ರಾಯಚೂರು: ಸಿಂಧನೂರು ನಗರದಲ್ಲಿ ಸ್ಥಾಪನೆಯಾದ "ಪುನೀತ್ ಪುಣ್ಯಾಶ್ರಮ"ಕ್ಕೆ ಇಂದು ಚಲನಚಿತ್ರ ನಟರಾದ ಸೈಲ್ ಶಿವು ಮತ್ತು ಜೂನಿಯರ್ ವಿಷ್ಣುವರ್ಧನ ಎಂದೇ ಹೆಸರಾದ ನಾಗಬಸಯ್ಯ ಸ್ವಾಮಿ ಮಳಿಮಠರವರು ಆಶ್ರಮಕ್ಕೆ ಭೇಟಿ ನೀಡಿ, ಆಶ್ರಮದಲ್ಲಿರುವ ವಯೋವೃದ್ಧರು, ಅನಾಥರು, ಮಹಿಳೆಯರು, ಮಾನಸಿಕವಾಗಿರುವ ಜನರ ಸೇವೆ ಮಾಡುತ್ತಿರುವ ಪಂಪಯ್ಯ ಸ್ವಾಮಿರವರ ಕಾರ್ಯವನ್ನು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಆಶ್ರಮದಲ್ಲಿರುವ ಅನಾಥರಿಗೆ ಕಲಾವಿದರು ಬಾಳೆಹಣ್ಣು, ಬ್ರೆಡ್ ವಿತರಿಸಿದರು. ಆಶ್ರಮದ ಪರವಾಗಿ ಕಲಾವಿದರಿಗೆ ಪಂಪಯ್ಯ ಸ್ವಾಮಿ ಸನ್ಮಾನಿದರು. ಪತ್ರಕರ್ತ ಎಸ್.ಎನ್.ವೀರೇಶ, ಮೌನೇಶ ಬುದ್ದಿನ್ನಿ ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ