ಸುರತ್ಕಲ್: ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಅನುದಾನಿತ ವಿದ್ಯಾದಾಯಿನೀ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಬೆಳಗ್ಗೆ ನಡೆದ ಧ್ವಜವಂದನೆ ಹಾಗೂ ಬಹುಮಾನ ವಿತರಣೆಯನ್ನು ಶಾಲಾ ಹಳೆ ವಿದ್ಯಾರ್ಥಿ ಹಾಗೂ ಪ್ರಸಿದ್ಧ ಕೇಂದ್ರ ಸರ್ಕಾರದ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಡಿಯಲ್ಲಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಫಾರ್ ರಿಪ್ರೊಡಕ್ಟಿವ್ ಹೆಲ್ತ್ ಅಂಡ್ ಚೈಲ್ಡ್ ಕೇರ್ ಇಲ್ಲಿನ ನಿವೃತ್ತ ತಾಂತ್ರಿಕ ಅಧಿಕಾರಿಯಾದ ಶ್ರೀ ಉಮೇಶ್ ಇಡ್ಯಾ ನೆರವೇರಿಸಿ ಕಠಿಣ ಶ್ರಮವಹಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಬಾಲಚಂದ್ರ ಕೆ. ಎಲ್ಲರನ್ನೂ ಸ್ವಾಗತಿಸಿದರು. ಹಾಗೂ ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಸುಧಾಕರ್ ರಾವ್ ಪೇಜಾವರ ಮತ್ತು ಶಿಕ್ಷಕ ರಕ್ಷಕ ಸಂಘದ ಗೌರವಾಧ್ಯಕ್ಷರಾದ ಗಂಗಾಧರ ಪೂಜಾರಿ, ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಶ್ರೀಮತಿ ಪುಷ್ಪ ಇವರು ಪಠ್ಯ ಪೂರಕ ಬಹುಮಾನ ಪಟ್ಟಿಯನ್ನು ವಾಚಿಸಿದರು. ಶಾಲಾ ಉಪ ವಿದ್ಯಾರ್ಥಿ ನಾಯಕಿ ಸೇಜಲ್ ಕೋಟ್ಯಾನ್ ವಂದಿಸಿದಳು. ಹೀಗೆ ಈ ಕಾರ್ಯಕ್ರಮವು ಆಡಳಿತ ಮಂಡಳಿಯ ಸರ್ವ ಸದಸ್ಯರ, ಪೋಷಕರ, ಮಕ್ಕಳ ಹಾಗೂ ಎಲ್ಲಾ ಶಾಲಾ ಸಿಬ್ಬಂದಿ ವರ್ಗದವರ ಸಂಪೂರ್ಣ ಸಹಕಾರದೊಂದಿಗೆ ಶಾಲಾ ವಾರ್ಷಿಕೋತ್ಸವ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ