.ಆರ್ ಉಪನಿರ್ದೇಶಕರು, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಇವರು ಶಾಲೆ ಬಿಟ್ಟ ಮಕ್ಕಳಿಗಾಗಿ ಶಿಕ್ಷಣದ ಅವಕಾಶವನ್ನು ಒದಗಿಸುವಂತಹ ಇಂತಹ ಸಂಸ್ಥೆಗಳು ಪ್ರಗತಿಯತ್ತ ಸಾಗಬೇಕೆಂದು ತಮ್ಮ ವಿಚಾರವನ್ನು ಮಂಡಿಸಿದರು.
ಶ್ರೀ ಹರಿಪ್ರಸಾದ್ ಜಿ.ವಿ, ಶ್ರೀ ನಾಗರಾಜ್ ಆರ್, ಹಿರಿಯ ಉಪಪ್ರಾಂಶುಪಾಲರು, ಡಯಟ್ ಶಿವಮೊಗ್ಗ ಹಾಗೂ ಎಂ.ಸಿ.ಸಿ.ಎಸ್ ನ ನಿರ್ದೇಶಕರಾದ ಡಾ.ರಾಜೇಂದ್ರ ಚೆನ್ನಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ಅನುಷಾ ಅರುಣ್ ನಿರೂಪಿಸಿದರು, ಮನಃಸ್ಪೂರ್ತಿ ಕಲಿಕಾ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ರಂಗನಾಯಕಿ.ಆರ್ ಸ್ವಾಗತಿಸಿದರು, ಶಾಮಲಾ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ