ಮಂಗಳೂರು:ಯಕ್ಷಗಾನ ಕಲೆ ಈಗ ಸರ್ವಮಾನ್ಯವಾಗಿದೆ. ಹಿಂದಿಗಿಂತಲೂ ಹೆಚ್ಚಿನ ರಾಜ ಗಾಂಭೀರ್ಯದಿಂದ ಮೆರೆದು ಸಂಪನ್ನಗೊಳ್ಳುತ್ತಿದೆ. ಕಲಾಪೋಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಕಲೆಯನ್ನು ಗೌರವ ಭಾವನೆಯಿಂದ ಕಂಡು ಸಂಭ್ರಮಿಸುತ್ತಿದ್ದಾರೆ. ಕಲಾವಿದರೂ ಹೊಸ ರೀತಿಯಲ್ಲಿ ಹಳೆಯ ಪರಂಪರೆಯನ್ನು ರಸಿಕರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇದು ಕಲೆಗೆ - ಕಲಾವಿದರಿಗೆ ನೀಡುವ ಪ್ರೋತ್ಸಾಹ, ಇಂದು ಸರಕಾರವು ಸಂಸ್ಕೃತಿ ಇಲಾಖೆಯ ಮೂಲಕ ಕಲೆಗೆ ಬೇರೆ ಬೇರೆ ರೀತಿಯಲ್ಲಿ ಸಹಕರಿಸುತ್ತಾ ಬರುತ್ತಿರುವುದು ಸ್ವಾಗತಾರ್ಹ. ಇಂದಿನ ಕಾರ್ಯಕ್ರಮವನ್ನು ಸಂಘಟಿಸಿದ ರವೀಂದ್ರ ಪೂಜಾರಿಯವರಿಗೆ ಅಭಿನಂದನೆಗಳು ಎಂದು ಶ್ರೀ ಕ್ಷೇತ್ರ ಪಣಂಬೂರು ನಂದನೇಶ್ವರ ದೇವಳದ ಪ್ರಧಾನ ಅರ್ಚಕರಾದ ದೇವದತ್ತ ಶರ್ಮರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯ ಬಯಲಾಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಿರಿಯ ಯಕ್ಷಗಾನ ಕಲಾವಿದ ಪಿ.ಶ್ರೀಧರ ಐತಾಳರು ಯಕ್ಷಗಾನದಲ್ಲಿ ಹೊಸ ಹೊಸ ಕಲಾವಿದರ ಪ್ರವೇಶ ಕಲೆಯ ಬೆಳವಣಿಗೆಗೆ ಪೂರಕ. ಕಲೆಯ ಉಳಿಯುವಿಕೆಗೆ ಇದು ಸಹಕಾರಿ ಎಂದು ತಂಡಕ್ಕೆ ಶುಭ ಹಾರೈಸಿದರು. ಪಿ. ಅನಂತ ಐತಾಳರು ಅಧ್ಯಕ್ಷತೆ ವಹಿಸಿದ್ದರು. ವೇಷಧಾರಿ ಶ್ರೀಗಣಾಧಿರಾಜ ತಂತ್ರಿಗಳು ಯಕ್ಷಗಾನ ಕೂಟ ಸಂಘಟನೆಯಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು. ಗೋಪಾಲಕೃಷ್ಣ ಭಟ್, ದೇವಸ್ಯ ಪ್ರಾರ್ಥಿಸಿದರು. ಶ್ರೀಮತಿ ವೀಣಾ ಕೆ. ಉಜಿರೆ ನಿರ್ವಹಿಸಿ, ಪಿ.ಗಣಪತಿಯವರು ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ಬಳಿಕ ರವೀಂದ್ರ ಪೂಜಾರಿಯವರ ತಂಡದಿಂದ ಜಾಂಬವತಿ ಕಲ್ಯಾಣ ಎಂಬ ಸಂಸ್ಕೃತಿ ಇಲಾಖಾ ಪ್ರಾಯೋಜಿತ ಯಕ್ಷಗಾನ ಬಯಲಾಟ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ