ಜಲದ ಅಭಾವಕ್ಕೆ ಈಗಲೇ ತಯಾರು ಆಗಬೇಕಿದೆ: ಗಜಾನನ ವಝೆ

Upayuktha
0

 


ಉಜಿರೆ: ಈಗಿನ ಕೆಲವು ವರ್ಷಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮುಂದಿನ ಜನಾಂಗಕ್ಕೆ ಪ್ರಕೃತಿಯ ಸಮತೋಲನದೊಂದಿಗೆ ನೀರಿನ  ಉಳಿಸುವಿಕೆಯ ಕಾರ್ಯ ಮಾಡಬೇಕಾಗಿದೆ. ನೀರಿನ ಬಗ್ಗೆ ಇಸ್ರೇಲ್ ಅಂತಹ ದೇಶದ ಜನರ ಕಾರ್ಯ ಎಲ್ಲ ದೇಶಗಳಿಗೆ ಮಾದರಿ. ನೀರಿನ ಕೊಯ್ಲು ಮಾಡಿ ಎಲ್ಲರೂ ನೀರನ್ನು ಸದುಪಯೋಗ ಆಗುವಂತೆ ನೋಡಿಕೊಳ್ಳಬೇಕು. ಬಾವಿ ಕೆರೆಗಳಿಗೆ ಜಲ ಮರುಪೂರಣ ಮಾಡುವುದರೊಂದಿಗೆ ನೀರಿನ ಅಭಾವವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಆದ್ದರಿಂದ ಜಲದ ಅಭಾವಕ್ಕೆ ಈಗಲೇ ತಯಾರು ಆಗಬೇಕಿದೆ ಎಂದು ಮುಂಡಾಜೆಯ  ಜಲತಜ್ಞ ಹಾಗೂ ಪ್ರಗತಿಪರ ಕೃಷಿಕ ಗಜಾನನ ವಝೆ ಹೇಳಿದರು. 


ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆಯುತ್ತಿರುವ  ಜಾಗೃತಿ ಸಪ್ತಾಹದ ಅಂಗವಾಗಿ ದ್ರವ ಬಂಗಾರ- ಜೀವ ಜಲ ಎಂಬ ಜಲ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. 


ರಾ.ಸೇ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಗೌರವಿಸಿದರು. ಪ್ರಥಮ್ ಆರ್ ಜೈನ್ ಸ್ವಾಗತಿಸಿ,  ವಿನುತಾ ಆರ್ ನಾಯ್ಕ್ ವಂದಿಸಿದರು. ಶ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top