ಶ್ರೀರಾಮ ಕಥಾ ಲೇಖನ ಅಭಿಯಾನ-14: ರಾಮಾಯಣದ ಪ್ರಮುಖ ಘಟನೆಗಳು

Upayuktha
0


 ಚಿತ್ರ ಕೃಪೆ: ಪ್ರೊ. ಜಿ. ವೆಂಕಟಸುಬ್ಬಯ್ಯ ಸಂಪಾದಿತ ಸಚಿತ್ರ ರಾಮಾಯಣ ದರ್ಶನ


-ಶ್ರೀಧರ  ರಾಯಸಂ 

ಶ್ರೀ ಮನ್ನಾರಾಯಣ, ಲೋಕಕಂಟಕರಾದ  ದೈತ್ಯರನ್ನು  ಸಂಹರಿಸಲು ಶ್ರೀ ರಾಮಚಂದ್ರನ ರೂಪದಲ್ಲಿ ಧರೆಯಲ್ಲಿ ಅವತರಿಸಿ, ಲೋಕಕ್ಕೆ ನೆಮ್ಮದಿ ತಂದನೆಂದು, ರಾಮಾವತಾರದ. 24 ನೇ ತ್ರೇತಾಯುಗದಲ್ಲಿ ಇತಿಹಾಸ  ನಡೆಯಿತೆಂದು,  ಭಾರತಾದಿ ಗ್ರಂಥಗಳು  ತಿಳಿಸುತ್ತವೆ!  ವಾಲ್ಮೀಕಿ ಮಹಷಿ೯ಯ  ರಾಮಾಯಣ,  24000 ಶ್ಲೋಕಗಳಿಂದ ಕೂಡಿದ್ದು, ಇದರಲ್ಲಿ ಬರುವ ಅನೇಕ ಘಟನೆಗಳು,  ಅತ್ಯಂತ ಕುತೂಹಲ, ನಿಗೂಢ, ಸ್ವಾರಸ್ಯಕರ ಮತ್ತು ಪಾತ್ರಗಳು ಪರಸ್ಪರ   ಘಟನೆಗಳಿಗೆ ಪೂರಕವಾಗಿ,  ಶ್ರೀ ರಾಮಚಂದ್ರನ ಪಟ್ಟಾಭಿಷೇಕ ನೆರವೇರಲು  ದೈತ್ಯರ  ಸಂಹಾರವಾಗಲು ಸಹಾಯವಾಗಿವೆ!  


ಕೈಕೇಯಿ,  ಶ್ರೀರಾಮಚಂದ್ರನಿಗೆ  14 ವಷ೯  ವನವಾಸ  ಹೋಗಲು,  ಹೇಳಿದ  ಕಾರಣವೇನೆಂದರೆ  ಅಯೋಧ್ಯೆಯಲ್ಲಿ  ಆಗಿನ ರಾಜನೀತಿ ಪ್ರಕಾರ,  ಹದಿನಾಲ್ಕು ವಷ೯ ನಾಗರಿಕ  ಪೌರತ್ವವಿರುವುದು 14 ವಷ೯ ಮೀರಿದರೆ,  ಶ್ರೀ ರಾಮಚಂದ್ರನಿಗೆ  ಪಟ್ಟಾಭಿಷೇಕವಿಲ್ಲ!  ಭರತನಿಗೆ ಪಟ್ಟಾಭಿಷೇಕ  ದೊರಕುವುದು ಎಂಬ ದೂರಾಲೋಚನೆ  ಕೈಕೇಯಿ ಹೊಂದಿದ್ದಳು!  ಮಂಥರೆ  ಕೇಕೇಯ  ರಾಜ್ಯದ  ಅರಮನೆಯಲ್ಲಿ ಕೈಕೇಯಿ  ಸೇವಕಿಯಾಗಿದ್ದಳು. ಮಂಥರೆ  ಕುರೂಪಿಯಾಗಿದ್ದು, ಪ್ರತಿದಿನ  ಕೈಕೇಯಿ, ಇನ್ನಿತರರು  ಹಾಸ್ಯ ಮಾಡಿ ಹಿಯಾಳಿಸುತ್ತಿದ್ದರು.  ಮನಸ್ಸಿನಲ್ಲಿ ಸೇಡಿನ  ಭಾವನೆ  ಹೊಂದಿ,  ಮಂಥರೆ ಕೈಕೇಯಿ ಮೇಲೆ ಕೋಪಗೊಂಡಿದ್ದಳು.   ಅಯೋಧ್ಯೆಯಲ್ಲಿ  ಮಂಥರೆ   ಎರಡು ವರ ದಶರಥನಿಗೆ   ಕೇಳಲು ಕೈಕೇಯಿಗೆ  ಜ್ಞಾಪಿಸಿ,   ಶ್ರೀ ರಾಮಚಂದ್ರ  ವನವಾಸಕ್ಕೆ ಹೊರಡಲು ಕಾರಣಳಾಗಿ   ಕೈಕೇಯಿಯ  ವೈಧವ್ಯಕ್ಕೆ  ಕಾರಣಳಾಗಿದ್ದು ದುರಂತ!!!  

     

ವಿಶ್ವಾಮಿತ್ರ   ಮಹಷಿ೯ಗಳು   ಶ್ರೀ ರಾಮಚಂದ್ರ, ಮತ್ತು ಲಕ್ಷ್ಮಣನನ್ನು.ಮಿಥಿಲಾ   ನಗರಕ್ಕೆ ಸೀತಾ  ಸ್ವಂಯವರಕ್ಕೆ  ಕರೆದುಕೊಂಡು  ಹೋಗಿದ್ದ  ಪ್ರಸಂಗ, ಅತ್ಯಂತ   ಮನೋಹರವಾಗಿದೆ.    ಶ್ರೀ ರಾಮಚಂದ್ರ  ಜನಕ  ಮಹಾರಾಜ  ಏಪ೯ಡಿಸಿದ್ದ  ಸೀತಾ  ಸ್ವಯಂವರದಲ್ಲಿ  ಶಿವಧನುಸ್ಸನ್ನು  ಮುರಿದಿದ್ದು ಕಂಡು,  ಸಂತೋಷದಿಂದ   ಸೀತಾ ಮಾತೆ  ಮಾಲೆಯನ್ನು  ಶ್ರೀ ರಾಮಚಂದ್ರನ  ಕೊರಳಿಗೆ   ಹಾಕಲು  ಸಿದ್ಧಳಾದಳು  ಶ್ರೀ ರಾಮಚಂದ್ರ ಆಜಾನುಬಾಹು ಎತ್ತರದ  ಆಕಾರ  ಸುಂದರನಾಗಿರಲು  ಸೀತಾಮಾತೆ  ಮಾಲೆ   ಹಾಕಲು    ಶ್ರೀ ರಾಮಚಂದ್ರ  ಅತಿ    ಎತ್ತರದ     ಸ್ಪುರದ್ರೂಪಿ  ಮಯಾ೯ದಾಪುರುಷೋತ್ತಮ  ಎಂಬ  ಗೊಂದಲದಲ್ಲಿ  ಸ್ವಲ್ಪ  ವಿಚಲಿತಳಾದಳು!   ವಿಶ್ವಾಮಿತ್ರ,  ಇದನ್ನು  ಗಮನಿಸಿ,  ಶೇಷಾವತಾರಿಯಾದ,   ಲಕ್ಷ್ಮಣನನ್ನುಕರೆದು,    ಸೀತಾಮಾತೆ ಗೊಂದಲದಲ್ಲಿದ್ದಾಳೆ.  ನೀನು  ಭೂದೇವಿಯನ್ನು  ಪ್ರಾಥಿ೯ಸಿ  ಸ್ವಲ್ಪ   ಭೂಮಿಯನ್ನು   ಎತ್ತರಿಸುವಂತೆ   ಪ್ರಾಥಿ೯ಸು  ಎಂದು  ಆದೇಶಿಸಿದರು.


ಲಕ್ಷ್ಮಣ ಅವರ    ಆದೇಶದಂತೆ,  ಪ್ರಾಥಿ೯ಸಲು   ಭೂದೇವಿ ತಾನು  ಭೂಮಿಯನ್ನು  ಎತ್ತರಿಸಿದರೂ  ಶ್ರೀ ರಾಮಚಂದ್ರ  ತ್ರಿವಿಕ್ರಮನಂತೆ  ಎತ್ತರನಾಗುವನು.   ಶ್ರೀ ರಾಮಚಂದ್ರನಿಗೆ  ಅಪಚಾರ  ಮಾಡುವುದಿಲ್ಲವೆಂದು   ಭೂದೇವಿ  ಲಕ್ಷ್ಮಣನ ಪ್ರಾಥ೯ನೆ  ನಿರಾಕರಿಸಿದಳು.   ವಿಶ್ವಾಮಿತ್ರ  ಮಹಷಿ೯ಗಳು,   ಸೀತಾಮಾತೆ  ಶ್ರೀ ರಾಮಚಂದ್ರನ  ಕೊರಳಿಗೆ ಮಾಲೆ ಹಾಕಲು   ಮತ್ತೊಂದು  ಉಪಾಯ ಮಾಡಿದರು.    ವಿಶ್ವಾಮಿತ್ರ    ಮಹಷಿ೯ಗಳು   ಲಕ್ಷ್ಮಣನನ್ನು ಕರೆದು   ತಕ್ಷಣ    ಶ್ರೀ ರಾಮಚಂದ್ರನ   ಪಾದಕ್ಕೆ  ನಮಸ್ಕರಿಸು    ಎಂದು   ಹೇಳಿದಾಗ  ಲಕ್ಷ್ಮಣ  ತಡಮಾಡದೆ  ಶ್ರೀ ರಾಮಚಂದ್ರನ  ಪಾದಕ್ಕೆ  ನಮಸ್ಕರಿಸಿದ.   ಅನುಜ  ಲಕ್ಷ್ಮಣ ನಮಸ್ಕರಿಸಿದ್ದು  ನೋಡಿ   ಶ್ರೀ ರಾಮಚಂದ್ರ   ತಲೆ  ಬಗ್ಗಿಸಿ ಎರಡೂ  ಕೈಗಳಿಂದ  ಲಕ್ಷ್ಮಣನಿಗೆ  ಆಶೀವಾ೯ದ   ಮಾಡಲು  ಉದ್ಯುಕ್ತನಾದ!    ಆಗ, ವಿಶ್ವಾಮಿತ್ರ ಮಹಷಿ೯ಗಳು    ಅಮ್ಮಾ,  ಸೀತಾದೇವಿ ಇದೇ  ಸುಸಂಧಭ೯  ಶ್ರೀ ರಾಮಚಂದ್ರ,  ತಲೆಬಾಗಿ  ಲಕ್ಷ್ಮಣನಿಗೆ  ಆಶೀವಾ೯ದ ಮಾಡಲು  ಸಿದ್ಧನಾಗಿದ್ದಾನೆ.  ನೀನು ತಕ್ಷಣ  ಮಾಲೆ  ಹಾಕಿಬಿಡು ಎಂದಾಗ,   ಸೀತಾಮಾತೆ  ಸಂತೋಷದಿಂದ  ತಡಮಾಡದೆ   ಶ್ರೀ ರಾಮಚಂದ್ರನಿಗೆ  ಪುಷ್ಪಮಾಲೆ ಹಾಕಿ ವರಿಸಿದ್ದು  ಸುಂದರಘಟನೆ!!!  


ಶ್ರೀ ರಾಮಚಂದ್ರ, ಸೀತಾದೇವಿ, ಲಕ್ಷ್ಮಣ,   ವನವಾಸದಲ್ಲಿದ್ದಾಗ  ಒಂದು ವಿಚಿತ್ರ  ಘಟನೆ  ಜರುಗಿತು.    ಚಿನ್ನದ  ಜಿಂಕೆ   ಇವರ ಆಶ್ರಮದ  ಮುಂದೆ  ಸುಳಿದಾಡಿದಾಗ   ಸೀತಾಮಾತೆ   ಚಿನ್ನದ ಜಿಂಕೆ  ಬಯಸಿ  ಶ್ರೀ ರಾಮಚಂದ್ರನಿಗೆ   ಅದನ್ನು  ತಂದು ಕೊಡಲು. ಕೇಳಿದಾಗ  ಶ್ರೀ ರಾಮಚಂದ್ರ   ಮಡದಿಯ ಆಸೆ ಪೂರೈಸಲು   ಚಿನ್ನದ  ಜಿಂಕೆ ಬೆನ್ನಟ್ಟಿದ!,   ಮಾರೀಚ  ಚಿನ್ನದ  ಜಿಂಕೆ  ರೂಪದಲ್ಲಿ   ಬಂದಿದ್ದ!  


ಬಹಳ  ಸಮಯದ   ನಂತರ,    "ಹಾ ಸೀತಾ,  ಹಾ ಸೀತಾ,  ಹಾ  ಸೀತಾ. "  ಹಾ ಲಕ್ಷ್ಮಣಾ,    ಎಂಬ  ಧ್ವನಿ.  ಬಂದಿತು.  ಸೀತಾಮಾತೆ ಶ್ರೀ ರಾಮಚಂದ್ರನಿಗೆ ಅಪಾಯ  ಒದಗಿರಬಹುದೆಂದು  ಭಾವಿಸಿ  ಲಕ್ಷ್ಮಣನಿಗೆ  ಶ್ರೀ ರಾಮಚಂದ್ರನನ್ನು   ಕಾಣಲು   ಹೊರಡೆಂದು ಒತ್ತಾಯಿಸಿದಳು    ಲಕ್ಷ್ಮಣ,  ಇದು ದೈತ್ಯರ ಕುತಂತ್ರ  ಎಂದು ಶ್ರೀ ರಾಮಚಂದ್ರನಿಗೆ   ಯಾವ   ಆಪತ್ತು  ಬರಲು  ಅಸಾಧ್ಯ  ಎಂದು ಹೇಳಿದರೂ   ಕೇಳದೇ ಕೋಪದಿಂದ  ಸೀತಾಮಾತೆ   ಲಕ್ಷ್ಮಣನಿಗೆ ಪುನಃ  ಒತ್ತಾಯ ಮಾಡಲು ಅನಿವಾಯ೯ವಾಗಿ  ಆಶ್ರಮದ  ಹೊರಗೆ ಮೂರು ಗೆರೆಗಳನ್ನು ಹಾಕಿ,   ಅದನ್ನು  ದಾಟಬಾರದೆಂದು ಸೀತಾಮಾತೆಗೆ  ತಿಳಿಸಿ  ಶ್ರೀ ರಾಮಚಂದ್ರನನ್ನು ಹುಡುಕಲು   ತೆರಳುವನು.   ಇತ್ತ ರಾವಣ ಬಂದು  ಸೀತಾಮಾತೆಯನ್ನು (ವೇದವತಿ ರೂಪ )  ಅಪಹರಣ ಮಾಡುವನು!    ಮಾರೀಚ ಚಿನ್ನದ.   ಜಿಂಕೆಯ ರೂಪದಲ್ಲಿ   ಬಂದು  ಶ್ರೀ ರಾಮಚಂದ್ರನಿಂದ  ಹತನಾಗುವನು.   ಈ ಘಟನೆಯಿಂದ,   ಹೆಣ್ಣು  ಹಠ ಮಾಡಿದರೇ   ಎಂತಹ  ಅನಾಹುತ   ಜರುಗುವುದೆಂದು ರಾಮಾಯಣ ಸ್ಪಷ್ಟ ಪಡಿಸುತ್ತದೆ!  

    

ಮತ್ತೊಂದು ಘಟನೆಯಲ್ಲಿ  ಜಟಾಯು ಪಕ್ಷಿ ವೃದ್ಧನಾಗಿ  ದೇಹ    ಅಶಕ್ತವಾಗಿ ಅಸಹಾಯಕನಾಗಿದ್ದರೂ   ರಾವಣ,  ಸೀತಾಮಾತೆಯನ್ನು ಅಪಹರಣ ಮಾಡಿದಾಗ ತನಗೆ ರಾವಣನಿಂದ  ಅಪಾಯ  ಕಾದಿದ್ದರೂ,  ಕೊಲ್ಲುತ್ತಾನೆಂದು  ತಿಳಿದಿದ್ದರೂ  ಸೀತಾಮಾತೆಯನ್ನು  ರಕ್ಷಿಸಲು ಸವ೯ ಪ್ರಯತ್ನ ಮಾಡಿದ.   ಜಟಾಯು ಬಲಹೀನನಾಗಿದ್ದರೂ ರಾವಣನನ್ನು ಎದುರಿಸಿದ.   ನಿಜವಾದ   ತೋಳ್ಬಲದಿಂದಲ್ಲ   ಆದರೆ,  ಸಹಾಯ   ಮಾಡಬೇಕೆಂಬ    ಅಭಿಲಾಷೆಯಿತ್ತು.    ಜಟಾಯು ತನ್ನ ಆತ್ಮಸಾಕ್ಷಿಗೆ   ಅಮರನಾದನು  ಜಟಾಯು,  ಸುಸಂಸ್ಕೃತವಲ್ಲದ   ಪಕ್ಷಿಯಾಗಿದ್ದರೂ,  ಅತ್ಯಂತ   ಸಂವೇದನಾಶೀಲನಾಗಿ,  ಆಕಾಶದೆತ್ತರಕ್ಕೆ ಬೆಳೆದ!!!    ಮಾನವನಂತೆ ,   ತನ್ನ ಮೌಲ್ಯಗಳನ್ನು  ಅಭಿವ್ಯಕ್ತಿಗೊಳಿಸಿದ! 


ಸೀತಾಮಾತೆ  ರಾವಣನಿಂದ   ಅಪಹೃತಳಾದಾಗ   ಜಟಾಯುವಿಗೆ ಸೂಕ್ಷ್ಮವಾಗಿ   ಅಪಹರಣದ   ಸುದ್ದಿ  ಶ್ರೀ ರಾಮಚಂದ್ರನಿಗೆ  ತಲುಪಿಸು ಎಂದು   ಹೇಳಿದ್ದಳು. ಜಟಾಯುರಾವಣನಷ್ಟು  ಬಲಿಷ್ಠನಾಗಿಲ್ಲನಾಗಿದ್ದರೂ,   ಸೀತಾಮಾತೆಯ  ರಕ್ಷಣೆಗೆ  ಧಾವಿಸಿದನು.  ಜಟಾಯು,  ಕೇವಲ  ಪಕ್ಷಿಯಾಗಿದ್ದರೂ,  ಸೀತಾಮಾತೆಯ ಅಂತರಂಗ  ಅರಿತು,   ಅವಳ  ಅಸಹಾಯಕ  ಮನಸ್ಥಿತಿ   ಅಥ೯  ಮಾಡಿಕೊಂಡು,  ಮಾನವೀಯತೆ  ವ್ಯಕ್ತಪಡಿಸಿದ.    ಜಟಾಯು ನೈತಿಕ  ಧಮ೯  ಬಿಟ್ಟು  ಬೇರೆ ಯಾವುದರಲ್ಲೂ  ಆಸಕ್ತಿ.  ಹೊಂದಿರಲಿಲ್ಲ!!!   ಸಂದಿಗ್ಧತೆಯ ಪರಿಸ್ಥಿತಿ ಯಲ್ಲಿ     ಹೃದಯದ  ಭಾಷೆಗೆ   ಮೊರೆಹೋಗಿ  ಸತ್ಯದ ಬೆಳಕನ್ನು  ಕಂಡಿದ್ದ!  ಜಟಾಯು ಸೀತಾಮಾತೆಗೆ   ಯಾವ  ಸಂಬಂಧಿಯು  ಆಗದೆ,  ಹತ್ತಿರದ  ರಕ್ತ ಸಂಬಂಧಿಯಂತೆ,  ವತಿ೯ಸಿದ!    ನಿಜವಾದ  ಸಂಬಂಧಗಳು  ಹೃದಯದ   ತುಡಿತ,   ಮಿಡಿತವೇ ಹೊರತು,   ರಕ್ತಸಂಬಂಧದಿಂದಲ್ಲ.   ಜಟಾಯು  ತನ್ನ  ಬುದ್ದಿವಂತಿಕೆಯಿಂದ  ಶ್ರೀ ರಾಮಚಂದ್ರನ  ಲಕ್ಷ್ಮಣನ  ಸ್ನೇಹಕ್ಕೆ   ಹೊತೊರೆದು   ಪರೀಕ್ಷೆಯಲ್ಲಿ ಜಯಶಾಲಿಯಾಗುವನು.  ಜಟಾಯುವಿನ   ವತ೯ನೆಗೆ    ಸಂತೋಷಗೊಂಡು    ಶ್ರೀ ರಾಮಚಂದ್ರ, ಜಟಾಯುನನ್ನು  ಆಲಂಗಿಸಿ   ತನ್ನ ತಂದೆ, ದಶರಥನಿಗೆ   ಮಾಡದ ಅಂತ್ಯ ಸಂಸ್ಕಾರ.  ಜಟಾಯುವಿಗೆ  ಮಾಡಿ    "ಮಯಾ೯ದಾ ಪುರುಷೋತ್ತಮನಾದ”  ಜಟಾಯು    ಶ್ರೀ ರಾಮಚಂದ್ರನಿಗೆ  ಸೀತಾದೇವಿಯ ಅನ್ವೇಷಣೆಯ  ಮಾಗ೯ ತೋರಿಸಿ  ಕೃತಾಥ೯ನಾದ!   


ಶ್ರೀ ರಾಮಚಂದ್ರ  ಮರದ  ಮರೆಯಲ್ಲಿ ನಿಂತು  ಒಂದೇ ಬಾಣದಿಂದ ವಾಲಿಯನ್ನು  ಏಕೆ  ಸಂಹರಿಸಿದನು ಅಂತರಿಕ   ಸಂಗತಿ  ಏನೆಂದರೆ ವಾಲಿ  ಮಗಳಿಗೆ  ಸಮಾನಳಾದ ಸುಗ್ರೀವನ ಪತ್ನಿಯನ್ನು  ಅಪಹರಿಸಿದ್ದ   ಈ ಮಹಾಪರಾಧಕ್ಕೆ   ಶಿಕ್ಷೆ  ನೀಡಲು ದಂಡಿಸಲುಶ್ರೀ ರಾಮಚಂದ್ರ,   ವಾಲಿಯನ್ನು  ಮರದ  ಮರೆಯಿಂದ  ಬಾಣ ಬಿಟ್ಟು  ಸಂಹರಿಸಿದ!   ಶ್ರೀ ರಾಮಚಂದ್ರ  ವಾಲಿಯ  ಎದುರಿಗೆ ಬಂದಿದ್ದರೇ,   ವಾಲಿ ಗೌರವದಿಂದ  ಶ್ರೀ ರಾಮಚಂದ್ರ ಭಗವಂತನ ಅವತಾರ ಎಂದು ಶರಣಾಗುತ್ತಿದ್ದ!    ಶ್ರೀ ರಾಮಚಂದ್ರ, ಶರಣಾಗತರನ್ನು  ಸಂಹರಿಸುವನಲ್ಲ!  


ಸುಗ್ರೀವ  ಸೀತಾಮಾತೆಯನ್ನು  ಹುಡುಕಿಸಿಕೊಟ್ಟರೇ  ಸುಗ್ರೀವನ  ರಾಜ್ಯ ಪುನಃ  ದೊರಕಿಸಿ ಕೊಡುವ    ಶ್ರೀ ರಾಮಚಂದ್ರ ಮತ್ತು ಸುಗ್ರೀವನ ಒಪ್ಪಂದ ವಾಗಿತ್ತು. ವಾಲಿಯನ್ನು   ಸಂಹರಿಸದಿದ್ದರೇ  ಶ್ರೀ ರಾಮಚಂದ್ರನ  ವಚನ ಭಂಗವಾಗುತ್ತಿತ್ತು!    ಈ ಎಲ್ಲಾ  ಕಾರಣಗಳಿಂದ, ಶ್ರೀ ರಾಮಚಂದ್ರ ಮರದ ಮರೆಯಿಂದ,  ವಾಲಿಯನ್ನು. ಸಂಹರಿಸಿದ!!!  


ದಶರಥ,  ಕೈಕೇಯಿಯ  ಎರಡು  ವರಗಳನ್ನು  ಅನಿವಾಯ೯ವಾಗಿ  ಪೂರೈಸಲು,  ಶ್ರೀ ರಾಮಚಂದ್ರನಿಗೆ  14 ವಷ೯.  ವನವಾಸಕ್ಕೆ  ಆದೇಶಮಾಡುವನು.    ಶ್ರೀ ರಾಮಚಂದ್ರ  ತಂದೆಯ  ಆದೇಶದಂತೆ   ವನವಾಸಕ್ಕೆ  ಹೊರಡಲು ಸಿದ್ಧನಾಗುವನು  ತಾಯಿ, ಕೌಸಲ್ಯ   ಪ್ರೀತಿಯಿಂದ  ತನ್ನ ಮಗ ವನವಾಸಕ್ಕೆ  ಹೊರಡಲು ಸಿದ್ಧನಾಗಿರುವುದು  ಕಂಡು   ತಾನೂ ಕಾಡಿಗೆ ಬರುವಳೆಂದು  ಹೇಳುತ್ತಾಳೆ.   ಅಮ್ಮಾ, ನಿನ್ನ  ಕತ೯ವ್ಯ ಧಮ೯  ಪಾಲಿಸಬೇಕು  ವನವಾಸಕ್ಕೆ ಬರಬಾರದೆಂದು ಶ್ರೀ ರಾಮಚಂದ್ರ ಹೇಳುತ್ತಾನೆ.   ನಿಮ್ಮ ತಾಯಿಗೆ  ಕತ೯ವ್ಯ ಮತ್ತು ಧಮ೯  ಉಪದೇಶ ಮಾಡಿದಿರಿ.  ಅದರಂತೆನಾನೂ   ಪತಿಯ ರಕ್ಷಣೆ  ಸೇವೆ ಮಾಡಲು  ವನವಾಸಕ್ಕೆ ಬರುವೆ ಎಂದು ಹೇಳಿ ಶ್ರೀ ರಾಮಚಂದ್ರನ ಜೊತೆಗೆ  ಲಕ್ಷ್ಮಣನ  ಸಹಿತ ಸೀತಾಮಾತೆ   ಹಿಂಬಾಲಿಸುವಳು!    ಕತ೯ವ್ಯ  ಮತ್ತು ಧಮ೯ ಎಲ್ಲರೂ ಪಾಲಿಸಬೇಕೆಂಬ  ಸಂದೇಶ.  ಶ್ರೀ ರಾಮಚಂದ್ರ  ಸಾರುತ್ತಾನೆ.   


ಸೀತಾ ಮಾತೆಯನ್ನು,  ರಾವಣ   ಅಪಹರಣ   ಮಾಡಿದಾಗ   ಶ್ರೀ ರಾಮಚಂದ್ರ ಲಕ್ಷ್ಮಣ    ಸೀತಾಮಾತೆಯನ್ನು   ಹುಡುಕುತ್ತಾ  ಋಷ್ಯಮೂಕ  ಪವ೯ತದ   ತಪ್ಪಲಿಗೆ  ಬರುವರು.    ಆಗ, ಅಲ್ಲಿದ್ದ,  ಹನುಮಂತನೊಡಗಿದ್ದ  ಸುಗ್ರೀವಾದಿಗಳು  ಶ್ರೀ ರಾಮಚಂದ್ರ, ಲಕ್ಷ್ಮಣರನ್ನು ಕಂಡು,   ಇವರು  ವಾಲಿಯ ಕಡೆಯವರೆಂದು ಓಡಲು ಸಿದ್ಧರಾದಾಗ   ಅವರನ್ನು ತಡೆದು  ನಿಲ್ಲಿಸಿ ಹನುಮಂತನು  ಭಿಕ್ಷು  ವೇಷ ಧರಿಸಿ    ಶ್ರೀ ರಾಮಚಂದ್ರನ   ಹತ್ತಿರ   ಬರಲು   ಭಕ್ತಿಯಿಂದ  ಶ್ರೀ ರಾಮಚಂದ್ರನಿಗೆ ನಮಸ್ಕರಿಸಿ ಸ್ತೋತ್ರ  ಮಾಡಿ ತನ್ನ ಹೆಗಲ  ಮೇಲೆ  ಕೂಡಿಸಿಕೊಂಡು  ಬರುವನು.    ಈ ಸನ್ನಿವೇಶದಲ್ಲಿ ಶ್ರೀ ರಾಮಚಂದ್ರ, ಹನುಮಂತನನ್ನು ನೋಡಿ,  ನಗುವನು! 


ಶ್ರೀ ಮಧ್ವಾಚಾಯ೯ರು ತಮ್ಮ ಶ್ಲೋಕದಲ್ಲಿ,   ಸಹಸನ್    ಶಬ್ದ   ಉಪಯೋಗಿಸಿದ್ದಾರೆ   ಇದಕ್ಕೆ ವ್ಯಾಖ್ಯಾನ ಮಾಡುತ್ತಾ ಶ್ರೀ ವಾದಿರಾಜರು ತಮ್ಮ ಭಾವಪ್ರಕಾಶಿಕಾ  ವ್ಯಾಖ್ಯಾನದಲ್ಲಿ   ಹೀಗೆ ತಿಳಿಸಿದ್ದಾರೆ.  ಹೇ, ಹನುಮಂತಾ,    ನೀನು  ಮೂಲರೂಪದಲ್ಲಿ,  ಹೀಗೆಯೇ,   ಸಕಲ ಜೀವರನ್ನು   ನಿನ್ನ ಎಡಹೆಗಲ ಮೇಲೆ  ಮತ್ತು ನನ್ನನ್ನು  ಬಲಹೆಗಲ ಮೇಲೆ  ಕೂಡಿಸಿಕೊಂಡು  , ಒಂದು ದೇಹದಿಂದ   ಮತ್ತೊಂದು ದೇಹಕ್ಕೆ ಈ ಜೀವನನ್ನು  ಪ್ರವೇಶ  ಮಾಡಿಸುತ್ತಿ   ಇದನ್ನೇ  ಹುಟ್ಟು. ಸಾವು ಎಂದು  ಜಗತ್ತಿನಲ್ಲಿ   ಕರೆಯುವರು.  ಹೀಗಾಗಿ ಇದೇನು ಹೊಸದಲ್ಲ  ಎಂಬುದಾಗಿ  ಶ್ರೀ ರಾಮಚಂದ್ರ ನಕ್ಕನು!  ಇದನ್ನುಹಸನ್  ಶಬ್ಧದಿಂದ  ಶ್ರೀ ಮಧ್ವಾಚಾಯ೯ರು  ನಿಣ೯ಯಿಸಿದ್ದಾರೆ ಎಂದು ಶ್ರೀ ವಾದಿರಾಜರು  ವ್ಯಾಖ್ಯಾನಿಸಿದ್ದಾರೆ.   


ಶ್ರೀ ರಾಮಚಂದ್ರ  ಸೀತಾನ್ವೇಷಣೆಗೆ  ಆಂಜನೇಯನಿಗೆ ತನ್ನ ಉಂಗುರ ಸೀತಾಮಾತೆಗೆ  ಗುರುತಿಸಲು   ನೀಡಿ  ದಕ್ಷಿಣ ದಿಕ್ಕಿನಲ್ಲಿ  ಹುಡುಕಲು  ಆಜ್ಞೆ ಮಾಡುವನು.   ಲಂಕೆಯ  ಅಶೋಕವನದಲ್ಲಿ,  ಆಂಜನೇಯ  ಸೀತಾಮಾತೆಯನ್ನು ದಶಿ೯ಸಿ  ಶ್ರೀ ರಾಮಚಂದ್ರನ   ಉಂಗುರ ನೀಡಿ ಸೀತಾಮಾತೆಯಿಂದ   ಚೂಡಾಮಣಿ  ಸ್ವೀಕರಿಸಿ,   ಪುನಃ ಶ್ರೀ ರಾಮಚಂದ್ರನಿಗೆ   ಆತನ   ಪಾದದಡಿಗೆ  ಇಟ್ಟು, ಭಕ್ತಿಯಿಂದ  ನಮಸ್ಕರಿಸುವನು.    ಸೀತಾಮಾತೆಗೆ   ತನ್ನ   ಅಭಯ   ಸೂಚಕವಾಗಿ  ತನ್ನ ಉಂಗುರ  ಶ್ರೀ ರಾಮಚಂದ್ರ ನೀಡಿದನೆಂದು   ಸೀತಾಮಾತೆ ಸಹ  ತನ್ನ ಚೂಡಾಮಣಿ  ನೀಡಿ  ಸದಾ   ಶರಣು  ಎಂಬ ದ್ಯೋತಕ  ವ್ಯಕ್ತಪಡಿಸಿದಳೆಂದು,   ತನ್ನ ತಲೆಯ ಚೂಡಾಮಣಿ  ನೀಡಿದಳೆಂದು   ರಾಮಾಯಣದಲ್ಲಿ    ಈವ೯ರ   ಆಂತಯ೯ದ  ಭಾವನೆಗಳನ್ನು ಅರಿಯಬಹುದು.   ಶ್ರೀ ರಾಮಚಂದ್ರ   ರಾವಣನ  ಘೋರ ಯುಧ್ಧ  ಜರುಗುತ್ತಿರುವಾಗ   ಶ್ರೀ ರಾಮಚಂದ್ರನ ಅಪಾರ  ಯುಧ್ಧ ಕೌಶಲ್ಯ, ಶಕ್ತಿ,  ನೋಡಿ,  ರಾವಣ   ದಿಘ್ಭ್ರಮೆಗೊಂಡು   ಅಸಹಾಯಕನಾಗಿ   ಅಹಿರಾವಣನ  ಸಹಾಯ ಬೇಡುತ್ತಾನೆ.     ಅಹಿರಾವಣ, ಮೋಸದಿಂದ, ವಿಭೀಷಣನ ವೇಷ ಧರಿಸಿ,   ಶ್ರೀ ರಾಮಚಂದ್ರ, ಮತ್ತು ಲಕ್ಷ್ಮಣನನ್ನು ಪಾತಾಳ ಲೋಕಕ್ಕೆ  ಕರೆದೊಯ್ಯುತ್ತಾನೆ.    ಇದನ್ನರಿತ ಹನುಮಂತ  ಪಾತಾಳ ಲೋಕಕ್ಕೆ  ಬಂದು  ರಾಮ ಲಕ್ಷ್ಮಣರನ್ನು  ಹುಡುಕಲು ಪ್ರಾರಂಭಿಸುತ್ತಾನೆ.     ವಿಚಿತ್ರವೇನೆಂದರೆ,  ಐದು ದಿಕ್ಕಿನ  ದೀಪಗಳಲ್ಲಿ   ಅಹಿರಾವಣ ಅಡಗಿರುತ್ತಾನೆ.   ಯಾರು  ಈ ಐದೂ ದೀಪಗಳನ್ನು ಒಮ್ಮೆಲೇ ಆರಿಸುವರೋ,  ,ಆಗ ಅಹಿರಾವಣನ ಪ್ರಾಣ  ಹೋಗುವ ವರವಿರುತ್ತದೆ.   ಹನುಮಂತನು,  ಈ ಕಾರಣಕ್ಕಾಗಿ,   ಐದು ಮುಖವುಳ್ಳವನಾಗಿ,   ವರಾಹ, ಗರುಡ, ಹನುಮಂತ, ನರಸಿಂಹ,  ಹಯಗ್ರೀವ  ರೂಪದಿಂದ   ಒಂದೇ  ಸಾರಿಗೆ ಐದೂ ದೀಪಗಳನ್ನು  ಆರಿಸಿ   ಅಹಿರಾವಣನನ್ನು ಸಂಹರಿಸಿ,   ಶ್ರೀ ರಾಮಚಂದ್ರ, ಲಕ್ಷ್ಮಣನನ್ನು ವಾಪಸ್ಸು ತರುವ   ಅತ್ಯಂತ  ಕುತೂಹಲದ  ಘಟನೆ  ಅರಿಯಬಹುದು. 


ಶ್ರೀ ರಾಮಚಂದ್ರ ಮತ್ತು ರಾವಣನ  ಭೀಕರ ಯುಧ್ಧದ  ಸನ್ನಿವೇಶದಲ್ಲಿ,  14 ದಿವಸ  ಯುಧ್ಧ    ಈವ೯ರೂ ಯುದ್ಧ ಮಾಡಿದರೂ,  ಯಾರೂ ಸೋಲಲು ಸಿದ್ಧರಿರಲಿಲ್ಲ!!!  ರಾವಣ ದೇವತೆಗಳಿಂದ  ರಾಕ್ಷಸರಿಂದ  ಸಾಯಬಾರದೆಂದು ಬ್ರಹ್ಮ ದೇವರಿಂದ ವರ ಪಡೆದಿದ್ದ!    ಮನುಷ್ಯರಿಂದ ಸಾವು ಬರಲಾರದೆಂದು  ಉದಾಸೀನ   ಮಾಡಿದ್ದ.    ಯುಧ್ಧ ನಡೆದಾಗ ಶ್ರೀ ರಾಮಚಂದ್ರ ರಾವಣನ  ಒಂದೊಂದು  ತಲೆ ಕತ್ತರಿಸಿದರೂ  ತಲೆ.  ಬರುತ್ತಿತ್ತು!     ರಾವಣ, ಜಯಾವೇಶದಿಂದ, ಲಕ್ಷ್ಮಿದೇವಿಯನ್ನು  ಯುಧ್ಧದಲ್ಲಿ ಆರಾಧಿಸುತ್ತಿದ್ದ!    ಶ್ರೀ ರಾಮಚಂದ್ರ ಎಷ್ಟು ಬಾಣ ಪ್ರಯೋಗ ಮಾಡಿದರೂ  ರಾವಣನನ್ನು ಸಂಹರಿಸಲು  ಸಾಧ್ಯವಾಗಲಿಲ್ಲ. 


ಕೊನೇ ಕ್ಷಣದಲ್ಲಿ,   ರಾವಣನು  ಲಕ್ಷ್ಮೀ ದೇವಿಯನ್ನು ಆರಾಧಿಸಲು  ಸ್ವಲ್ಪ ಕ್ಷಣ   ಸ್ಮರಣೆ ನಿಲ್ಲಿಸಿದ.   ಶ್ರೀ ರಾಮಚಂದ್ರ  ಆ ಕ್ಷಣದಲ್ಲಿ ಬಾಣ ಪ್ರಯೋಗ ಮಾಡಿ ರಾವಣನನ್ನು   ಸಂಹರಿಸಿದ!  ಮನುಷ್ಯ ರೂಪಿ  ಶ್ರೀ ರಾಮಚಂದ್ರನಿಂದಲೇ    ರಾವಣ  ಹತನಾದ!!!  


ರಾಮಾಯಣದಲ್ಲಿ, ಭರತನ ಭ್ರಾತೃತ್ವ,  ಶಬರಿಯ  ಸ್ವಾಮಿ ಭಕ್ತಿ, ಗುಹಾನ ರಾಜನಿಷ್ಠೆಜಾಂಬವಂತನ  ಜಾಣ್ಮೆ, ವಿಭೀಷಣನ  ಸಹಾಯ,  ಮುಂತಾದ ಘಟನೆಗಳು ಶ್ರೀ ರಾಮಚಂದ್ರನ ಪಟ್ಟಾಭಿಷೇಕ ನೆರವೇರಲು ಪೂರಕವಾಗಿವೆ.

                       


- ಶ್ರೀಧರ  ರಾಯಸಂ

116, 6ನೇ ಮುಖ್ಯ ರಸ್ತೆ,4ನೇ ಬ್ಲಾಕ್, 2 ನೇ ಹಂತ

ಬನಶಂಕರಿ   3ನೇ ಘಟ್ಟ,ಬೆಂಗಳೂರು. 85  

ಫೋ: 98453 27129.   . rayasam 012@gmail.com.


ಲೇಖಕರ ಸಂಕ್ಷಿಪ್ತ ಪರಿಚಯ

ಶ್ರೀಧರ ರಾಯಸಂ ಬಿ.ಎಸ್ಸಿ. (ಸಿಎಂಐಐಬಿ) ಹಿಂದಿ ವಿಶಾರದ. ನಿವೃತ್ತ ಬ್ಯಾಂಕ್ ಅಧಿಕಾರಿ, ಇದುವರೆಗೂ 26 ಕೃತಿಗಳನ್ನು ಬರೆದಿದ್ದಾರೆ. ಆಧ್ಯಾತ್ಮಿಕ, ಸಾಹಿತ್ಯದಲ್ಲಿ ಆಸಕ್ತಿ. ಪ್ರವಾಸ, ಚಾರಿತ್ರಿಕ, ಪ್ರಬಂಧ, ರೂಪಕ, ಕಥೆಗಳು, ಕವನಗಳ ಈ ಪ್ರಕಾರದಲ್ಲೂ ಸಾಹಿತ್ಯ ಕೃಷಿ ಮಾಡಿದ್ದಾರೆ. ದೂರದರ್ಶನ, ಆಕಾಶವಾಣಿಯಲ್ಲಿ, ಸಂದರ್ಶನ, ಚಿಂತನ, ಭಾಷಣ, ಕವನಗಳು, ಪ್ರಸಾರವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ ಜಿಲ್ಲೆಯ ಮಾಜಿ ಗೌರವ ಕಾರ್ಯದರ್ಶಿ, ಬಳ್ಳಾರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ, ಮೈಸೂರು ಬ್ಯಾಂಕ್ ಕೇಂದ್ರ ಸಮಿತಿ ಸದಸ್ಯರು, ಸೋದೆಯಲ್ಲಿ ದಾಸಸಾಹಿತ್ಯ ರಸಪ್ರಶ್ನೆಯನ್ನು ಸತತ 18 ವಷ೯ಗಳಿಂದ ನಡೆಸಿ ಕೊಡುತ್ತಿದ್ದಾರೆ. ಭಾಗ೯ವ ಪ್ರಶಸ್ತಿ,ಕೆಂಪೇ ಗೌಡ ಪ್ರಶಸ್ತಿ (ವಾಡ್೯ ), ದೂರದರ್ಶನ ಪ್ರಶಸ್ತಿ,ಕಲ್ಯಾಣ ಕನಾ೯ಟಕ ಪ್ರಶಸ್ತಿ, ಬ್ಯಾಂಕ್ ಕಥಾ, ಕವನ ಪ್ರಶಸ್ತಿ,ಕಥಾ ರಂಗಂ ಪ್ರಶಸ್ತಿ ಲಭಿಸಿದೆ. ಮಧ್ವ ರಾಮಾಯಣದ ರಸಪ್ರಶ್ನೆ ಕಾರ್ಯಕ್ರಮ ಬೆಂಗಳೂರು, ಭಂಡಾರಕೇರಿ ಮಠದಲ್ಲಿ ನಡೆಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top