ಮಂಗಳೂರು: ಇತ್ತೀಚೆಗೆ ದಾವಣಗೆರೆಯಲ್ಲಿ ನವೆಂಬರ್ 17 ರಿಂದ 27ರ ವರೆಗೆ ನಡೆದ ಗೃಹರಕ್ಷಕಿಯರ ಪುನರ್ ಮನನ ತರಬೇತಿ ಶಿಬಿರದಲ್ಲಿ ಉಳ್ಳಾಲ ಘಟಕದ ಗೃಹರಕ್ಷಕಿ ಕುಮಾರಿ ಮೆರೀಟಾ ಡಿ ಸೋಜಾ ಅವರು ಬೆಳ್ಳಿ ಪದಕ ಪಡೆದಿರುತ್ತಾರೆ.
ರಾಜ್ಯದ ಎಲ್ಲಾ 31 ಜಿಲ್ಲೆಯ 130 ಗೃಹರಕ್ಷಕಿಯರು ಈ ತರಬೇತಿಯಲ್ಲಿ ಭಾಗವಹಿಸಿರುತ್ತಾರೆ ಬೆಳ್ಳಿ ಪದಕ ಗೆದ್ದು ದ.ಕ ಜಿಲ್ಲೆಯ ಗೃಹರಕ್ಷದಳದ ಖ್ಯಾತಿಯನ್ನು ಹೆಚ್ಚಿಸಿದ ಕುಮಾರಿ ಮೆರಿಟಾ ರವರಿಗೆ ದ.ಕ ಜಿಲ್ಲಾ ಸಮಾದೇಷ್ಟ ಡಾ ಮುರಲಿ ಮೋಹನ್ ಚೂಂತಾರು ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದರು ಮತ್ತು ನಗದು ಬಹುಮಾನಕ್ಕಾಗಿ ಕೇಂದ್ರ ಕಛೇರಿಗೆ ಶಿಫಾರಸ್ಸು ಮಾಡಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ