ಪ್ರಕೃತಿ ವಿಕೋಪದಿಂದ ಆಗುವ ದುರಂತಗಳಿಗೂ ಹಾಗೂ ಮಾನವ ನಿರ್ಮಿತ ದುರಂತಗಳಿಗೂ ಬಹಳ ವ್ಯತ್ಯಾಸ ಇದೆ. ಪ್ರಕೃತಿ ವಿಕೋಪದಿಂದ ಆಗುವ ದುರಂತಗಳು ತಡೆಗಟ್ಟಲು ಎಷ್ಟೇ ಮುಂಜಾಗ್ರತೆ ಕ್ರಮ ಕೈಗೊಂಡರು ಪ್ರಕೃತಿ ಮುನಿಸಿಕೊಂಡರೆ ಕ್ಷಣಮಾತ್ರದಲ್ಲಿ ಏನು ಬೇಕಾದರೂ ಆಗಬಹುದು. ಇಂಥ ದುರಂತ ನಡೆದಾಗ ಎಷ್ಟೇ ಮುಂಜಾಗ್ರತೆ ಕ್ರಮ ಕೈಗೊಂಡರೂ ದುರಂತ ತಪ್ಪಿಸಲು ಸಾಧ್ಯವಾಗುವುದಿಲ್ಲ. ಆದರೆ ಮಾನವ ನಿರ್ಮಿತ ದುರಂತ ನಡೆದಾಗ ನಾವು ಮುಂಜಾಗ್ರತೆ ಕ್ರಮ ಕೈಗೊಂಡರೆ ಆಗಬಹುದಾದ ದುರಂತ ತಪ್ಪಿಸಬಹುದು. ಇಂತಹ ದುರಂತಗಳು ಇತ್ತೀಚೆಗೆ ರಾಜ್ಯದಲ್ಲಿ ಆಗಾಗ ಹೆಚ್ಚಿನ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಕಟ್ಟಡ ಅಗ್ನಿ ದುರಂತಗಳಂತ ದುರ್ಘಟನೆಗಳು ನಡೆಯುತ್ತಿದ್ದು ಇಂತವು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸದೆ ಇರುವುದು ಗುತ್ತಿಗೆದಾರರು ಇಂಜಿನಿಯರ್ ಬಹುಮಹಡಿ ಕಟ್ಟಡಗಳ ಮಾಲೀಕರುಗಳು ವ್ಯಾಪಾರಸ್ಥರು ಅಜಾಗರೂಕತೆಯಿಂದ ಆದಾಯದ ಕಡೆ ಮಾತ್ರ ಗಮನ ಹರಿಸಿ ರಕ್ಷಣಾ ಸುರಕ್ಷಿತ ಬಗ್ಗೆ ಅಜಾಗರೂಕತೆ ತೋರಿಸುತ್ತಿರುವುದೇ ದುರಂತಗಳು ಹೆಚ್ಚಾಗಲು ಕಾರಣವಾಗುತ್ತಿದೆ.
ಮಾಲೀಕರು ತಮ್ಮ ಮೂಲ ಆದಾಯ ಹೆಚ್ಚಿಸಿಕೊಳ್ಳುವತ್ತ ಹೆಚ್ಚು ಗಮನ ಹರಿಸಿ ಸುರಕ್ಷಿತೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾ ಬರುತ್ತಿರುವುದೇ ದುರಂತಗಳು ದುರ್ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇವುಗಳಿಗೆ ಬಲಿಯಾಗುವವರಿಗೆ ಹೊಣೆ ಯಾರು ಇಲ್ಲದಂತಾಗಿ ಬಲಿಯಾದವರ ಕುಟುಂಬಗಳ ಶೋಚನೀಯ ಸ್ಥಿತಿ ಯಾರಿಗೂ ಕಾಣಿಸುವುದಿಲ್ಲ. ವ್ಯಾಪಾರಸ್ಥರು, ಅಂಗಡಿ ಮಾಲೀಕರು, ಗುತ್ತಿಗೆದಾರರು, ಇಂಜಿನಿಯರ್ ಗಳು ಮಾಡುವ ಪ್ರಮಾದಗಳಿಂದ ಬಿಸಿನೆಸ್ ಮಾಡುವ ಗೋದಾಮ ಅಂಗಡಿಗಳ ಮಾಲಿಕರು ಕಟ್ಟಡ ಗಳ ಮೇಲೆ ಜೀವ ಹಿಮಾ ಪಾಲಿಸಿ ಮಾಡಿಸಿ ಜಾರಿಕೊಂಡು ಬಡ ಕುಟುಂಬ ಬಲಿ ಪಡುತ್ತಿರುವುದು ಯಾರಿಗೂ ಗೊತ್ತಾಗದಂತಾಗಿದೆ. ಯಾವುದೇ ವ್ಯವಹಾರ ವ್ಯಾಪಾರಸ್ಥರು ಗುತ್ತಿಗೆದಾರರು ಇಂಜಿನಿಯರಗಳು ತಾವು ನಿರ್ಮಾಣ ಮಾಡುವ ಕಟ್ಟಡ ಬಹುಮಹಡಿ ಕಟ್ಟಡ ಗೋದಾಮುಗಳಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಮನಬಂದಂತೆ ಉಪಯೋಗಿಸುತ್ತಿರುವುದೇ ಇವತ್ತಿನ ಕಟ್ಟಡ, ಅಗ್ನಿ, ಮತ್ತು ಇತರೆ ದುರಂತ ದುರ್ಘಟನೆಗಳಿಗೆ ಕಾರಣವಾಗುತ್ತಿದೆ. ರಾಜ್ಯದಲ್ಲೆಡೆ ಇಂತಹ ಅನೇಕ ದುರಂತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾರ್ಮಿಕರನ್ನು ಬಲಿಪಡೆಯುತ್ತಲೇ ಬಂದಿರುತ್ತವೆ.
ಕಟ್ಟಡ ಅಗ್ನಿ ಹಾಗೂ ಇತರೆ ಕಟ್ಟಡ ದುರಂತಗಳಲ್ಲಿ ಬಲಿಯಾಗುವವರ ಕುಟುಂಬಗಳಿಗೆ ಜವಾಬ್ದಾರಿ ಇಲ್ಲದಂತಾಗಿದೆ ಹೊಟ್ಟೆಪಾಡಿಗಾಗಿ ದುಡಿಯಲಿಕ್ಕೆ ಬಂದು ಶವಾಗಿ ಮನೆಗೆ ಹೋಗುವ ಅದೆಷ್ಟೋ ಕಾರ್ಮಿಕ ಕುಟುಂಬ ವರ್ಗದ ಗೋಳು ಕೇಳುವವರಿಲ್ಲದಂತಾಗಿದೆ ಹೀಗಾಗಿ ವ್ಯವಹಾರ ವ್ಯಾಪಾರ ಮಾಡುವ ಪ್ರತಿಯೊಬ್ಬ ವ್ಯಾಪಾರಸ್ಥರಿಗೂ ಸರ್ಕಾರ ಹೇಗೆ ಜಿಎಸ್‌ಟಿ, ಕಡ್ಡಾಯ ಮಾಡಿರುತ್ತದೆಯೊ ಅದೇ ಮಾದರಿಯ ಸುರಕ್ಷಿತಾ ಕ್ರಮ ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ಕ್ರಮ ಕೈಗೊಂಡು ಮುನ್ನಲೆಗೆ ತಂದರೆ ಮಾತ್ರ ಇಂತಹ ದುರಂತ ದುರ್ಘಟನೆಗಳು ಕಡಿಮೆಗೊಳಿಸಲು ಮತ್ತು ತಪ್ಪಿಸಲು ಸಾಧ್ಯ. ಹಾಗಾಗಿ ಕೇಂದ್ರ ರಾಜ್ಯ ಸರ್ಕಾರಗಳು ಕಟ್ಟಡ, ಬಹುಮಹಡಿ ಕಟ್ಟಡ, ಗೋದಾಮು ಅಂಗಡಿ ವ್ಯಾಪಾರ ಮಳಿಗೆ ಪ್ರತಿ ಕಾರ್ಮಿಕರು ದುಡಿಯುವ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತಯ ಬಗ್ಗೆ ಮೊದಲನೆಯ ಆದ್ಯತೆ ಕೊಟ್ಟು ಕಟ್ಟುನಿಟ್ಟಿನ ಆದೇಶ ಮಾಡಿ ಜಾರಿಗೆ ತಂದು ಕಾರ್ಮಿಕರು ದುಡಿಯುವ ಸ್ಥಳಗಳಲ್ಲಿ ಪಾಲನೆಯಾಗಬೇಕಾಗಿರುವ ಕ್ರಮ ಅನುಸರಿಸಿದರೆ ಕಟ್ಟಡ ಅಗ್ನಿ ಅನಾಹುತ ದುರಂತ ದುರ್ಘಟನೆಗಳು ಇತರೆ ಅನಾಹುತಗಳ ತಡೆಗಟ್ಟಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕಾರ್ಮಿಕರ ಸಾವುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗುತ್ತಿರುವದು ತಪ್ಪಿಸಲಿಕ್ಕೆ ಸರ್ಕಾರದಿಂದಲೂ ಹಾಗೂ ದುಡಿಸಿಕೊಳ್ಳುವ ಮಾಲೀಕರಿಂದಲೂ ಸಾಧ್ಯವಿಲ್ಲ.
ಇದರಿಂದಾಗಿ ಕೇವಲ ಜೀವ ವಿಮಾ ಪಾಲಿಸಿ ಮಾಡಿಸಿ ಜಾರಿಕೊಳ್ಳುವ ಮಾಲೀಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ದುರಂತ ತಪ್ಪಿಸುವ ಜವಾಬ್ದಾರಿ ಸರ್ಕಾರ ಮತ್ತು ದುಡಿಸಿಕೊಳ್ಳುವ ಮಾಲೀಕರ ಮೇಲೆ ಇರುವುದರಿಂದ ಅಚ್ಚುಕಟ್ಟಾಗಿ ಸುರಕ್ಷತಾ ಕ್ರಮ ಅಳವಡಿಸಿಕೊಂಡು ದುಡಿಯುವ ಕಾರ್ಮಿಕರ ರಕ್ಷಣೆ ಮಾಡುವ ಹೊಣೆ ಹೊರಬೇಕು. ಅದು ಗುತ್ತಿಗೆದಾರರು ಇಂಜಿನಿಯರ್ ಕಟ್ಟಡಗಳ ಮಾಲೀಕರು ವ್ಯಾಪಾರಸ್ಥರು ಮತ್ತು ಅಂಗಡಿಯ ಮಾಲೀಕರುಗಳ ಮೇಲಿದೆ. ಸುರಕ್ಷತಾ ಕ್ರಮ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸರ್ಕಾರವು ಕ್ರಮ ಕೈಗೊಂಡು ಜಾರಿಗೆ ತಂದು ಮತ್ತು ಅವುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ಜವಾಬ್ದಾರಿ ದುಡಿಸಿಕೊಳ್ಳುವ ಮಾಲೀಕರ ಮೇಲೆ ಹೊಣೆ ಹಾಕಿ ಕಟ್ಟು ನಿಟ್ಟಾಗಿ ಪಾಲನೆ ಮಾಡಿ ದುರಂತಗಳು ನಡೆಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯು ಕಟ್ಟಡದ ವ್ಯಾಪಾರಸ್ಥ ಮಾಲೀಕರ ಮೇಲೆ ಇರುತ್ತದೆ.
ಕಟ್ಟಡ ಮತ್ತು ಬಹುಮಹಡಿ ಕಟ್ಟಡಗಳ ವ್ಯಾಪಾರಸ್ಥರು ಅಂಗಡಿಕಾರರು ತಾವು ದುಡಿಸಿಕೊಳ್ಳುವ ಮತ್ತು ಕಟ್ಟಡದಲ್ಲಿ ಕೆಲಸ ಮಾಡಿಸಿಕೊಳ್ಳುವ ಕಾರ್ಮಿಕರ ಹಿತದೃಷ್ಟಿಯಿಂದ ಹಾಗೂ ತಮ್ಮ ವಸ್ತುಗಳ ರಕ್ಷಣೆಗಾಗಿ ಕಟ್ಟಡಗಳನ್ನು ಆಗಾಗ ಸರ್ಕಾರದಿಂದ ಬರುವ ಹೊಸ ಹೊಸ ಮಾರ್ಗಸೂಚಿಗಳಂತೆ ಪರಿಶೀಲನೆ ಮಾಡಿಸುತ್ತಾ ಕಟ್ಟಡದ ಸಾಂದ್ರತೆ ದಕ್ಷತೆ ಪರೀಕ್ಷಿಸಿಕೊಳ್ಳುತ್ತ ಪದೇ ಪದೇ ಪರಿಶೀಲನೆಯಲ್ಲಿರಬೇಕು. ಸರ್ಕಾರಗಳು ನೀಡಿರುವ ನಿಯಮಗಳ ಪಾಲನೆಗಾಗಿ ಸಂಬಂಧಪಟ್ಟ ಇಲಾಖೆಯವರನ್ನ ಸಂಪರ್ಕಿಸಿ ಕಟ್ಟಡಗಳ ಪ್ರಸ್ತುತ ಇರುವಿಕೆಯ ಸಾಮರ್ಥ್ಯ ಹಾಗೂ ಅಗ್ನಿ ಸುರಕ್ಷಿತ ಕ್ರಮ ಕೈಗೊಂಡು ಅವುಗಳು ಸರಿಯಾದ ಕ್ರಮದಲ್ಲಿ ಕೆಲಸ ನಿರ್ವಹಿಸುತ್ತವೆ ಇಲ್ಲವೋ ಎಂದು ಆಗಾಗ ಪರೀಕ್ಷಿಸಿಕೊಂಡು ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಕಟ್ಟಡಗಳಿಗೆ ಅಳವಡಿಸಿದ ವಸ್ತುಗಳ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಕಾರ್ಮಿಕರನ್ನು ಮತ್ತು ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯ. ಆಕಸ್ಮಿಕವಾಗಿ ಇಂತಹ ದುರ್ಘಟನೆ ನಡೆದಾಗ ಅವುಗಳಿಂದ ನಾವು ಹೇಗೆ ರಕ್ಷಣೆ ಪಡೆಯಬೇಕು ಎನ್ನುವುದನ್ನು ಕಾರ್ಮಿಕರಿಗೆ ತರಬೇತಿ ಕೊಡಿಸಬೇಕು. ಆಗ ಮಾತ್ರ ದುರ್ಘಟನೆ ನಡೆದಾಗ ಕಾರ್ಮಿಕರನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಹಾಗಾಗಿ ಕಾರ್ಮಿಕರಿಗೆ ತಾವು ಮಾಡುವ ಕೆಲಸದ ಸ್ಥಳದ ಸಂಪೂರ್ಣ ಮಾಹಿತಿ ಹಾಗೂ ಆ ಕಟ್ಟಡಗಳಲ್ಲಿ ಯಾವ ಯಾವ ವಸ್ತುಗಳು ಎಲ್ಲಿ ಇರುತ್ತವೆ ಎನ್ನುವ ಮನವರಿಕೆ ಇರಬೇಕು. ಬಹುಮಹಡಿ ಕಟ್ಟಡಗಳಾಗಿದ್ದರೆ ಎಲ್ಲೆಲ್ಲಿ ಪ್ರವೇಶಿಸುವ ಮತ್ತು ನಿರ್ಗಮಿಸುವ ಬಾಗಿಲುಗಳು ಇರುತ್ತವೆ ಮತ್ತು ಎಲ್ಲೆಲ್ಲಿ ಯಾವ ಯಾವ ರೂಮ್ ಗಳು ಇರುತ್ತವೆ ಎನ್ನುವ ಸಂಪೂರ್ಣ ಮಾಹಿತಿಯೊಂದಿಗೆ ತರಬೇತಿಗೊಳಿಸಬೇಕು.
ಕಟ್ಟಡಗಳ ಮಾಲೀಕರು ಸರಕಾರದ ಆದೇಶಗಳನ್ನು ಗಾಳಿಗೆ ತೂರಿ ಸುರಕ್ಷಿತ ಮತ್ತು ರಕ್ಷಣೆಗೆ ಆದ್ಯತೆ ಕೊಡದೆ ತಮಗೆ ಮನಬಂದಂತೆ ಕಟ್ಟಡ ಉಪಯೋಗಿಸಿಕೊಳ್ಳುವುದು ಏನೇ ದುರಂತ ಅವಘಡಗಳು ನಡೆದರೆ ಸತ್ತ ಕಾರ್ಮಿಕರಿಗೆ ಪರಿಹಾರ ಎನ್ನುವ ಆಮಿಷ ವಡ್ಡಿ ಕಾರ್ಮಿಕರನ್ನು ದುಡಿಸಿಕೊಂಡು ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಸರ್ಕಾರ ಮಾಲೀಕರುಗಳು ರಕ್ಷಣಾ ಸುರಕ್ಷತೆಯ ಬಗ್ಗೆ ಆದ್ಯತೆ ನೀಡಿ ಪಾಲನೆ ಮಾಡಿದರೆ ಪರಿಹಾರ ಕೊಡುವ ಪ್ರಮೇಯವೇ ಬರುವುದಿಲ್ಲ. ಮೂಲದಲ್ಲೇ ಸುರಕ್ಷಿತ ಕ್ರಮಗಳನ್ನು ಅನುಸರಿಸುವಲ್ಲಿ ಮಾತ್ರ ತಲೆಕೆಡಿಸಿ ಕೊಳ್ಳುತ್ತಿಲ್ಲ. ಇಂತಹ ಪರಂಪರೆ ಮುಂದುವರಿಸಿಕೊಂಡು ಕಟ್ಟಡ ದುರಂತಗಳು ಅಗ್ನಿ ಅವಘಡಗಳಂತ ದೊಡ್ಡ ದೊಡ್ಡ ಘಟನೆಗಳು ಸಂಭವಿಸಿ ಕಾರ್ಮಿಕರ ಸತ್ತ ಜೀವಗಳಿಗೆ ಲೆಕ್ಕವೇ ಇಲ್ಲ. ಕಟ್ಟಡ ಬಹುಮಹಡಿ ಕಟ್ಟಡಗಳ ಮಾಲೀಕರುಗಳು ತೋರುವ ನಿರ್ಲಕ್ಷದಿಂದಾಗಿ ಅಮಾಯಕ ಕಾರ್ಮಿಕರು ಜೀವಗಳ ಕಳೆದುಕೊಳ್ಳುತ್ತಿರುವ ಇಂತಹ ದುರ್ಘಟನೆಗಳಿಂದ ಸರ್ಕಾರಗಳಾಗಲಿ ದುಡಿಸಿಕೊಳ್ಳುವ ಮಾಲೀಕರುಗಳಾಗಲಿ ಎಚ್ಚೆತ್ತುಕೊಳ್ಳುವುದು ಯಾವಾಗ? ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವ ಕಾರ್ಮಿಕರು ದುಡಿಯದೇ ಹಾಗೆ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಹೊಟ್ಟೆಪಾಡಿಗಾಗಿ ದುಡಿಯಲು ತೆರಳುವ ಕಾರ್ಮಿಕರಿಗೆ ರಕ್ಷಣೆ ಇಲ್ಲದೆ ಜೀವ ತೆರುತ್ತಿರುವ ಕಾರ್ಮಿಕರ ಕುಟುಂಬಗಳು ಬೀದಿಪಾಲಾಗುತ್ತಿದ್ದರೂ ಕಟ್ಟು ನಿಟ್ಟಿನ ಕ್ರಮ ಅಳವಡಿಸಿಕೊಳ್ಳಲು ಮಾಲೀಕರುಗಳು ಹಿಂದೇಟು ಹಾಕುತ್ತಿದ್ದಾರೆ.
ಆಗಾಗ ವಿಕೋಪಗಳನ್ನು ಸೃಷ್ಟಿಸುವ ಪ್ರಕೃತಿ ಮುನಿಸಿಕೊಂಡರೆ ಕ್ಷಣಮಾತ್ರದಲ್ಲಿ ಏನು ಬೇಕಾದರೂ ಅಲ್ಲೋಲ ಕಲ್ಲೋಲ ಮಾಡಿ ಹೋಗುತ್ತದೆ. ಅಚಾನಕವಾಗಿ ನಡೆಯುವ ಪ್ರಕೃತಿ ವಿಕೋಪದಿಂದ ಆಗುವಂಥ ದುರಂತ ಯಾರಿಂದಲೂ ತಡೆಯಲಿಕ್ಕೆ ಸಾಧ್ಯ ಇಲ್ಲ. ಆದರೆ ನಾವೇ ಮಾಡಿದ ಪ್ರಮಾದದಿಂದ ಸುರಕ್ಷಿತ ಕ್ರಮ ಪಾಲಿಸದಿದ್ದರೆ ಆಗುವ ದುರಂತಗಳಿಗೆ ನಾವೇ ಹೊಣೆಗಾರ ಆಗಬೇಕಾಗುತ್ತದೆ. ಇಲ್ಲಿ ದುಡಿಸಿಕೊಳ್ಳುವ ಮಾಲೀಕರಷ್ಟೇ ಜವಾಬ್ದಾರಿ ದುಡಿಯುವ ಕಾರ್ಮಿಕರಿಗೂ ಇದೆ. ತಿಳಿದಿರಬೇಕು ಕಾರ್ಮಿಕರ ಮೇಲೆಯೂ ಮಾಲಕರಷ್ಟೇ ಜವಾಬ್ದಾರಿ ಇರುತ್ತದೆ. ಯಾವುದೇ ಸುರಕ್ಷಿತ ಕ್ರಮ ಅನುಸರಿಸದೇ ಹುಂಬತನ ಮಾಡಿ ಕೆಲಸಕ್ಕೆ ಹೋಗುವ ಕಾರ್ಮಿಕರು ತಮ್ಮ ಜೀವವನ್ನು ತಾವೇ ಬಲಿ ಕೊಡುತ್ತಾರೆ. ಕಾರ್ಮಿಕರು ತಮ್ಮ ತಮ್ಮ ಕೆಲಸ ನಿರ್ವಹಿಸುವ ಕ್ಷೇತ್ರದಲ್ಲಿ ಸುರಕ್ಷಿತವಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಸುರಕ್ಷಿತವಾಗಿ ಮನೆಗೆ ಬರುತ್ತಾರೆ. ಕೆಲಸ ನಿರ್ವಹಿಸುವಾಗ ಸ್ವಲ್ಪ ಅಜಾಗ್ರತೆ ತೋರಿದರೂ ಅಲ್ಲಿ ನಡೆಯುವಂತ ದುರಂತಗಳಿಗೆ ಬಲಿಯಾಗಿ ಕುಟುಂಬಗಳನ್ನು ಅನಾಥ ಮಾಡಿ ಹೋಗುತ್ತಾರೆ.
- ಜಗದೀಶ. ಎಸ್. ಗಿರಡ್ಡಿ, ಗೊರೆಬಾಳ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ