ಹಾಸನ: ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧ ನಿವಾರಣೆಗೆ ಕುವೆಂಪು ಅವರ ವಿಶ್ವಮಾನವ ತತ್ವದಲ್ಲಿದೆ ಪರಿಹಾರ ಎಂದು ಸಾಹಿತಿ ಭೇರ್ಯ ರಾಮಕುಮಾರ್ ತಿಳಿಸಿದರು.
ಹಾಸನ ಮನೆ ಮನೆ ಕವಿಗೋಷ್ಠಿ 312ನೇ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಜೆ.ಓ.ಮಹಾಂತಪ್ಪರ ಪ್ರಾಯೋಜನೆಯಲ್ಲಿ ವಿಶ್ವ ಮಾನವ ಬಂಧುತ್ವ ಸಭಾಂಗಣದಲ್ಲಿ ನಾ ಕಂಡಂತೆ ಕುವೆಂಪು ಕುರಿತು ಮಾತನಾಡಿ ಮಲೆನಾಡಿನಲ್ಲಿ ಜನಿಸಿ ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿಯಾಗಿ ಅದೇ ಕಾಲೇಜಿನ ಉಪನ್ಯಾಸಕ ಪ್ರಿನ್ಸಿಪಾಲರಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ದಾಖಲೆ ಸ್ಥಾಪಿಸಿದ ಕುವೆಂಪು ಸಮಾನತೆ, ವಿಶ್ವಮಾನವ ಪ್ರಜ್ಞೆ, ಪರಿಸರ ಕಾಳಜಿ, ಸರ್ವರಿಗೂ ಸಮಪಾಲು ಸಮಬಾಳು ಚಿಂತನೆಗಳನ್ನು ತಮ್ಮ ಕೃತಿಗಳಲ್ಲಿ ನೀಡಿದರು.
ಕರ್ನಾಟಕ ಏಕೀಕರಣ ಗೋಕಾಕ್ ವರದಿ ಜಾರಿ ಹೋರಾಟ ಮಂತ್ರ ಮಾಂಗಲ್ಯ ಚಿಂತನೆಗಳಿಗೆ ತಾವು ವಿದ್ಯಾರ್ಥಿ ದೆಸೆಯಲ್ಲಿಯೇ ಕುವೆಂಪು ಪ್ರಭಾವಕ್ಕೆ ಒಳಗಾಗಿ ಇಂದಿಗೂ ಸಾಹಿತ್ಯ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸಿಕೊಂಡ ಬಂದ ಆ ಕ್ಷಣಗಳನ್ನು ಸ್ಮರಿಸಿದರು.
ಕವಿಗೋಷ್ಠಿಯಲ್ಲಿ ಜೆ.ಆರ್.ರವಿಕುಮಾರ್ ಜನಿವಾರ, ದಿಬ್ಬೂರು ರಮೇಶ್, ಸಾವಿತ್ರಿ ಬಿ.ಗೌಡ, ಲಕ್ಷ್ಮೀದೇವಿ ದಾಸಪ್ಪ, ಹೆಚ್.ಬಿ.ಚೂಡಾಮಣಿ, ಪರಮೇಶ್ ಮಡಬಲು, ಉಮೇಶ್ ಹೊಸಹಳ್ಳಿ, ಸರೋಜ ಟಿ.ಎಂ. ಗೊರೂರು ಅನಂತರಾಜು, ಭೇರ್ಯ ರಾಮಕುಮಾರ್, ಗ್ಯಾರಂಟಿ ರಾಮಣ್ಣ, ಚಂದ್ರಶೇಖರ್ ಹಾನಗಲ್ ಕವಿತೆ ವಾಚಿಸಿದರು. ಧನಲಕ್ಷ್ಮಿ ಗೊರೂರು, ದಿಬ್ಬೂರು ರಮೇಶ್ ಕುವೆಂಪು ರಚನೆಯ ಗೀತೆಗಳನ್ನು ಮಂಜೇಗೌಡರು ಕೆ.ಎಸ್.ನ. ರಚಿತ ಗೀತೆ, ರಾಣಿ ಸಿ. ಭಾವಗೀತೆ, ಯೋಗೆಂದ್ರ ದುದ್ದ ತತ್ವ ಪದ, ಚಲುವನಹಳ್ಳಿ ಶೇಖರಪ್ಪ ಭಕ್ತಿಗೀತೆ ಮಧು ದೇಶಭಕ್ತಿ ಹೆಚ್.ಎಲ್.ಫಾಲಕ್ಷಾಚಾರ್ ಯಲಗುಂದ ಶಾಂತಕುಮಾರ್ ಎಂ.ಟಿ.ತಿಮ್ಮೇಗೌಡರು ರಂಗಗೀತೆ ಹಾಡಿ ರಂಜಿಸಿದರು.
ಸುಶೀಲ ಸೋಮಶೇಖರ್, ಜೆ.ಓ.ಮಹಾಂತಪ್ಪ ಮಾತನಾಡಿದರು. ಮೋಹನ್ ಕುಮಾರ್ ಜಿ.ಕೆ. ಹನುಮೇಗೌಡ ಬಿ.ಎಲ್. ಸೋಮನಹಳ್ಳಿ ಸೋಮಶೇಖರ್ ಜವರೇಗೌಡರು ಇದ್ದರು. ಸಾಹಿತಿ ಭೇರ್ಯ ರಾಮಕುಮಾರ್ ಅವರನ್ನು ಮನೆ ಮನೆ ಕವಿಗೋಷ್ಠಿ ವತಿಯಿಂದ ಸನ್ಮಾನಿಸಲಾಯಿತಿ. ಸಂಚಾಲಕ ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ