ಐತಿಹಾಸಿಕ ದಾಖಲೆಗಳ ಅಧ್ಯಯನ ಭವಿಷ್ಯದಲ್ಲಿ ದೇಶದ ಅಸ್ಮಿತೆಯನ್ನು ಖಾತರಿ ಪಡಿಸುವಲ್ಲಿ ಮಹತ್ತರ ಪಾತ್ರ: ಡಾ. ಪೀಟರ್ ವಿಲ್ಸನ್ ಪ್ರಭಾಕರ್

Upayuktha
0



ಸುರತ್ಕಲ್ : ಐತಿಹಾಸಿಕ ದಾಖಲೆಗಳ ಅಧ್ಯಯನ ಭವಿಷ್ಯದಲ್ಲಿ ದೇಶದ ಅಸ್ಮಿತೆಯನ್ನು ಖಾತರಿ ಪಡಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ನುಡಿದರು. 




ಅವರು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಮಾನವಿಕ ವಿಭಾಗ ಮತ್ತು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯ ಸಂಚಯಗಿರಿ, ಬಂಟ್ವಾಳದ ಜಂಟಿ ಆಶ್ರಯದಲ್ಲಿ ಅರಿವು ಯಾನ ಮಾಲಿಕೆಯಲ್ಲಿ ಗೋವಿಂದ ದಾಸ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕಿ ಡಾ. ವಿಜಯಲಕ್ಷ್ಮೀ ನೇರಳಕೋಡಿ ಅವರ ‘ಕರಾವಳಿಯ ಕಿಲ್ಲೆಗಳು’ ಕೃತಿಯನ್ನು ಲೋಕಾರ್ಪಣೆ ಗೊಳಿಸುತ್ತಾ ಕೋಟೆಗಳು ಒಂದು ಪ್ರದೇಶದ ಸಾಮಾಜಿಕ, ಆರ್ಥಿಕ, ರಕ್ಷಣಾ ತಂತ್ರಗಳನ್ನು ಕಾಲಕಾಲಕ್ಕೆ ಜನರೆದರು ತೆರೆದಿಡುವ ಜೀವಂತ ಪರಂಪರೆಗಳು ಎಂದು ತಿಳಿಸಿದರು.




ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ ವಿದ್ಯಾರ್ಥಿಗಳು ಸ್ಥಳೀಯ ಐತಿಹಾಸಿಕ ಕೇಂದ್ರಗಳ ಕುರಿತು ಸಂಶೋಧನೆ ನಡೆಸುವಲ್ಲಿ ಗಮನ ಹರಿಸಿಬೇಕೆಂದರು.




ಕೃತಿಯ ಪ್ರಕಾಶಕರಾದ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಬಂಟ್ವಾಳದ ಅಧ್ಯಕ್ಷ ಡಾ. ತುಕಾರಾಂ ಪೂಜಾರಿ ಕರಾವಳಿಯ ಕುರಿತಾದ ಮಹಾಪ್ರಬಂಧಗಳ ಸಾರವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕೇಂದ್ರ ನಿರಂತರವಾಗಿ ಶ್ರಮಿಸುತ್ತಿದ್ದು, ಯುವ ಪಿಳಿಗೆಯಲ್ಲಿ ಇತಿಹಾಸದ ಕುರಿತು ಒಲವನ್ನು ಮೂಡಿಸುವುದು ಅಗತ್ಯವಿದೆ ಎಂದರು.




ಮುಖ್ಯ ಅತಿಥಿ ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ಮಾತನಾಡಿ ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿ ಇರಬೇಕೆಂದರು.




ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕರಾದ ಪ್ರೊ. ಹರೀಶ ಆಚಾರ್ಯ ಪಿ, ಸ್ವಾಗತಿಸಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ವಂದಿಸಿದರು. ಕ್ಯಾಪ್ಟನ್. ಡಾ. ಸುಧಾ ಯು ಕಾರ್ಯಕ್ರಮ ನಿರೂಪಿಸಿದರು. ಲೇಖಕಿ ಡಾ. ವಿಜಯಲಕ್ಸ್ಮೀ ನೇರಳಕೋಡಿ ಕೃತಿ ರಚನೆ ಹಿನ್ನಲೆಯ ಕುರಿತು ಮಾತನಾಡಿದರು. ಉಪಪ್ರಾಚಾರ್ಯ ಪ್ರೊ. ರಮೇಶ್ ಭಟ್ ಎಸ್.ಜಿ., ಪಾಂಡುರಂಗ ನಾಯಕ್, ಬೆನೆಟ್ ಅಮ್ಮನ್ನ, ಡಾ. ಸಾಯಿಗೀತ ಮಹೇಶ್ ನಾಯಕ್, ದಿನೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top