ಮಂಗಳೂರು: ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಮಂಗಳೂರು ಘಟಕ ಮತ್ತು ಕೆನರಾ ಕಾಲೇಜು ಮಂಗಳೂರು ಜಂಟಿಯಾಗಿ ಸಂವಿಧಾನ ದಿನವನ್ನು ಆಚರಿಸಿತು. ಹಿರಿಯ ನ್ಯಾಯವಾದಿ ಬಿ. ನಂದಕಿಶೋರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಂವಿಧಾನದ ಸ್ವರೂಪ, ಸಂವಿಧಾನಕ್ಕೆ ಸ್ಥಳೀಯರ ಕೊಡುಗೆ ಮೂಲಭೂತ ಹಕ್ಕು ಮತ್ತು ಉಲ್ಲಂಘನೆಗೆ ಸಂಬಂಧಿಸಿದಂತೆ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಎಡನೀರು ಮಠಾಧೀಶರು ನಡೆಸಿದ ಹೋರಾಟದ ನಿದರ್ಶನವನ್ನು ನೀಡಿದರು.
ಸಂವಿಧಾನ ವಿಧಿ 44ರ ಅನುಷ್ಠಾನದ (ಸಮಾನ ನಾಗರಿಕ ಸಂಹಿತೆ) ಅನಿವಾರ್ಯತೆ, ಸಂವಿಧಾನದಿಂದ ವಿಧಿ 370 ರದ್ದು ಮತ್ತು ಭಾರತೀಯ ಪ್ರಜೆಗಳು ಮೂಲಭೂತ ಕರ್ತವ್ಯವನ್ನು ಕಡ್ಡಾಯವಾಗಿ ನಿಭಾಯಿಸುವ ಬಗ್ಗೆ ಮಾಹಿತಿ ನೀಡಿದರು.
ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡಾ. ಗಣೇಶ್ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧಿವಕ್ತಾ ಪರಿಷತ್ ಘಟಕದ ಈಶ್ವರ ಕೊಟ್ಟಾರಿ, ಕಾರ್ಯದರ್ಶಿ ಕಿರಣ್ ರಾವ್, ಹಾಗೂ ಇತರ ವಕೀಲರು ಸಭೆಯಲ್ಲಿ ಉಪಸ್ಥಿತರಿದ್ದರು. ಸೌರವ್ ಸಾಲಿಯಾನ್ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ