ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ: ಡಾ.ಶ್ರೀಪತಿ ಕಲ್ಲೂರಾಯ

Upayuktha
0



ಪುತ್ತೂರು: ಅಧ್ಯಾಪನ  ವೃತ್ತಿಯಲ್ಲಿ ಸರಳ ಸಜ್ಜನಿಕೆಯಿಂದ ಕೂಡಿದಾಗ ವಿದ್ಯಾರ್ಥಿಗಳನ್ನು ಅರಿತುಕೊಳ್ಳಲು ಸುಲಭ ಸಾಧ್ಯ.  ಇದಕ್ಕೆ ಉತ್ತಮ ಉದಾಹರಣೆಯಾಗಿ ನಿವೃತ್ತಿಯಾಗುತ್ತಿರುವ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎನ್ ನರಸಿಂಹ ಭಟ್ ಹಾಗೂ ಕಛೇರಿ ನಿರ್ವಾಹಕ ಜಗನ್ನಾಥ್ ನಾಯಕ್ ಸಾಕ್ಷಿಯಾಗಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.



ಇವರು ಪುತ್ತೂರು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ)ಮಹಾವಿದ್ಯಾಲಯದ ಅಧ್ಯಾಪಕ ಹಾಗೂ ಅಧ್ಯಾಪಕೇತರ ನೌಕರರ ಸಂಘ ದಿಂದ ಆಯೋಜಿಸಿದ್ದ ನಿವೃತ್ತರಾಗುತ್ತಿರುವ ಸಹೋದ್ಯೋಗಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. 



ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ನಿವೃತ್ತರಾಗುತ್ತಿರುವ ಹಿರಿಯರು ಪ್ರಸ್ತುತ ದಿನದ ಉದ್ಯೋಗಿಗಳಿಗೆ ಮಾರ್ಗದರ್ಶಕರು. ಇವರ ಸರಳತೆ,ಶಿಸ್ತು, ಸಮಯಪ್ರಜ್ಞೆ, ಕಾರ್ಯದಕ್ಷತೆಯನ್ನು ಪ್ರತಿಯೊಬ್ಬರು ಮೆಚ್ಚುವ ಹಾಗೂ ರೂಢಿಸಿಕೊಳ್ಳುವ ವಿಷಯ. ಕಾಲೇಜಿನಲ್ಲಿ ಕೆಲಸ ನಿರ್ವಹಿಸಿದ  ಹಿರಿಯರೊಂದಿಗೆ ಸದಾ ಸಂಪರ್ಕದಲ್ಲಿದ್ದುಕೊಂಡು ಮುಂದುವರಿಯಬೇಕು ಎಂದರು.



ಕಾರ್ಯಕ್ರಮದಲ್ಲಿ ನಿವೃತ್ತಿಗೊಳ್ಳುತ್ತಿರುವ ಕಾಲೇಜಿನ  ಭೌತಶಾಸ್ತ್ರ ವಿಭಾಗದ ಪ್ರಾದ್ಯಾಪಕ ಎನ್ ನರಸಿಂಹ ಭಟ್ ಹಾಗೂ ಕಾಲೇಜಿನ ಅಧ್ಯಾಪಕೇತರ ಸಿಬ್ಬಂದಿ ಜಗನ್ನಾಥ್ ನಾಯಕ್ ಇವರನ್ನು ಕಾಲೇಜಿನ ಅಧ್ಯಾಪಕ ಹಾಗೂ ಅಧ್ಯಾಪಕೇತರ ನೌಕರರ ಸಂಘದಿಂದ ಸನ್ಮಾನಿಸಲಾಯಿತು.



ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಪ್ರೊ..ವೇದವ್ಯಾಸ, ಡಾ. ಮಾಧವ್ ಭಟ್, ಕಾಲೇಜಿನ ಪ್ರಾಂಶುಪಾಲ ಪ್ರೊ.. ವಿಷ್ಣು ಗಣಪತಿ ಭಟ್, ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ. ಎಚ್.ಜಿ. ಶ್ರೀಧರ್,  ಕಾಲೇಜಿನ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್ ಐಕ್ಯೂ ಎಸಿ ಸಂಯೋಜಕ ಪ್ರೊ.. ಶಿವಪ್ರಸಾದ್ ಎಸ್. ಅಧ್ಯಾಪಕ ಸಂಘದ ಸಂಯೋಜಕ ಡಾ.ಸೌಮಿತ್ರ, ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ್ ಶಾಸ್ತ್ರಿ, ಕಾಲೇಜಿನ ಅಧ್ಯಾಪಕ ವೃಂದ, ಅಧ್ಯಾಪಕೇತರ ನೌಕರರ ವೃಂದ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಭೌತಶಾಸ್ತ್ರ ವಿಭಾಗದ  ಉಪನ್ಯಾಸಕ ದೀಕ್ಷಿತ್ ನಿರ್ವಹಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top