ವಿದ್ಯಾಗಿರಿ: ಜ್ಞಾನದ ವೃದ್ಧಿಯಲ್ಲಿ ಗ್ರಂಥಾಲಯದ ಪಾತ್ರ ಬಹಳ ಮಹತ್ತರ ಎಂದು ಮಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಉಮೇಶ್ ನಾಯ್ಕ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಮತ್ತು ಉಪನ್ಯಾಸಕರಿಕರಿಗೆ ‘ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ’ ವಿಭಾಗ ಆಯೋಜಿಸಿರುವ ‘ಓಪನ್ ಅಕ್ಸೆಸ್ಸ್ ಇ - ರಿಸೋರ್ಸ್ ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು . ಹಲವಾರು ಮಾಹಿತಿಗಳನ್ನು ನಾವು ಗ್ರಂಥಾಲಯದ ಮುಖಾಂತರ ಪಡೆದುಕೊಳ್ಳುತ್ತೇವೆ. ಕೆಲವು ಸಂದರ್ಭದಲ್ಲಿ ಮಾಹಿತಿ ಪಡೆಯಲು ಹಲವಾರು ಗ್ರಂಥಾಲಯಗಳಿದ್ದರೂ, ಎಲ್ಲಾ ಮಾಹಿತಿಗಳು ಲಭ್ಯವಾಗದೆ ಇರಬಹುದು. ಅಂತಹ ಸಮಯದಲ್ಲಿ ಇ-ಗ್ರಂಥಾಲಯ ಸಹಾಯಕ’ ಎಂದರು.
ಸಂಶೋಧನೆ ಮತ್ತು ಪ್ರಾಜೆಕ್ಟ್ ಮಾಹಿತಿಗಳಿಗಾಗಿ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೆಚ್ಚು ಅವಲಂಬಿತರಾಗಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲ ಮಾಹಿತಿ ಗ್ರಂಥಾಲಯದಿಂದ ಸಿಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಓಪನ್ ಆ್ಯಕ್ಸಸ್ ಇ ಲೈಬ್ರೆರಿ (ಮುಕ್ತ ಇ -ಗ್ರಂಥಾಲಯ) ಸಹಕಾರಿ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ‘ನಿಮ್ಮ ಗುರಿಯ ಮೇಲೆ ಸದಾ ನಿಮ್ಮ ಗಮನವಿರಲಿ. ಗ್ರಂಥಾಲಯವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿ. ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯುವಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ’ಎಂದರು.
ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾರಾಮ್ ಭಟ್, ಮುಖ್ಯಗ್ರಂಥಪಾಲಕಿ ಶ್ಯಾಮಲತಾ ಇದ್ದರು . ವಿದ್ಯಾರ್ಥಿನಿ ಸಾನಿಧ್ಯ ಸ್ವಾಗತಿಸಿ, ಸಂಜನಾ ವಂದಿಸಿದರು. ವಿದ್ಯಾರ್ಥಿ ಅದಿತ್ಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ