ಇಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕ

Upayuktha
0

ಹಾಸನ: ಶ್ರೀ ಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಇವರಿಂದ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಇಂದು (6-12-2023) ಬುಧವಾರ ಹೆಚ್.ಎಲ್.ಪಾಲಾಕ್ಷಾಚಾರ್ ನಿರ್ದೇಶನದಲ್ಲಿ ಉಮೇಶ್ ಡ್ರಾಮ ಸೀನರಿ ಮಂಡ್ಯ ಇವರ ರಂಗಸಜ್ಜಿಕೆಯಲ್ಲಿ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ನಾಟಕ ಪ್ರದರ್ಶನವನ್ನು 12 ಗಂಟೆಗೆ ಹಮ್ಮಿಕೊಳ್ಳಲಾಗಿದೆ. 




ಕಾರ್ಯಕ್ರಮದ ಅಧ್ಯಕ್ಷತೆ ಹಾಸನ ಕ್ಷೇತ್ರದ ಶಾಸಕರು ಹೆಚ್.ಎಸ್.ಪ್ರಕಾಶ್. ಸಾಹಿತಿ ಗೊರೂರು ಅನಂತರಾಜು, ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷರು ನಾಗರಾಜು ಸೋಮನಹಳ್ಳಿ, ಜೆಡಿಎಸ್ ಹಾಸನ ತಾ. ಅಧ್ಯಕ್ಷರು ಎಸ್.ದ್ಯಾವೇಗೌಡರು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು ಪದ್ಮರಾಜ್, ವಕೀಲರು ಶೇಷಾದ್ರಿ, ಕಲಾವಿದರ ಹಿತರಕ್ಷಣಾ ವೇದಿಕೆ ಅಧ್ಯಕ್ಷರು ರವಿ ಬಿದಿರೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರು ಜಿ.ಎಲ್.ಜವರೇಗೌಡರು ತಂಡದ ಪರವಾಗಿ ಕೋರಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top