ಪಂಚ ವಕಾರಗಳಲ್ಲಿ ಬದುಕಿನ ಯಶಸ್ಸು: ಬಾಲಕೃಷ್ಣ ಶೆಟ್ಟಿ

Upayuktha
0



ವಿದ್ಯಾಗಿರಿ: ‘ಬದುಕಿನ ಯಶಸ್ಸು ಪಂಚ ‘ವ’ ಕಾರಗಳಲ್ಲಿ ಅಡಗಿದೆ’ ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹೇಳಿದರು. 




ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹೊಸ ವಿದ್ಯಾರ್ಥಿಗಳ ಸ್ವಾಗತ ‘ಪರಿಚಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವಪು (ದೇಹ), ವಸ್ತ್ರ, ವಿದ್ಯೆ, ವಿನಯ, ವಾಕ್ (ಮಾತುಗಾರಿಕೆ) ಎಂಬ ಐದು ವಕಾರಗಳು ಪಂಚಸೂತ್ರಗಳಾಗಿವೆ’ ಎಂದು ವಿವರಿಸಿದ ಅವರು, ಪತ್ರಿಕೋದ್ಯಮ ವಿದ್ಯಾರ್ಥಿಗಳೂ ಪತ್ರಿಕಾ ಧವರ್iವನ್ನು ಪಾಲಿಸಬೇಕು. ಉತ್ತಮ ಪತ್ರಕರ್ತರಾಗಲು ಪ್ರಯತ್ನಿಸಬೇಕು. ಪ್ರತಿ ವ್ಯಕ್ತಿಯ ಜೀವನದಲ್ಲಿ ತಾಯಿ, ತಾಯಿನಾಡು, ತಾಯಿಭಾಷೆ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಗುರು ಬಹುಮುಖ್ಯ. ಇವುಗಳ ಅರಿವು ಬದುಕಿನ ಉನ್ನತಿಗೆ ಕಾರಣವಾಗುತ್ತವೆ’ ಎಂದರು. 




ಯಾವಾಗಲೂ ಆಂತರ್ಯದಲ್ಲಿ ವಿನಯವನ್ನು ಹೊಂದಿದ ವ್ಯಕ್ತಿಯೇ ಸಮಾಜದಲ್ಲಿ ಜಯಿಸುತ್ತಾನೆ. ಅಹಂ ಹೊಂದಿದ ವ್ಯಕ್ತಿಯು ವಿನಯವಂತಿಕೆಯನ್ನು ನಟಿಸಿದರೂ ಪ್ರಯೋಜನ ಆಗದು. ಅದು ಮನಸ್ಸಿನ ಅಂತರಾಳದಿಂದ ಬರಬೇಕು. ಎಲ್ಲರನ್ನೂ ಪ್ರೀತಿ- ಸಮಾನತೆಯಿಂದ ಕಾಣುವ, ಗೌರವಿಸುವ ವ್ಯಕ್ತಿತ್ವ ರೂಢಿಸಿಕೊಳ್ಳಿ. ನಿಮ್ಮ ಕೆಲಸಕ್ಕಿಂತ ಹೆಚ್ಚಾಗಿ ನಿಮ್ಮ ನಡವಳಿಕೆಯು ಮಾತನಾಡುತ್ತದೆ. ಅದು ನಿಮ್ಮ ವ್ಯಕ್ತಿತ್ವವನ್ನು ಸಮಾಜದಲ್ಲಿ ನಿರೂಪಿಸುತ್ತದೆ. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಸಕಾರಾತ್ಮಕ ಚಿಂತನೆ ಹೊಂದಬೇಕು. ಆಗ ಮಾತ್ರ ಬೆಳೆಯಲು ಸಾಧ್ಯ ಎಂದರು. 




ವಿಭಾಗದ ಸಂಯೋಜಕ ಪ್ರಸಾದ ಶೆಟ್ಟಿ, ಸಹ ಪ್ರಾಧ್ಯಾಪಕ ಡಾ. ಶ್ರೀನಿವಾಸ ಹೊಡೆಯಾಲ, ಸಹಾಯಕ ಪ್ರಾಧ್ಯಾಪಕರಾದ ಹರ್ಷವರ್ಧನ ಪಿ. ಆರ್, ನಿಶಾನ್ ಕೋಟ್ಯಾನ್, ಇಂಚರಾ ಗೌಡ, ದೀಕ್ಷಿತಾ, ದುರ್ಗಾ ಪ್ರಸನ್ನ, ಅಕ್ಷಯ್ ಕುಮಾರ್ ಇದ್ದರು. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top