ರೋಗಿಗಳಿಗೆ ಉತ್ತಮ ಸೇವೆ ನೀಡುವುದೇ ವೈದ್ಯಕೀಯ ವೃತ್ತಿಯ ಶ್ರೇಷ್ಥತೆ: ಡಾ. ಭವಾನಿ ಎಸ್ ರಾವ್

Upayuktha
0


ಕುಂದಾಪುರ: ರೋಗಿಗಳಿಗೆ ಉತ್ತಮವಾದ ಸೇವೆ ನೀಡುವುದು ವೈದ್ಯಕೀಯ ವೃತ್ತಿಯ ಶ್ರೇಷ್ಠತೆಯಾಗಿದೆ ಎಂದು ಕುಂದಾಪುರ ಶ್ರೀದೇವಿ ಆಸ್ಪತ್ರೆಯ ಖ್ಯಾತ ಸ್ತ್ರೀರೋಗ ಮತ್ತು ಹೆರಿಗೆ ವೈದ್ಯರಾದ ಡಾ. ಭವಾನಿ ಎಸ್ ರಾವ್ ಹೇಳಿದರು.


ಅವರು ಡಿ.29 ರಂದು ತೆಕ್ಕಟ್ಟೆ ಶ್ರೀದೇವಿ ಪಾಲಿಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಯಶಸ್ಸು ಸಿಗಬೇಕಾದರೆ ನಿರಂತರ ಶ್ರಮ ಮತ್ತು ತೊಡಗಿಸಿಕೊಳ್ಳುವಿಕೆ ಮುಖ್ಯ ಎಂದರು.


ಮುಖ್ಯ ಅತಿಥಿ ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಶೋಭಾನಾ ಮಾತನಾಡಿ, ಈ ಗ್ರಾಮೀಣ ಭಾಗದಲ್ಲಿ ಅತ್ಯಂತ ಸುಸಜ್ಜಿತವಾದ ಪಾಲಿ ಕ್ಲಿನಿಕ್‌ ಇರುವುದು ಸಂತೋಷದ ವಿಷಯ ಇದರ ಅನುಕೂಲತೆ ಅಗತ್ಯವಿದ್ದವರು ಉಪಯೋಗಿಸಬೇಕೆಂದರು. ಸಾಮಾಜಿಕ ಮುಂದಾಳು ಮಲ್ಯಾಡಿ ಶಿವರಾಮ ಶೆಟ್ಟಿ ಶುಭ ಹಾರೈಸಿದರು.


ವೇದಿಕೆಯಲ್ಲಿ ರಮಾ ಎಸ್ ನಾಯಕ್, ನಿವೃತ್ತ ಶಿಕ್ಷಕಿ ಜಯಲಕ್ಮೀ, ಅರುಣೋದಯ ಕಾಂಪ್ಲೆಕ್ಸ್ ನ ಮಾಲಕರಾದ ಅನಸೂಯ ಪ್ರಭು, ಜಯಂಟ್ಸ್ ಗ್ರೂಪ್ ಅಧ್ಯಕ್ಷ ವಿವೇಕಾನಂದ ಕಾಮತ್, ವಿಷ್ಣುಮೂತಿ೯ ನಾಯಕ್, ಶ್ಯಾಮ, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಪಾಲಿಕ್ಲಿನಿಕ್ ಮುಖ್ಯಸ್ಥರಾದ ಡಾ. ಸುಮಂಗಲ ಯು ಸ್ವಾಗತಿಸಿ ಪ್ರಸ್ತಾವನೆಗೈದರು.


ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದ ಮತ್ತು ಇತರೆ ವಿಭಾಗದ 30 ಜನರನ್ನು ಸನ್ಮಾನಿಸಲಾಯಿತು. 5 ಮಂದಿ ಆಶಕ್ತರಿಗೆ ಮತ್ತು ರೋಗಿಗಳಿಗೆ ಸಹಾಯಧನ ವಿತರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top