ಬದಿಯಡ್ಕ: ಡಿ.23ರಂದು ನಡೆದ ಬನಾರಿ ಶ್ರೀ ಗೋಪಾಲಕೃಷ್ಣ ಕಲಾಸಂಘದ 79ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬನಾರಿ ಮತ್ತು ಶ್ರೀ ವಾಗ್ದೇವಿ ಭಜನಾ ಮಂಡಳಿ ಕಾವು ಅವರ ಸಹಭಾಗಿತ್ವದಲ್ಲಿ ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆಯವರ ಮಾರ್ಗದರ್ಶನದಲ್ಲಿ ಅತ್ಯಂತ ಮನೋಜ್ಞವಾದ, ಭಾವಪೂರ್ಣವಾದ ಭಜನಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ರಾಮಕೃಷ್ಣ ಕಾಟುಕುಕ್ಕೆಯವರನ್ನು ಸಂಘದ ಮತ್ತು ಭಜನಾ ಮಂಡಳಿಯ ಪರವಾಗಿ ಶಾಲು ಹೊದಿಸಿ, ಫಲ ಸಮರ್ಪಣೆಯೊಂದಿಗೆ ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ಡಾ. ರಮಾನಂದ ಬನಾರಿಯವರು ಉಪಸ್ಥಿತರಿದ್ದು ಅತ್ಯದ್ಭುತವಾದಂತಹ ಭಜನಾ ಕಾರ್ಯಕ್ರಮವೊಂದನ್ನು ಕೇಳುವ ಸುಯೋಗ ದೇಲಂಪಾಡಿಯ ಸಾಮಾಜಿಕರಿಗೆಲ್ಲಾ ಪ್ರಾಪ್ತವಾದುದಕ್ಕೆ ಧನ್ಯವಾದಗಳನ್ನು ಹೇಳುತ್ತಾ ಕಾಟುಕುಕ್ಕೆಯವರ ಸಾಧನೆಯನ್ನು ಪ್ರಶಂಸಿಸಿದರು. ಗೌರವವನ್ನು ಸ್ವೀಕರಿಸಿ ಮಾತಾಡಿದ ರಾಮಕೃಷ್ಣ ಕಾಟುಕುಕ್ಕೆಯವರು ಭಕ್ತಿಯೇ ಶಕ್ತಿಯಾಗಿರುವ ವಿಭಜನೆಯಿಲ್ಲದ ಭಜನೆಯ ವೈಶಿಷ್ಟ್ಯವನ್ನು ಉಲ್ಲೇಖಿಸಿ ಶುಭವನ್ನು ಹಾರೈಸಿದರು.
ಚಂದ್ರಶೇಖರ ಏತಡ್ಕ ಅವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಸದಸ್ಯೆ ಶ್ರೀಮತಿ ಪೂರ್ಣಿಮಾ ಬನಾರಿ ಸ್ವಾಗತಿಸಿದರು. ಶ್ರೀವಾಗ್ದೇವಿ ಭಜನಾ ಮಂಡಳಿ ಕಾವು ಇದರ ಸದಸ್ಯೆ ಶ್ರೀಮತಿ ಗೀತಾ ಮನಮೋಹನ ಅವರು ಧನ್ಯವಾದ ಸರ್ಮಿಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ