ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ನಾಟಕಗಳ ಪಾತ್ರ ಅಪಾರ: ಭೇರ್ಯ ರಾಮಕುಮಾರ್

Upayuktha
0



ಹಾಸನ: ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ನಾಟಕಗಳ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು ಎಂದು ಸಾಹಿತಿ ಭೇರ್ಯ ರಾಮಕುಮಾರ್ ನುಡಿದರು. 




ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶ್ರೀ ಚಾಮುಂಡೇಶ್ವರಿ ಜಾನಪದ ಮತ್ತು ರಂಗಭೂಮಿ ಕಲಾಸಂಘ, ಹಾಸನ ವತಿಯಿಂದ ಸಿಗರನಹಳ್ಳಿ ಚಂದ್ರಶೇಖರ್‍ರವರು ಆಯೋಜಿಸಿರುವ ರಾಜ್ಯಮಟ್ಟದ ಪೌರಾಣಿಕ ನಾಟಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯ ಜಾಗೃತಿ ಮೂಡಿಸುವಲ್ಲಿ ರಂಗ ನಾಟಕಗಳು  ಪಾತ್ರ ವಹಿಸಿದ್ದವು. ರಾಮಾಯಣ ಮಹಾಭಾರತ ದಾನ ಶೂರ ಕರ್ಣ ಬೇಡರ ಕಣ್ಣಪ್ಪ ಅಂತಹ ನಾಟಕಗಳು ಸಮಾಜದಲ್ಲಿ ನೈತಿಕ ಚಿಂತನೆ ಮಾನವೀಯ ಮೌಲ್ಯಗಳನ್ನು ಇಂದಿಗೂ ಬಿಂಬಿಸುತ್ತಿವೆ ಎಂದರು. 




ಹಾಸನದ ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಹಾಸನ ಜಿಲ್ಲೆ ರಂಗ ಚಟುವಟಿಕಗಳ ತವರೂರು. ಈ ಕಲಾ ಮಂದಿರ ಜಿಲ್ಲೆಯ ಕಲಾವಿದರ ಕಲಾರಾಧನೆಯ ದೇವಾಲಯ. ಇಲ್ಲಿ ಅಪಾರ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಇಂತವರ ಬಗ್ಗೆ ತಾವು ಪರಿಚಯ ಲೇಖನ ಸಂಕಲನ ಹೊರತರುತ್ತಿದ್ದು ರಂಗಕಲಾವಿದರು ತಮ್ಮ ವಿವರ ನೀಡಬಹುದೆಂದು ತಿಳಿಸಿದರು. 




ಸಮಾಜ ಸೇವಾಸಕ್ತ ಜೆ.ಓ.ಮಹಾಂತಪ್ಪ, ವಕೀಲರು ನವಿಲೆ ಅಣ್ಣಪ್ಪ, ಸ್ವಾತಂತ್ರ್ಯ ಹೋರಾಟಗಾರ ಎಂ.ಶಿವಣ್ಣ, ಚಾಮುಂಡೇಶ್ವರಿ ಕಲಾಸಂಘದ ಅಧ್ಯಕ್ಷ ಬಾಲಕೃಷ್ಣ ಕಟ್ಟಾಯ, ನಟ ಶೇಖರಪ್ಪ  ಮೊದಲಾದವರು ಇದ್ದರು. ಇದೇ ಸಂದರ್ಭ ರಂಗಭೂಮಿ ಮತ್ತು  ಸಮಾಜ ಸೇವೆಗಾಗಿ  ನಟ ಎಂ.ಸಿ.ರಾಜು ಅವರಿಗೆ ಬೆಳ್ಳಿಕಿರೀಟ ಧಾರಣೆ ಮಾಡಿ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿರ್ದೇಶಕ ಎ.ಸಿ.ರಾಜು ಪ್ರಾರ್ಥಿಸಿದರು. ನಂತರ ನಡೆದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top